ಬಿಎಸ್-6 ಎಂಜಿನ್ ಪ್ರೇರಿತ ಬಜಾಜ್ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಹೆಚ್ಚಳ

ಬಜಾಜ್ ಆಟೋ ಕಂಪನಿಯು ತನ್ನ ಎಲ್ಲಾ ದ್ವಿಚಕ್ರ ವಾಹನ ಮಾದರಿಗಳನ್ನು ಹೊಸ ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಿಸಿ ಬಿಡುಗಡೆಗೊಳಿಸಿದ್ದು, ಇದೀಗ ಹೊಸ ಬೈಕ್‌ಗಳ ಬೆಲೆಯಲ್ಲಿ ಎರಡನೇ ಬಾರಿಗೆ ಬೆಲೆ ಏರಿಕೆ ಮಾಡಿದೆ.

ಬಿಎಸ್-6 ಎಂಜಿನ್ ಪ್ರೇರಿತ ಬಜಾಜ್ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳ

ಬಜಾಜ್ ಕಂಪನಿಯು ಬಿಡುಗಡೆ ಮಾಡಿರುವ ಹೊಸ ದರ ಪಟ್ಟಿಯಲ್ಲಿ ಬಹುತೇಕ ದ್ವಿಚಕ್ರ ವಾಹನಗಳು ಬೆಲೆ ಏರಿಕೆ ಪಡೆದುಕೊಂಡಿದ್ದು, ಹೊಸ ಬೈಕ್‌ಗಳ ಬೆಲೆಯಲ್ಲಿ ಇದು ಎರಡನೇ ಬಾರಿಗೆ ಹೆಚ್ಚಳ ಮಾಡಲಾದ ಬೆಲೆಯಾಗಿದೆ. ಹೊಸ ಬೈಕ್ ಬೆಲೆ ಏರಿಕೆಗೆ ಯಾವುದೇ ಕಾರಣ ನೀಡಿಲ್ಲವಾದರೂ ಸದ್ಯದ ಪರಿಸ್ಥಿತಿಯಲ್ಲಿ ಉತ್ಪಾದನಾ ಪ್ರಕ್ರಿಯೆಯ ವೆಚ್ಚವು ಅಧಿಕವಾಗಿರುವುದೇ ಬೆಲೆ ಏರಿಕೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಬಹುದು.

ಬಿಎಸ್-6 ಎಂಜಿನ್ ಪ್ರೇರಿತ ಬಜಾಜ್ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳ

ಹೊಸ ದರ ಪಟ್ಟಿಯಲ್ಲಿ ರೂ.998ರಿಂದ ರೂ.999 ಬೆಲೆ ಏರಿಕೆ ಪಡೆದುಕೊಂಡಿದ್ದು, ಬೆಲೆ ಹೆಚ್ಚಳ ನಂತರ ಪಲ್ಸರ್ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 91,387 ಮತ್ತು ಹೈ ಎಂಡ್ ಆವೃತ್ತಿಯ ಬೆಲೆಯು ರೂ.99,566 ಬೆಲೆ ಪಡೆದುಕೊಂಡಿದೆ.

ಬಿಎಸ್-6 ಎಂಜಿನ್ ಪ್ರೇರಿತ ಬಜಾಜ್ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳ

ಎಂಟ್ರಿ ಲೆವಲ್ ಪ್ಲಾಟಿನಾ 100 ಸರಣಿಯ ಬೈಕ್ ಬೆಲೆಯಲ್ಲೂ ಹೆಚ್ಚಳವಾಗಿದ್ದು, ಪ್ಲಾಟಿನಾ ಸರಣಿಯ ಬೈಕ್‌ಗಳ ಬೆಲೆಯನ್ನು ಆರಂಭಿಕವಾಗಿ ರೂ.1,203ಗಳಿಂದ ರೂ.2,432 ಗಳವರೆಗೆ ಏರಿಕೆ ಮಾಡಲಾಗಿದೆ. ಪ್ಲಾಟಿನಾ 100 ಸಿಸಿ ಬೈಕ್‌ಗಳಲ್ಲಿ ಪ್ಲಾಟಿನಾ ಕೆಎಸ್ ಅಲಾಯ್, ಪ್ಲಾಟಿನಾ ಇಎಸ್ ಅಲಾಯ್ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಇಎಸ್ ಅಲಾಯ್ ಡಿಸ್ಕ್ ಬೈಕ್ ಗಳು ಸೇರಿವೆ.

ಬಿಎಸ್-6 ಎಂಜಿನ್ ಪ್ರೇರಿತ ಬಜಾಜ್ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳ

ಹೊಸ ದರ ಪಟ್ಟಿಯಲ್ಲಿ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಮಾದರಿ ಕೂಡಾ ದುಬಾರಿ ಬೆಲೆ ಪಡೆದುಕೊಂಡಿದ್ದು, ರೂ.1 ಸಾವಿರ ತನಕ ಹೆಚ್ಚಿಸಲಾಗಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಗೊಂಡಿದ್ದ ಬಿಎಸ್-6 ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕ್ ಮಾದರಿಯು ರೂ.93,677 ಬೆಲೆಯಲ್ಲಿ ಬಿಡುಗಡೆಯಾಗಿತ್ತು.

ಬಿಎಸ್-6 ಎಂಜಿನ್ ಪ್ರೇರಿತ ಬಜಾಜ್ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳ

ಏರಿಕೆಯಾಗಿರುವ ಹೊಸ ದರ ಪಟ್ಟಿಯಲ್ಲಿ ಬಿಎಸ್-6 ಬಜಾಜ್ ಪಲ್ಸರ್ 125 ಮಾದರಿಯು ಕೂಡಾ ಸೇರ್ಪಡೆಯಾಗಿದೆ. ಸರಿಸುಮಾರು ರೂ. 1 ಸಾವಿರದಷ್ಟು ಹೆಚ್ಚಳ ಮಾಡಲಾಗಿದ್ದು, ಬಿಎಸ್-6 ಪಲ್ಸರ್ 125 ಬೈಕಿನ ಡ್ರಮ್ ಬ್ರೆಕ್ ಆವೃತ್ತಿಯ ಬೆಲೆಯು ರೂ.70,963 ಗಳಾಗಿದ್ದರೆ, ಸ್ಪ್ಲೀಟ್ ಸೀಟ್ ಮಾದರಿಯ ಬೆಲೆಯು 79,059ಗಳಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಬಜಾಜ್ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳ

ಬಜಾಜ್ ಪಲ್ಸರ್ ಸರಣಿಯಲ್ಲಿ ಜನಪ್ರಿಯವಾಗಿರುವ ಎನ್ಎಸ್200 ಮತ್ತ ಆರ್‍ಎಸ್200 ಕೂಡಾ ದುಬಾರಿ ಬೆಲೆ ಪಡೆದುಕೊಂಡಿದ್ದು, ಹೊಸ ಬೈಕಿನ ಬೆಲೆಯನ್ನು ಬಿಎಸ್-6 ಎಂಜಿನ್ ನಂತರವೇ ಇದೀಗ 2ನೇ ಬಾರಿಗೆ ರೂ. 1 ಸಾವಿರ ಹೆಚ್ಚಳ ಮಾಡಲಾಗಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಬಿಎಸ್-6 ಎಂಜಿನ್ ಪ್ರೇರಿತ ಬಜಾಜ್ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳ

ಇನ್ನು ಕರೋನಾ ಸಂಕಷ್ಟದ ಪರಿಸ್ಥಿತಿಯಲ್ಲೂ ಕೇಂದ್ರ ಸರ್ಕಾರದ ಹೊಸ ಸುರಕ್ಷಾ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ವಾಹನ ಮಾರಾಟಕ್ಕೆ ಚಾಲನೆ ನೀಡಿರುವ ಆಟೋ ಕಂಪನಿಗಳು ವೈರಸ್ ಹರಡದಂತೆ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಂಡಿವೆ.

ಬಿಎಸ್-6 ಎಂಜಿನ್ ಪ್ರೇರಿತ ಬಜಾಜ್ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳ

ಬಜಾಜ್ ಆಟೋ ಕಂಪನಿಯು ದೇಶದ ವಿವಿಧಡೆ ಹರಡಿಕೊಂಡಿರುವ ಸಾವಿರಾರು ವಾಹನ ಮಾರಾಟ ಕೇಂದ್ರಗಳನ್ನು ಹೊಸ ಸುರಕ್ಷಾ ಮಾರ್ಗಸೂಚಿಯಂತೆ ಪುನಾರಂಭಿಸಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಗರಿಷ್ಟ ಪ್ರಮಾಣದ ಪ್ರೊಟೋಕಾಲ್ ನಿಯಮಗಳನ್ನು ಜಾರಿಗೊಳಿಸಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಬಿಎಸ್-6 ಎಂಜಿನ್ ಪ್ರೇರಿತ ಬಜಾಜ್ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳ

ಜೊತೆಗೆ ಮಾರಾಟ ಮಳಿಗೆಗಳಿಗೆ ಗ್ರಾಹಕರ ಆಗಮನ ತಡೆಯುವುದಕ್ಕಾಗಿ ಕಂಪನಿಯೇ ಆನ್‌ಲೈನ್ ಮೂಲಕವೇ ಪತ್ರ ವ್ಯವಹಾರ ಮುಗಿಸಿ ಅಂತಿಮವಾಗಿ ಬೈಕ್ ಉತ್ಪನ್ನಗಳನ್ನು ಗ್ರಾಹಕರ ಬಾಗಿಲುಗಳಿಗೆ ತಲುಪಿಸುತ್ತಿದ್ದು, ವಾಹನಗಳ ವಿತರಣೆ ಸಂದರ್ಭದಲ್ಲೂ ನಂಜು ನಿರೋಧಕ ರಸಾಯನಿಕಗಳಿಂದ ಸ್ವಚ್ಚಗೊಳಿಸಿದ ನಂತರವೇ ಗ್ರಾಹಕರಿಗೆ ಹಸ್ತಾಂತರಿಸುತ್ತಿದೆ.

Most Read Articles

Kannada
English summary
Bajaj Announces Second Price Hike For Select Models After BS6 Update. Read in Kannada.
Story first published: Tuesday, July 14, 2020, 20:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X