ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಪಲ್ಸರ್ 180ಎಫ್, 220ಎಫ್ ಬೈಕ್‍‍ಗಳು

ಬಜಾಜ್ ಆಟೋ ಕಂಪನಿಯ ಬಹುನೀರಿಕ್ಷಿತ ಬಿಎಸ್-6 ಪಲ್ಸರ್ 220ಎಫ್ ಮತ್ತು ಪಲ್ಸರ್ 180ಎಫ್ ಬೈಕ್‍‍ಗಳು ವಿವರಗಳು ಬಹಿರಂಗವಾಗಿದೆ. ಹೊಸ ಬಿಎಸ್-6 ಪಲ್ಸರ್ 220ಎಫ್ ಬೈಕಿನ ಪವರ್ ಮತ್ತು ಕಾರ್ಯಕ್ಷಮತೆಯಲ್ಲಿ ಅಂಕಿ ಅಂಶಗಳಲ್ಲಿ ಸಣ್ಣ ಬದಲಾವಣೆಗಳಾಗಿದೆ. ಆದರೆ 180ಎಫ್ ಮಾದರಿಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಪಲ್ಸರ್ 180ಎಫ್, 220ಎಫ್ ಬೈಕ್‍‍ಗಳು

ಬಜಾಜ್ ಪಲ್ಸರ್ 180ಎಫ್ ಬೈಕಿನಲ್ಲಿ ಬಿಎಸ್-6 ಪ್ರೇರಿತ 178.66 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 17 ಬಿ‍‍ಹೆಚ್‍ಪಿ ಪವರ್ ಮತ್ತು 14 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಪಲ್ಸರ್ 180ಎಫ್ ಮಾದರಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಪಲ್ಸರ್ 180ಎಫ್, 220ಎಫ್ ಬೈಕ್‍‍ಗಳು

ಈ ಬೈಕಿನ ವ್ಹೀಲ್‍‍ಬೇಸ್ ಉದ್ದದಲ್ಲಿ 5 ಎಂಎಂ ಹೆಚ್ಚಳವಾಗಿರಲಿದೆ. ಆದರೆ ರೈಡಿಂಗ್ ಡೈನಾಮಿಕ್ಸ್ ನಲ್ಲಿ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಈ ಬೈಕಿನ ವಿನ್ಯಾಸದ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಪಲ್ಸರ್ 180ಎಫ್, 220ಎಫ್ ಬೈಕ್‍‍ಗಳು

ಬಜಾಜ್ ಪಲ್ಸರ್ 200ಎಫ್ ಬೈಕಿನಲ್ಲಿ ಬಿಎಸ್-6 ಪ್ರೇರಿತ 220ಸಿಸಿ ಆಯಿಲ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 20.39 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಹಿಂದಿನ ಬಿಎಸ್-4 ಪಲ್ಸರ್ 220ಎಫ್ ಬೈಕಿನ ಎಂಜಿನ್ 21 ಬಿ‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಪಲ್ಸರ್ 180ಎಫ್, 220ಎಫ್ ಬೈಕ್‍‍ಗಳು

ಆದರೆ ಟಾರ್ಕ್ ಅಂಕಿ ಅಂಶದಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಹೊಸ ಬಿಎಸ್-6 220ಎ‍ಫ್ ಎಂಜಿನ್ 5 ಸ್ಫೀಡ್ ಗೇರ್‍‍ಬಾಕ್ಸ್ ಅನ್ನು ಹೊಂದಿದೆ. ಪಲ್ಸರ್ 220 ಎಫ್ ಬೈಕ್‍‍ನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಪಲ್ಸರ್ 180ಎಫ್, 220ಎಫ್ ಬೈಕ್‍‍ಗಳು

ಹೊಸ ಬಿ‍ಎಸ್-6 ಪ್ರೇರಿತ ಬಜಾಜ್ ಪಲ್ಸರ್ 180ಎಫ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.07 ಲಕ್ಷಗಳಾಗಿದೆ. ಕಳೆದ ಬಿಎಸ್-4 ಪಲ್ಸರ್ 180ಎಫ್ ಬೈಕಿನ ಬೆಲೆಗಿಂತ ರೂ.11,437 ಹೆಚ್ಚಾಗಿದೆ. ಇನ್ನು ಬಿಎಸ್-6 ಪಲ್ಸರ್ 220ಎಫ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.16 ಲಕ್ಷಗಳಾಗಿದೆ. ಕಳೆದ ಬಿಎಸ್-4 ಪಲ್ಸರ್ 220ಎಫ್ ಮಾದರಿಯ ಬೆಲೆಗಿಂತ ರೂ.960 ಹೆಚ್ಚಿಸಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಪಲ್ಸರ್ 180ಎಫ್, 220ಎಫ್ ಬೈಕ್‍‍ಗಳು

ಅಲ್ಲದೇ ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್ ಬಿಡುಗಡೆಯಾಗುವ ಮೊದಲೇ ಬಜಾಜ್ ಡೀಲರ್‍‍ಗಳ ಬಳಿ ತಲುಪಿದೆ. ಹೊಸ ಪಲ್ಸರ್ ಎನ್‍ಎಸ್ 200 ಬೈಕಿನ ಬೆಲೆಯು ಪುಣೆ ಎಕ್ಸ್ ಶೋರೂಂ ಪ್ರಕಾರ ರೂ.1.24 ಲಕ್ಷಗಳಾಗಿದೆ. ಹೊಸ ಪಲ್ಸರ್ ಎನ್‍ಎನ್ 200 ಬೈಕಿನ ಬುಕ್ಕಿಂಗ್ ಪ್ರಾರಂಭವಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಪಲ್ಸರ್ 180ಎಫ್, 220ಎಫ್ ಬೈಕ್‍‍ಗಳು

ಬಿಎಸ್- 6 ಪಲ್ಸರ್ ಎನ್‍ಎಸ್ 200 ಬೈಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಪಲ್ಸರ್ ಎನ್‍ಎಸ್ 200 ಬೈಕ್ ಆವೃತ್ತಿಯು 199.5 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ 24.5 ಬಿ‍ಹೆಚ್‍‍ಪಿ ಪವರ್ ಮತ್ತು 18.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಪಲ್ಸರ್ 180ಎಫ್, 220ಎಫ್ ಬೈಕ್‍‍ಗಳು

ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಪಲ್ಸರ್ 180ಎಫ್ ಬೈಕ್ ಅನ್ನು ನವೀಕರಿಸಿದರು ಎಂಜಿನ್ ಅದೇ ಪವರ್ ಅನ್ನು ಹೊಂದಿದೆ. ಇನ್ನು 220ಎಫ್ ಬೈಕಿನಲ್ಲಿ ಕೇವಲ 0.61 ಬಿ‍‍ಹೆಚ್‍ಪಿ ಪವರ್ ಕಡಿಮೆಯಾಗಿದೆ. ಈ ಎರಡೂ ಬೈಕ್‍‍ಗಳು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದರೂ ಉತ್ತಮ ಪವರ್ ಅನ್ನು ಹೊಂದಿರುವುದರಿಂದ ಹೆಚ್ಚಿನ ಯುವಕರನ್ನು ಸೆಳೆಯಬಹುದು. ಮುಂದಿನ ವಾರಗಳಲ್ಲಿ ಈ ಬಿಎಸ್-6 ಮಾದರಿಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Bajaj Pulsar 180F And Pulsar 220F BS6 Variant Specifications Revealed. Read in Kananda.
Story first published: Friday, February 14, 2020, 19:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X