ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍‍ಎಸ್ 200

ಬಜಾಜ್ ಆಟೋ ಕಂಪನಿಯು ತನ್ನ ಬಿಎಸ್-6 ಸಿಟಿ ಮತ್ತು ಪ್ಲಾಟಿನ ಬೈಕ್‍‍ಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಬಜಾಜ್ ಆಟೋ ಕಂಪನಿಯು ತನ್ನ ಜನಪ್ರಿಯ ಮಾದರಿಯಾದ ಪಲ್ಸರ್ ಎನ್‍‍ಎಸ್ 200 ಬೈಕ್ ಅನ್ನು ಬಿ‍ಎಸ್-6 ಆವೃತ್ತಿಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍‍ಎಸ್ 200

ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್ ಬಿಡುಗಡೆಯಾಗುವ ಮೊದಲೇ ಬಜಾಜ್ ಡೀಲರ್‍‍ಗಳ ಬಳಿ ತಲುಪಿದೆ. ಹೊಸ ಪಲ್ಸರ್ ಎನ್‍ಎಸ್ 200 ಬೈಕಿನ ಬೆಲೆಯು ಪುಣೆ ಎಕ್ಸ್ ಶೋರೂಂ ಪ್ರಕಾರ ರೂ.1.24 ಲಕ್ಷಗಳಾಗಿದೆ. ಹೊಸ ಪಲ್ಸರ್ ಎನ್‍ಎನ್ 200 ಬೈಕಿನ ಬುಕ್ಕಿಂಗ್ ಪ್ರಾರಂಭವಾಗಿದೆ. ಈ ಬೈಕ್‍‍ಗಾಗಿ ರೂ.1,000 ದಿಂದ ರೂ,5,000ರವರೆಗೆ ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ. ಈ ಬುಕ್ಕಿಂಗ್ ದರವು ಡೀಲರ್‍‍ಗಳ ಮೇಲೆ ಅವಲಂಬಿಸಿದೆ.

ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍‍ಎಸ್ 200

ಹೊಸ ಬಜಾಜ್ ಪಲ್ಸರ್ ಎನ್‍ಎಸ್ 200 ಬೈಕ್ ಯಾವುದೇ ಕಾಸ್ಮೆಟಿಕ್ ನವೀಕರಣಗಳನ್ನು ಮಾಡಲಾಗಿಲ್ಲ. ಡೀಲರ್‍‍ಗಳ ಬಳಿ ತಲುಪಿರುವ ಬೈಕ್ ಬಿಳಿ ಮತ್ತು ಬೂದು ಬಣ್ಣವನ್ನು ಹೊಂದಿದೆ. ಹೊಸ ಬೈಕಿನ ಸ್ಪೈ ಚಿತ್ರವನ್ನು ಝಿಗ್‍ವ್ಹೀಲ್ ಬಹಿರಂಗಪಡಿಸಿದೆ. ಈ ಹೊಸ ಬೈಕ್ ಹಳದಿ, ಕೆಂಪು ಮತ್ತು ಕಪ್ಪು ಬಣ್ಣಗಳ ಆಯ್ಕೆಯನ್ನು ಹೊಂದಿರಬಹುದು. ಸೆಮಿ ಡಿಜೆಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಕೂಡ ಬದಲಾವಣೆ ಮಾಡಲಾಗಿಲ್ಲ.

ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍‍ಎಸ್ 200

ಬಿಎಸ್- 6 ಪಲ್ಸರ್ ಎನ್‍ಎಸ್ 200 ಬೈಕ್ ಫ್ಯೂಯಲ್ ಇಂಜೆಕ್ಷನ್ ನವೀಕರಿಸಲಾಗಿದೆ. ಕೊಲಂಬಿಯದಲ್ಲಿ ಮಾರಾಟವಾಗುತ್ತಿರುವ ಪಲ್ಸರ್ ಎನ್‍ಎಸ್ 200 ಬೈಕ್ ಆವೃತ್ತಿಯು ಎಂಜಿನ್ 24.5 ಬಿ‍ಹೆಚ್‍‍ಪಿ ಪವರ್ ಮತ್ತು 18.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍‍ಎಸ್ 200

ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಬಿಎಸ್-6 ಪಲ್ಸರ್ ಎನ್‍ಎಸ್‍200‍ ಬೈಕ್ ಕೊಲಂಬಿಯ ಆವೃತ್ತಿಗಿಂತ ಪವರ್ ಕಡಿಮೆ ಉತ್ಪಾದಿಸಬಹುದು.

ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍‍ಎಸ್ 200

ಇನ್ನೂ ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಪಲ್ಸರ್ ಎನ್ಎಸ್ 200 ಬೈಕ್ 23.5 ಬಿ‍‍ಹೆಚ್‍ಪಿ ಪವರ್ ಮತ್ತು 18.3 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍‍ಎಸ್ 200

ಹೊಸ ಪಲ್ಸರ್ ಎನ್‍ಎಸ್ ಬೈಕಿನಲ್ಲಿ ಟಿಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಗ್ಯಾಸ್ ಚಾರ್ಜ್ಡ್ ಮೊನೊಶಾಕ್‍‍‍ನೊಂದಿಗೆ ಅದೇ ಟ್ವಿನ್-ಸ್ಪಾರ್ ಪೆರಿಮೆಟರ್ ಫ್ರೇಮ್ ಅನ್ನು ಹೊಂದಿದೆ. ಹಿಂದಿನ ಮಾದರಿಯಂತೆ ಬ್ರೇಕಿಂಗ್ ಕೂಡ ಎರಡು ಟಯರ್‍‍ಗಳಲ್ಲಿ ಡಿಸ್ಕ್ ಬ್ರೇಕ್ ಮತ್ತು ಸಿಂಗಲ್ ಚಾನೆಲ್ ಎಬಿ‍ಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍‍ಎಸ್ 200

ಹೊಸ ಪಲ್ಸರ್ ಎನ್‍ಎಸ್ 200 ಬೈಕ್ ಅನ್ನು ಈ ತಿಂಗಳ ಕೊನೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಬಿಎಸ್-6 ಪಲ್ಸರ್ ಎನ್ಸ್‍ಎಸ್ 200 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಕ ಅಪಾಚೆ ಆರ್‌ಟಿಆರ್ 200 4 ವಿ, ಯಮಹಾ ಎಫ್‌ಜೆಡ್ 25 ಮತ್ತು ಸುಜುಕಿ ಜಿಕ್ಸೆ 250 ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍‍ಎಸ್ 200

ಬಜಾಜ್ ಪಲ್ಸರ್ ಸರಣಿಯ ಬೈಕ್‍‍ಗಳ ಜನಪ್ರಿಯತೆ ಕಳೆದುಕೊಂಡಿಲ್ಲ. ಹೆಚ್ಚಿನ ಯುವಕರಿಗೆ ಇಂದಿಗೂ ಪಲ್ಸರ್ ಬೈಕ್‍‍ಗಳ ಕ್ರೇಜ್ ಇದೆ. ಆದರೆ ಹೊಸ ಪಲ್ಸರ್ ಎನ್ಎಸ್ 200 ಬೈಕ್ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಇರುವುದು ಪಲ್ಸರ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

Most Read Articles

Kannada
English summary
BS6 Bajaj Pulsar 200 NS FI launch price Rs 11k more expensive than BS4. Read in Kannada.
Story first published: Monday, February 10, 2020, 15:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X