ಹೊಸ ಬಣ್ಣಗಳ ಆಯ್ಕೆಯಲ್ಲಿ ಡೀಲರ್ ಬಳಿ ತಲುಪಿದ ಬಜಾಜ್ ಪಲ್ಸರ್ ಬೈಕುಗಳು

ಬಜಾಜ್ ಆಟೋ ಕಂಪನಿಯು ಇತ್ತೀಚೆಗೆ ತಮ್ಮ ಜನಪ್ರಿಯ ಮಿಡ್ ಸೆಗ್ಮೆಂಟ್ ಬೈಕುಗಳಾದ ಪಲ್ಸರ್ ಎನ್ಎಸ್ ಮತ್ತುಆರ್‍ಎಸ್ ಸರಣಿಗಳ ಮಾದರಿಗಳನ್ನು ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಪಲ್ಸರ್ ಎನ್ಎಸ್ ಮತ್ತು ಆರ್‍ಎಸ್ ಬೈಕುಗಳು ಹೊಸ ಬಣ್ಣಗಳ ಆಯ್ಕೆಯನ್ನು ಮತ್ತು ಬಾಡಿ ಗ್ರಾಫಿಕ್ಸ್‌ ರಿಫ್ರೆಶ್‌ಮೆಂಟ್‌ ಅನ್ನು ಪಡೆದುಕೊಂಡಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಡೀಲರ್ ಬಳಿ ತಲುಪಿದ ಬಜಾಜ್ ಪಲ್ಸರ್ ಬೈಕುಗಳು

ಇದರಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಹೊಂದಿರುವ ಪಲ್ಸರ್ ಆರ್‍ಎಸ್ 200 ಬೆಲೆ ರೂ.1,52,179 ಗಳಾಗಿದ್ದರೆ, ಎನ್ಎಸ್ 200 ಬೈಕಿನ ಬೆಲೆಯು ರೂ.1,31,219 ಗಳಾಗಿದೆ. ಇನ್ನು ಪಲ್ಸರ್ ಎನ್ಎಸ್ 160 ಬೈಕಿನ ಬೆಲೆಯು ರೂ.1,08,589 ಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಹೊಸ ಪಲ್ಸರ್ ಎನ್ಎಸ್ ಮತ್ತು ಆರ್ಎಸ್ ಬೈಕುಗಳು ಡೀಲರು ಬಳಿ ತಲುಪಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಡೀಲರ್ ಬಳಿ ತಲುಪಿದ ಬಜಾಜ್ ಪಲ್ಸರ್ ಬೈಕುಗಳು

ಪಲ್ಸರ್ 200 ಮತ್ತು 160 ಎನ್ಎಸ್ ಸರಣಿಯ ಬೈಕುಗಳು ರ್ಂಟ್ ರೆಡ್ (ಮ್ಯಾಟ್ ಫಿನಿಶ್), ಮೆಟಾಲಿಕ್ ಪರ್ಲ್ ವೈಟ್, ಪ್ಯೂಟರ್ ಗ್ರೇ ಮತ್ತು ಪ್ಲಾಸ್ಮಾ ಸ್ಯಾಟಿನ್ ಬ್ಲೂ ಎಂಬ ನಾಲ್ಕು ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ. ಪಲ್ಸರ್ ಎನ್ಎಸ್ 200 ಬೈಕ್ ಬರ್ನ್ಟ್ ರೆಡ್ (ಮ್ಯಾಟ್ ಫಿನಿಶ್), ಮೆಟಾಲಿಕ್ ವೈಟ್ ಮತ್ತು ಪ್ಯೂಟರ್ ಗ್ರೇ ಬಣ್ಣಗಳ ಆಯ್ಕೆಗಳನ್ನು ಪಡೆದಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಹೊಸ ಬಣ್ಣಗಳ ಆಯ್ಕೆಯಲ್ಲಿ ಡೀಲರ್ ಬಳಿ ತಲುಪಿದ ಬಜಾಜ್ ಪಲ್ಸರ್ ಬೈಕುಗಳು

ಪಲ್ಸರ್ ಎನ್ಎಸ್ ಮತ್ತು ಆರ್‍ಎಸ್ ಬೈಕುಗಳಲ್ಲಿರುವ ಹೊಸ ಬಣ್ಣಗಳು 'ಕಲರ್ ಬ್ಲಾಕಿಂಗ್' ವಿನ್ಯಾಸದಿಂದ ಪ್ರೇರಿತವಾಗಿದ್ದು, ವೈಟ್ ಅಲಾಯ್ ವ್ಹೀಲ್ ಗಳು, ಕಾರ್ಬನ್ ಫೈಬರ್‌ನಲ್ಲಿ ಫಿನಿಶಿಂಗ್ ಹೊಂದಿದ ಮುಂಭಾಗ ಮತ್ತು ಹಿಂಭಾಗದ ಫೆಂಡರ್‌ಗಳು ಮತ್ತು ಹೀಟ್ ಸ್ಟ್ಯಾಂಪಿಂಗ್ ಮಾದರಿಯೊಂದಿಗೆ ಸೀಟ್ ಗಳನ್ನು ಹೊಂದಿವೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಡೀಲರ್ ಬಳಿ ತಲುಪಿದ ಬಜಾಜ್ ಪಲ್ಸರ್ ಬೈಕುಗಳು

ಬಜಾಜ್ ಪಲ್ಸರ್ ಆರ್‍ಎಸ್ 200 ಮತ್ತು ಎನ್ಎಸ್ 200 ಬೈಕಿನಲ್ಲಿ 199.5 ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, 4-ವಾಲ್ವ್, ಫ್ಯೂಯಲ್-ಇಂಜೆಕ್ಟ್, ಟ್ರಿಪಲ್ ಸ್ಪಾರ್ಕ್, ಡಿಟಿಎಸ್-ಐ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,750 ಆರ್‌ಪಿಎಂನಲ್ಲಿ 24.15 ಬಿ‍‍ಹೆಚ್‍‍ಪಿ ಪವರ್ ಹಾಗೂ 8,000 ಆರ್‌ಪಿಎಂನಲ್ಲಿ 18.7 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಬಣ್ಣಗಳ ಆಯ್ಕೆಯಲ್ಲಿ ಡೀಲರ್ ಬಳಿ ತಲುಪಿದ ಬಜಾಜ್ ಪಲ್ಸರ್ ಬೈಕುಗಳು

ಬಜಾಜ್ ಪಲ್ಸರ್ ಆರ್‍ಎಸ್ 200 ಮತ್ತು ಎನ್ಎಸ್ 200 ಬೈಕಿನಲ್ಲಿರುವ ಹಾರ್ಡ್‌ವೇರ್ ಸ್ಪೆಸಿಫಿಕೇಶನ್‍‍ಗಳನ್ನು ಇತರ ಪ್ರತಿಸ್ಪರ್ಧಿ ಕುಗಳಿಗೆ ಪೈಪೋಟಿ ನೀಡುವಂತೆ ಅಪ್‍‍ಗ್ರೇಡ್ ಮಾಡಲಾಗಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಡೀಲರ್ ಬಳಿ ತಲುಪಿದ ಬಜಾಜ್ ಪಲ್ಸರ್ ಬೈಕುಗಳು

ಬಜಾಜ್ ಪಲ್ಸರ್ ಆರ್‍ಎಸ್ 200 ಮತ್ತು ಎನ್ಎಸ್ 200 ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್ ಸೆಟಪ್ ಅನ್ನು ನೀಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಬಣ್ಣಗಳ ಆಯ್ಕೆಯಲ್ಲಿ ಡೀಲರ್ ಬಳಿ ತಲುಪಿದ ಬಜಾಜ್ ಪಲ್ಸರ್ ಬೈಕುಗಳು

ಇನ್ನು ಈ ಬೈಕುಗಳಲ್ಲಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 300 ಎಂಎಂ ಹಾಗೂ ಹಿಂಭಾಗದಲ್ಲಿ 230 ಎಂಎಂ ಪೆಟಲ್ ಟೈಪ್‍ ಡಿಸ್ಕ್ ಬ್ರೇಕ್‌ಗಳಿವೆ. ಇದರೊಂದಿಗೆ ಎಬಿಎಸ್ ಅನ್ನು ನೀಡಲಾಗಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಡೀಲರ್ ಬಳಿ ತಲುಪಿದ ಬಜಾಜ್ ಪಲ್ಸರ್ ಬೈಕುಗಳು

ಬಜಾಜ್ ಪಲ್ಸರ್ ಎನ್‍ಎಸ್ 160 ಬೈಕಿನಲ್ಲಿ 160.3 ಸಿಸಿ ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,000 ಆರ್‍‍ಪಿಎಂನಲ್ಲಿ 17.2 ಬಿ‍‍ಹೆಚ್‍ಪಿ ಪವರ್ ಮತ್ತು 14.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Image Courtesy: MRD Vlogs

Most Read Articles

Kannada
English summary
Bajaj Pulsar 200 New Colours Arrive At Showroom. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X