Just In
- 1 hr ago Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 14 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 16 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 17 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
Don't Miss!
- News Lok Sabha Election 2024: ಚಾಮರಾಜನಗರ ಕ್ಷೇತ್ರದಲ್ಲಿರುವ ಮತದಾರರ ವಿವರ-ಅಂಕಿಅಂಶಗಳ ಮಾಹಿತಿ
- Finance ನೂಡಲ್ಸ್ ಪ್ಯಾಕೆಟ್ ಒಳಗಿತ್ತು ವಜ್ರಗಳ ರಾಶಿ, ಬರೋಬ್ಬರಿ 6.46 ಕೋಟಿ ರೂ. ಮೌಲ್ಯದ ಚಿನ್ನ, ಡೈಮಂಡ್ ವಶ!
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬಜಾಜ್ ಪಲ್ಸರ್ ಆರ್ಎಸ್ 200
ಬಜಾಜ್ ಆಟೋ ಕಂಪನಿಯು ತನ್ನ ಬಿಎಸ್-6 ಪಲ್ಸರ್ ಆರ್ಎಸ್200 ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರ ನಡುವೆ ಹೊಸ ಬಜಾಜ್ ಪಲ್ಸರ್ ಆರ್ಎಸ್200 ಬೈಕಿನ ಬೆಲೆಯು ಬಹಿರಂಗವಾಗಿದೆ.
ಬಿಎಸ್-6 ಬಜಾಜ್ ಪಲ್ಸರ್ ಆರ್ಎಸ್200 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1,43,750 ಗಳಾಗಿದೆ. ಬಿಎಸ್-4 ಪಲ್ಸರ್ ಆರ್ಎಸ್200 ಮಾದರಿಗೆ ಹೋಲಿಸಿದರೆ ರೂ.1,632 ರಷ್ಟು ಹೆಚ್ಚಿಸಿದೆ. ಬಜಾಜ್ ಪಲ್ಸರ್ ಆರ್ಎಸ್200 ಬೈಕ್ಗಾಗಿ ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಅಪ್ಗ್ರೇಡ್ ಮಾಡಲಾಗಿದೆ.
ಬಜಾಜ್ ಪಲ್ಸರ್ ಆರ್ಎಸ್200 ಬೈಕಿನಲ್ಲಿ 199.5 ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, 4-ವಾಲ್ವ್, ಫ್ಯೂಯಲ್-ಇಂಜೆಕ್ಟ್, ಟ್ರಿಪಲ್ ಸ್ಪಾರ್ಕ್, ಡಿಟಿಎಸ್-ಐ ಎಂಜಿನ್ ಹೊಂದಿದೆ. ಹೊಸ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಇದೆ ಎಂಜಿನ್ ಅನ್ನು ನವೀಕರಿಸಲಾಗುತ್ತದೆ.
ಈ ಎಂಜಿನ್ 9,750 ಆರ್ಪಿಎಂನಲ್ಲಿ 24.15 ಬಿಹೆಚ್ಪಿ ಪವರ್ ಹಾಗೂ 8,000 ಆರ್ಪಿಎಂನಲ್ಲಿ 18.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪಲ್ಸರ್ ಆರ್ಎಸ್ 200 ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 140.8 ಕಿ.ಮೀಗಳಾಗಿದೆ.
ಪಲ್ಸರ್ ಆರ್ಎಸ್ 200 ಬೈಕಿನಲ್ಲಿರುವ ಹಾರ್ಡ್ವೇರ್ ಸ್ಪೆಸಿಫಿಕೇಶನ್ಗಳನ್ನು ಬೇರೆ ಕಂಪನಿಯ ಬೈಕುಗಳಿಗೆ ಪೈಪೋಟಿ ನೀಡುವಂತೆ ಅಪ್ಗ್ರೇಡ್ ಮಾಡಲಾಗತ್ತದೆ.
ಬಿಎಸ್ 6 ಎಂಜಿನ್ ಹೊಂದಿರುವ ಬೈಕ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುತ್ತದೆ. ಮಾರುಕಟ್ಟೆಯಲ್ಲಿರುವ ಬೈಕಿನಲ್ಲಿರುವ ಹಾರ್ಡ್ವೇರ್ ಸ್ಪೆಸಿಫಿಕೇಶನ್ಗಳನ್ನು ಅಪ್ಡೇಟ್ ಮಾಡುತ್ತಿರುವ ಬೈಕಿನಲ್ಲಿ ಉಳಿಸಿಕೊಳ್ಳಲಾಗುವುದು.
ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಲಿರುವ ಪಲ್ಸರ್ ಆರ್ಎಸ್ 200 ಬೈಕಿನ ಮುಂಭಾಗದಲ್ಲಿ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್ಗಳಿರಲಿವೆ. ಆಂಕರಿಂಗ್ ಪವರ್ಗಾಗಿ ಮುಂಭಾಗದಲ್ಲಿ 300 ಎಂಎಂ ಹಾಗೂ ಹಿಂಭಾಗದಲ್ಲಿ 230 ಎಂಎಂ ಪೆಟಲ್ ಟೈಪ್ ಡಿಸ್ಕ್ ಬ್ರೇಕ್ಗಳಿವೆ. ಸುರಕ್ಷತಾ ಫೀಚರ್ಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ನೀಡಲಾಗುತ್ತದೆ.
ಬೈಕಿನ ಸ್ಟೈಲಿಂಗ್ನಲ್ಲಿ ಹೆಚ್ಚಿನ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ. ಪಲ್ಸರ್ ಆರ್ಎಸ್ 200 ಬೈಕಿನಲ್ಲಿ ಎಲ್ಇಡಿ ಡಿಆರ್ಎಲ್ ಹೊಂದಿರುವ ಟ್ವಿನ್ ಪಾಡ್ ಪ್ರೊಜೆಕ್ಟರ್ಗಳು, ಎಲ್ಇಡಿ ಟೇಲ್ಲೈಟ್, ಬ್ಲಿಂಕರ್ಗಳು, ಪೂರ್ಣ ಪ್ರಮಾಣದ ಫೇರಿಂಗ್ ಡಿಸೈನ್, ಮಸ್ಕ್ಯುಲರ್ ಶೇಪ್, ಕ್ಲಿಪ್ ಆನ್ ಹ್ಯಾಂಡಲ್ ಬಾರ್ ಹಾಗೂ ಸ್ಪ್ಲಿಟ್ ಸ್ಟೈಲ್ ಸೀಟುಗಳಿವೆ.
ಪಲ್ಸರ್ ಆರ್ಎಸ್ 200 ಬೈಕಿನ ಪ್ರತಿಸ್ಪರ್ಧಿ ಬೈಕ್ ಆದ ಯಮಹಾ ವೈಜೆಡ್-ಆರ್ 15 ವಿ 3.0 ಬೈಕಿನಲ್ಲಿ ಈಗಾಗಲೇ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ. ಬಜಾಜ್ ಪಲ್ಸರ್ ಆರ್ಎಸ್200 ಬೈಕ್ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.