ಕರೋನಾ ವೈರಸ್ ಎಫೆಕ್ಟ್: 55%ರಷ್ಟು ಕುಸಿತ ಕಂಡ ಬಜಾಜ್ ದ್ವಿಚಕ್ರ ವಾಹನಗಳ ಮಾರಾಟ

ಬಜಾಜ್ ಆಟೋ ಕಂಪನಿಯು ಕಳೆದ ಮಾರ್ಚ್ ತಿಂಗಳಲ್ಲಿ ತನ್ನ ದ್ವಿಚಕ್ರ ವಾಹನಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಬಜಾಜ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ಮಾರಾಟದಲ್ಲಿ 55% ಕುಸಿತವನ್ನು ಕಂಡಿದೆ.

ಕರೋನಾ ವೈರಸ್ ಎಫೆಕ್ಟ್: 55%ರಷ್ಟು ಕುಸಿತ ಕಂಡ ಬಜಾಜ್ ದ್ವಿಚಕ್ರ ವಾಹನಗಳ ಮಾರಾಟ

ಕಳೆದ ಮಾರ್ಚ್ ತಿಂಗಳಲ್ಲಿ ಬಜಾಜ್ ಆಟೋ ಕಂಪನಿಯು ದ್ವಿಚಕ್ರ ವಾಹನಗಳ ಒಟ್ಟು 98,412 ಯು‍‍ನಿ‍‍ಟ್‍ಗಳನ್ನು ಮಾರಾಟ ಮಾಡಿದೆ.ಇನ್ನು ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ದ್ವಿಚಕ್ರ ವಾಹನಗಳ 2.20 ಲಕ್ಷ ಯು‍‍ನಿ‍‍ಟ್‍ಗಳನ್ನು ಮಾರಾಟ ಮಾಡಿದರು. ಕಳೆದ ವರ್ಷದ ಮಾರ್ಚ್ ತಿಂಗಳ ಮಾರಾಟವನ್ನು ಹೋಲಿಸಿದರೆ 55% ಕುಸಿತವನ್ನು ಕಂಡಿದೆ. ಬಜಾಜ್ ಆಟೋ ಕಂಪನಿಯು ಕಳೆದ ಮಾರ್ಚ್ ತಿಂಗಳಲ್ಲಿ ದ್ವಿಚಕ್ರದ 1,12,564 ಯು‍‍ನಿ‍‍ಟ್‍ಗಳನ್ನು ರಫ್ತು ಮಾಡಿದೆ.

ಕರೋನಾ ವೈರಸ್ ಎಫೆಕ್ಟ್: 55%ರಷ್ಟು ಕುಸಿತ ಕಂಡ ಬಜಾಜ್ ದ್ವಿಚಕ್ರ ವಾಹನಗಳ ಮಾರಾಟ

ಇನ್ನು ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಬಜಾಜ್ ಆಟೋ ಕಂಪನಿಯು ತನ್ನ ದ್ವಿಚಕ್ರ ವಾಹನಗಳ 1,03,325 ಯು‍‍ನಿ‍‍ಟ್‍ಗಳನ್ನು ರಫ್ತು ಮಾಡಲಾಗಿದೆ.ಕಳೆದ ವರ್ಷದ ಮಾರ್ಚ್ ತಿಂಗಳ ದ್ವಿಚಕ್ರ ವಾಹನಗಳ ರಫ್ತಿಗೆ ಹೋಲಿಸಿದರೆ 9% ಬೆಳವೆಣೆಗೆಯನ್ನು ಕಂಡಿದೆ.

ಕರೋನಾ ವೈರಸ್ ಎಫೆಕ್ಟ್: 55%ರಷ್ಟು ಕುಸಿತ ಕಂಡ ಬಜಾಜ್ ದ್ವಿಚಕ್ರ ವಾಹನಗಳ ಮಾರಾಟ

ಕಳೆದ ಮಾರ್ಚ್ ತಿಂಗಳಲ್ಲಿ ಬಜಾಜ್ ಕಂಪನಿಯ ದ್ವಿಚಕ್ರ ವಾಹನಗಳ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ರಫ್ತು ಸೇರಿಸಿ ಒಟ್ಟು 2,10,976 ಯು‍‍ನಿ‍‍ಟ್‍ಗಳಾಗಿದೆ. ಇನ್ನು ಕಳೆದ ಮಾರ್ಚ್ ತಿಂಗಳಲ್ಲಿ ಬಜಾಜ್ ಕಂಪನಿಯು ದ್ವಿಚಕ್ರ ವಾಹನಗಳ ಮಾರಾಟ ಮತ್ತು ರಫ್ತು ಒಟ್ಟು 3,23,538 ಯು‍‍ನಿ‍‍ಟ್‍ಗಳಾಗಿದೆ. ಕಳೆದ ವರ್ಷದ ರಫ್ತು ಮತ್ತು ಮಾರಾಟಕ್ಕೆ ಹೋಲಿಸಿದರೆ 35% ಕುಸಿತವನ್ನು ಕಂಡಿದೆ.

ಕರೋನಾ ವೈರಸ್ ಎಫೆಕ್ಟ್: 55%ರಷ್ಟು ಕುಸಿತ ಕಂಡ ಬಜಾಜ್ ದ್ವಿಚಕ್ರ ವಾಹನಗಳ ಮಾರಾಟ

2019-20ನೇ ಹಣಕಾಸು ವರ್ಷದಲ್ಲಿ ಬಜಾಜ್ ಕಂಪನಿಯು ಒಟ್ಟು ದ್ವಿಚಕ್ರ ವಾಹನದ 39,47,568 ಯು‍‍ನಿ‍‍ಟ್‍ಗಳನ್ನು ಮಾರಾಟ ಮಾಡಿದೆ. ಇನ್ನು 2018-19ನೇ ಹಣಕಾಸು ವರ್ಷದಲ್ಲಿ ಬಜಾಜ್ ಕಂಪನಿಯು ಒಟ್ಟು ದ್ವಿಚಕ್ರ ವಾಹನದ 42,36,873 ಯು‍‍ನಿ‍‍ಟ್‍ಗಳನ್ನು ಮಾರಾಟ ಮಾಡಿದರು. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಬಾರಿ 7% ಕುಸಿತವಾಗಿದೆ

ಕರೋನಾ ವೈರಸ್ ಎಫೆಕ್ಟ್: 55%ರಷ್ಟು ಕುಸಿತ ಕಂಡ ಬಜಾಜ್ ದ್ವಿಚಕ್ರ ವಾಹನಗಳ ಮಾರಾಟ

ಬಜಾಜ್ ಆಟೋ ಕಂಪನಿಯು ಉಚಿತ ಸರ್ವಿಸ್ ಮತ್ತು ವಾರಂಟಿ ಅವಧಿಯನ್ನು ವಿಸ್ತರಿಸಿದೆ. ಪ್ರಸ್ತುತ ಕರೋನಾ ವೈರಸ್ ಭೀತಿಯಿಂದ ಗ್ರಾಹಕರಿಗೆ ಸಹಕಾರಿಯಾಗಲು ಈ ನಿರ್ಧಾರವನ್ನು ಕೈಗೊಂಡಿದೆ.

ಕರೋನಾ ವೈರಸ್ ಎಫೆಕ್ಟ್: 55%ರಷ್ಟು ಕುಸಿತ ಕಂಡ ಬಜಾಜ್ ದ್ವಿಚಕ್ರ ವಾಹನಗಳ ಮಾರಾಟ

ಮಾರ್ಚ್ 20 ಮತ್ತು ಏಪ್ರಿಲ್ 30ರ ನಡುವೆ ಮುಕ್ತಾಯಗೊಳ್ಳುವ ಬಜಾಜ್ ಕಂಪನಿಯ ಸರ್ವಿಸ್ ಮತ್ತು ವಾರಂಟಿ ಅವಧಿಯನ್ನು ಮೇ31 ರವರೆಗೆ ವಿಸ್ತರಿಸಲಾಗಿದೆ.

ಕರೋನಾ ವೈರಸ್ ಎಫೆಕ್ಟ್: 55%ರಷ್ಟು ಕುಸಿತ ಕಂಡ ಬಜಾಜ್ ದ್ವಿಚಕ್ರ ವಾಹನಗಳ ಮಾರಾಟ

ಹೊಸ ಬಜಾಜ್ ಪಲ್ಸರ್ 160 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಬೈಕಿನಲ್ಲಿ ಬಿಎಸ್-6, 160.3 ಸಿಸಿ ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಹೊಸ ಪಲ್ಸರ್ ಎನ್‍ಎಸ್160 ಎಂಜಿನ್ 9,000 ಆರ್‍‍ಪಿಎಂನಲ್ಲಿ 17.2 ಬಿ‍‍ಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಕರೋನಾ ವೈರಸ್ ಎಫೆಕ್ಟ್: 55%ರಷ್ಟು ಕುಸಿತ ಕಂಡ ಬಜಾಜ್ ದ್ವಿಚಕ್ರ ವಾಹನಗಳ ಮಾರಾಟ

ಬಜಾಜ್ ಕಂಪನಿಯು ತನ್ನ ಪಲ್ಸರ್ ಸರಣಿಯ 150, 180 ಎಫ್, ಎನ್ಎಸ್ 160, ಎನ್ಎಸ್ 200, 220 ಎಫ್ ಮತ್ತು ಆರ್ಎಸ್ 200 ಬೈಕುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗಿದೆ. ಇದರೊಂದಿದೆ ಬಜಾಜ್ ಕಂಪನಿಯು ಡೋಮಿನಾರ್ ಮತ್ತು ಅವೆಂಜರ್ ಬೈಕುಗಳನ್ನು ಕೂಡ ಬಿಡುಗಡೆಗೊಳಿಸಿದೆ.

Most Read Articles

Kannada
English summary
Bajaj Auto Registers A Massive 55% Decline In Domestic Sales. Read in Kannada.
Story first published: Friday, April 3, 2020, 20:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X