ಸ್ಕೂಟರ್ ಖರೀದಿಯನ್ನು ಸುಲಭವಾಗಿಸಿದ ಬ್ಯಾಟ್ ರಿ ಎಲೆಕ್ಟ್ರಿಕ್ ಹಣಕಾಸು ಯೋಜನೆ

ಜೆಸ್ಟ್‌ಮನಿ ಸಹಭಾಗಿತ್ವದಲ್ಲಿ ಬ್ಯಾಟ್ ರಿ ಎಲೆಕ್ಟ್ರಿಕ್ ಮೊಬಿಲಿಟಿ, ಗ್ರಾಹಕರಿಗಾಗಿ ಆಕರ್ಷಕ ಹಣಕಾಸು ಯೋಜನೆಯನ್ನು ಪರಿಚಯಿಸಿದೆ. ಜೆಸ್ಟ್‌ಮನಿ ಹಣಕಾಸು ಯೋಜನೆಯ ಸಹಾಯದಿಂದ ಗ್ರಾಹಕರು ಬ್ಯಾಟ್ ರಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸುಲಭ ಕಂತುಗಳಲ್ಲಿ ಖರೀದಿಸಬಹುದು.

ಸ್ಕೂಟರ್ ಖರೀದಿಯನ್ನು ಸುಲಭವಾಗಿಸಿದ ಬ್ಯಾಟ್ ರಿ ಎಲೆಕ್ಟ್ರಿಕ್ ಹಣಕಾಸು ಯೋಜನೆ

ಕ್ರೆಡಿಟ್ ಸ್ಕೋರ್ ಹೊಂದಿರದ ಗ್ರಾಹಕರು ಸಹ ಈ ಹಣಕಾಸು ಯೋಜನೆಯಡಿ ಬ್ಯಾಟ್ ರಿ ಸ್ಕೂಟರ್‌ಗಳನ್ನು ಖರೀದಿಸಬಹುದು. ಬ್ಯಾಟ್ ರಿ ಸ್ಕೂಟರ್‌ಗಳ ಎಲ್ಲಾ ಮಾದರಿಗಳಿಗೆ ಈ ಯೋಜನೆ ಅನ್ವಯಿಸಲಿದೆ. 12 ರಾಜ್ಯಗಳಲ್ಲಿರುವ ಬ್ಯಾಟ್ ರಿ ಸ್ಕೂಟರ್ ಮಾರಾಟಗಾರರಲ್ಲಿ ಗ್ರಾಹಕರು ಸ್ಕೂಟರ್‌ಗಳನ್ನು ಬುಕ್ಕಿಂಗ್ ಮಾಡಬಹುದು.

ಸ್ಕೂಟರ್ ಖರೀದಿಯನ್ನು ಸುಲಭವಾಗಿಸಿದ ಬ್ಯಾಟ್ ರಿ ಎಲೆಕ್ಟ್ರಿಕ್ ಹಣಕಾಸು ಯೋಜನೆ

ಜೆಸ್ಟ್‌ಮನಿಯ ಆನ್‌ಲೈನ್ ಹಣಕಾಸು ಯೋಜನೆಯಡಿಯಲ್ಲಿ ಗ್ರಾಹಕರಿಗೆ ಹಲವಾರು ಅನುಕೂಲಗಳಿವೆ. ಗ್ರಾಹಕರು ಕೆವೈಸಿಗಾಗಿ ಶೋರೂಂಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಕೆವೈಸಿಯ ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಯಲಿದ್ದು, ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಸ್ಕೂಟರ್ ಖರೀದಿಯನ್ನು ಸುಲಭವಾಗಿಸಿದ ಬ್ಯಾಟ್ ರಿ ಎಲೆಕ್ಟ್ರಿಕ್ ಹಣಕಾಸು ಯೋಜನೆ

ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರದ ಗ್ರಾಹಕರು ಸಹ ಸ್ಕೂಟರ್‌ಗಳಿಗೆ ಹಣಕಾಸು ಸೌಲಭ್ಯವನ್ನು ಪಡೆಯಬಹುದು. ಸ್ಕೂಟರ್ ಖರೀದಿಗಾಗಿ 3, 6 ಹಾಗೂ 12 ತಿಂಗಳ ಇಎಂಐ ಆಯ್ಕೆಯನ್ನು ನೀಡಲಾಗುತ್ತದೆ.

ಸ್ಕೂಟರ್ ಖರೀದಿಯನ್ನು ಸುಲಭವಾಗಿಸಿದ ಬ್ಯಾಟ್ ರಿ ಎಲೆಕ್ಟ್ರಿಕ್ ಹಣಕಾಸು ಯೋಜನೆ

ಬ್ಯಾಟ್ ರಿ ಮೊಬಿಲಿಟಿ ಇತ್ತೀಚೆಗಷ್ಟೇ ತನ್ನ ಹೊಸ ಲೋವ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಈ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.59,900ಗಳಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 6 ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸ್ಕೂಟರ್ ಖರೀದಿಯನ್ನು ಸುಲಭವಾಗಿಸಿದ ಬ್ಯಾಟ್ ರಿ ಎಲೆಕ್ಟ್ರಿಕ್ ಹಣಕಾಸು ಯೋಜನೆ

ಲೋವ್ ಸ್ಕೂಟರ್ ಅನ್ನು ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಹಾಗೂ ಗುಜರಾತ್‌ನ ಕಂಪನಿಯ ಶೋರೂಂಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಸ್ಕೂಟರ್ ಅನ್ನು ಅಮೆಜಾನ್ ಇಂಡಿಯಾದ ಆನ್‌ಲೈನ್ ಮಾರ್ಕೆಟಿಂಗ್ ವೆಬ್‌ಸೈಟ್ ನಲ್ಲಿಯೂ ಸಹ ಮಾರಾಟ ಮಾಡಲಾಗುತ್ತದೆ.

ಸ್ಕೂಟರ್ ಖರೀದಿಯನ್ನು ಸುಲಭವಾಗಿಸಿದ ಬ್ಯಾಟ್ ರಿ ಎಲೆಕ್ಟ್ರಿಕ್ ಹಣಕಾಸು ಯೋಜನೆ

ಲೋವ್ ಎಲೆಕ್ಟ್ರಿಕ್ ಸ್ಕೂಟರ್ ಡ್ಯುಯಲ್ ಡಿಸ್ಕ್ ಬ್ರೇಕ್, ರಿಮೋಟ್ ಕೀ, ಯಾಂಟಿಥೆಫ್ಟ್ ಅಲಾರ್ಮ್, ರಿವರ್ಸ್ ಗೇರ್, ವ್ಹೀಲ್ ಇಮೊಬೈಲೈಸರ್ ನಂತಹ ಫೀಚರ್ ಗಳನ್ನು ಹೊಂದಿದೆ. ಈ ಸ್ಕೂಟರಿನ ಜೊತೆಗೆ 10 ಆಂಪಿಯರ್ ಫಾಸ್ಟ್ ಚಾರ್ಜರ್ ನೀಡಲಾಗುವುದು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸ್ಕೂಟರ್ ಖರೀದಿಯನ್ನು ಸುಲಭವಾಗಿಸಿದ ಬ್ಯಾಟ್ ರಿ ಎಲೆಕ್ಟ್ರಿಕ್ ಹಣಕಾಸು ಯೋಜನೆ

ಈ ಚಾರ್ಜರ್ ಕೇವಲ 2 ಗಂಟೆಗಳಲ್ಲಿ ಸ್ಕೂಟರಿನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡುತ್ತದೆ. ಈ ಸ್ಕೂಟರ್ ಹೊರತೆಗೆಯಬಹುದಾದ ಲಿಥಿಯಂ ಫೆರೋ ಫಾಸ್ಫೇಟ್ ಬ್ಯಾಟರಿಯನ್ನು ಹೊಂದಿದ್ದು, ಎಲ್ಲಿ ಬೇಕಾದರೂ ಚಾರ್ಜ್ ಮಾಡಬಹುದಾಗಿದೆ.

ಸ್ಕೂಟರ್ ಖರೀದಿಯನ್ನು ಸುಲಭವಾಗಿಸಿದ ಬ್ಯಾಟ್ ರಿ ಎಲೆಕ್ಟ್ರಿಕ್ ಹಣಕಾಸು ಯೋಜನೆ

ಬ್ಯಾಟ್ ರಿ ಮೊಬಿಲಿಟಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆದ ಬ್ಯಾಟ್ ರಿ-ಒನ್ ಅನ್ನು ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಬ್ಯಾಟ್ ರಿ ಕಂಪನಿಯು ಭಾರತದಲ್ಲಿ ಎಂಟ್ರಿ ಲೆವೆಲ್ ನ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉತ್ಪಾದಿಸುತ್ತದೆ. ಈ ಸ್ಕೂಟರ್ ಗಳು ಹಲವಾರು ಫೀಚರ್ ಗಳನ್ನು ಹೊಂದಿವೆ.

Most Read Articles

Kannada
English summary
BattRe EV offers financing scheme with zest money collaboration. Read in Kannada.
Story first published: Wednesday, July 29, 2020, 19:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X