Just In
Don't Miss!
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಹಿರಂಗವಾಯ್ತು ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಬೆಲೆ
ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಅನ್ನು ಶೀಘ್ರದಲ್ಲೇ ಬಿಎಸ್-6 ಎಂಜಿನ್ನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಬೆಲೆಯು ಬೆಲೆಯು ಬಹಿರಂಗವಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.79 ಲಕ್ಷಗಳಾಗಿದೆ. ಇನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬೈಕಿನ ಬೆಲೆಯನ್ನು ರೂ.40,000 ಗಳಷ್ಟು ಹೆಚ್ಚಿಸಲಾಗಿದೆ. ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.20 ಲಕ್ಷಗಳಾಗಿದೆ. ಹೊಸ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ದುಬಾರಿಯಾಗಿದೆ.

ಹಿಂದಿನ ವರದಿಗಳ ಪ್ರಕಾರ ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಈ ತಿಂಗಳು ಶೋ ರೂಂಗಳನ್ನು ತಲುಪಬೇಕಿತ್ತು. ಆದರೆ ಕರೋನಾ ವೈರಸ್ ಭೀತಿಯಿಂದಾಗಿ ಈ ಬೈಕಿನ ಬಿಡೆಗಡೆಯನ್ನು ವಿಳಂಬಗೊಳಿಸಿರಬಹುದು.
MOST READ: 20 ಸಾವಿರ ಗಡಿ ದಾಟಿದ ರಾಯಲ್ ಎನ್ಫೀಲ್ಡ್ ಟ್ವಿನ್ ಬೈಕುಗಳ ಮಾರಾಟ

ಇಡೀ ದೇಶವೇ ಸಂಪೂರ್ಣ ಲಾಕ್ ಡೌನ್ ಆಗಿದೆ. ಪ್ರಸ್ತುತ ಲಾಕ್ ಡೌನ್ ಅವಧಿಯು ಮುಂದಿನ ಮೇ 3ರ ವರೆಗೆ ಇದೆ. ಲಾಕ್ ಡೌನ್ ಮುಗಿದ ಬಳಿಕ ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು.

ಹೊಸ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಕ್ಲಾಸಿಕ್ ಲುಕ್ ಆನ್ನು ಹೊಂದಿದೆ. ಈ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಮುಂಭಾಗದಿಂದ ಆಕರ್ಷಕವಾಗಿ ಕಾಣುತ್ತದೆ. ಕ್ಲಾಸಿಕ್ ಲುಕ್ ಗಾಗಿ ದುಂಡಾಗಿರುವ ಹೆಡ್ಲ್ಯಾಂಪ್ಗಳನ್ನು ನೀಡಲಾಗಿದೆ. ಇದರ ಜೊತೆಗೆ ಈ ಬೈಕ್ನಲ್ಲಿ ಟ್ವಿನ್ ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನೀಡಲಾಗಿದೆ.
MOST READ: ಬಿಎಸ್-6 ಎಂಜಿನ್ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಸಸ್ಪೆಂಷನ್ ಗಾಗಿ, ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸರ್ವರ್ ಅಳವಡಿಸಲಾಗಿದೆ. ಸುರಕ್ಷತೆಗಾಗಿ, ಈ ಬೈಕಿನಲ್ಲಿ ಎಬಿಎಸ್ ಹೊಂದಿರುವ ಡ್ಯುಯಲ್ ಡಿಸ್ಕ್ ಬ್ರೇಕ್ಗಳನ್ನು ನೀಡಲಾಗಿದೆ.

ಹೊಸ ಬೆನೆಲ್ಲಿ ಇಂಪೀರಿಯಲ್ 400 ಬೈಕಿನಲ್ಲಿ 373 ಸಿಸಿಯ, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 5500 ಆರ್ಪಿಎಂನಲ್ಲಿ 19 ಬಿಹೆಚ್ಪಿ ಪವರ್ ಹಾಗೂ 3500 ಆರ್ಪಿಎಂನಲ್ಲಿ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 5 ಸ್ಪೀಡಿನ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.
MOST READ: ಶೀಘ್ರದಲ್ಲೇ ಬಿಡುಗಡೆಯಾಲಿದೆ ಟ್ರಯಂಫ್ ಟೈಗರ್ 900 ಬೈಕ್

ಹೊಸ ಇಂಪೀರಿಯಲ್ 400 ಬೈಕ್, ಮುಂಭಾಗದಲ್ಲಿ 19 ಇಂಚಿನ ಹಾಗೂ ಹಿಂಭಾಗದಲ್ಲಿ 18 ಇಂಚಿನ ಟಯರ್ಗಳನ್ನು ಹೊಂದಿದೆ. ಈ ಬೈಕ್ ಅನ್ನು ಭಾರತದಲ್ಲಿಯೇ ತಯಾರಿಸಲಾಗಿದೆ.

ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಅನ್ನು ಶೀಘ್ರದಲ್ಲೇ ಬಿಎಸ್-6 ಎಂಜಿನ್ನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಹಾಗೂ ಜಾವಾ ಕಂಪನಿಯ ಬೈಕುಗಳಿಗೆ ಪೈಪೋಟಿ ನೀಡುತ್ತದೆ.