ಹೆಚ್ಚಾದ ಇಂಪೀರಿಯಲ್ 400 ಬೈಕ್ ಬೇಡಿಕೆ - ಉತ್ಪಾದನೆ ಹೆಚ್ಚಿಸಿದ ಬೆನೆಲ್ಲಿ

ಬೆನೆಲ್ಲಿ ಇಂಡಿಯಾ ಕಂಪನಿಯು ಬಿಎಸ್-6 ಇಂಪೀರಿಯಲ್ 400 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಬೆನೆಲ್ಲಿ ಇಂಪೀರಿಯೇಲ್ 400 ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.99 ಲಕ್ಷಗಳಾಗಿದೆ.

ಹೆಚ್ಚಾದ ಇಂಪೀರಿಯಲ್ 400 ಬೈಕ್ ಬೇಡಿಕೆ - ಉತ್ಪಾದನೆ ಹೆಚ್ಚಿಸಿದ ಬೆನೆಲ್ಲಿ

ಇನ್ನು ಬೆನೆಲ್ಲಿ ಇಂಪೀರಿಯಲ್ 400 ಹಿಂದಿನ ಮಾದರಿಯನ್ನು 2019ರಲ್ಲಿ ಬಿಡುಗಡೆಗೊಳಿಸಿದ್ದರು. ಇಂಪೀರಿಯಲ್ 400 ಬೈಕಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ಇಲ್ಲಿಯವರೆಗೆ ಇಂಪೀರಿಯಲ್ 400 ಬೈಕಿನ 2,500 ಯುನಿಟ್‌ಗಳನ್ನು ವಿತರಿಲಾಗಿದೆ. ಬಿಎಸ್-6 ಇಂಪೀರಿಯಲ್ 400 ಬೈಕಿಗೆ ಉತ್ತಮ ಬೇಡಿಕೆಯನ್ನು ಹೊಂದಿರುವುದರಿಂದ ಕಂಪನಿಯು ಈ ಬೈಕಿನ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತಿದೆ.

ಹೆಚ್ಚಾದ ಇಂಪೀರಿಯಲ್ 400 ಬೈಕ್ ಬೇಡಿಕೆ - ಉತ್ಪಾದನೆ ಹೆಚ್ಚಿಸಿದ ಬೆನೆಲ್ಲಿ

ಇನ್ನು ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕಿನಲ್ಲಿ 374 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಹೆಚ್ಚಾದ ಇಂಪೀರಿಯಲ್ 400 ಬೈಕ್ ಬೇಡಿಕೆ - ಉತ್ಪಾದನೆ ಹೆಚ್ಚಿಸಿದ ಬೆನೆಲ್ಲಿ

ಈ ಎಂಜಿನ್ 6000 ಆರ್‌ಪಿಎಂನಲ್ಲಿ 20 ಬಿಹೆಚ್‌ಪಿ ಮತ್ತು 3500 ಆರ್‌ಪಿಎಂನಲ್ಲಿ 29 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೆಚ್ಚಾದ ಇಂಪೀರಿಯಲ್ 400 ಬೈಕ್ ಬೇಡಿಕೆ - ಉತ್ಪಾದನೆ ಹೆಚ್ಚಿಸಿದ ಬೆನೆಲ್ಲಿ

ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿರುವುದನ್ನು ಹೊರತುಪಡಿಸಿದರೆ ಇತರ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ಇಂಪೀರಿಯಲ್ 400 ಬೈಕ್, ಮುಂಭಾಗದಲ್ಲಿ 19 ಇಂಚಿನ ಹಾಗೂ ಹಿಂಭಾಗದಲ್ಲಿ 18 ಇಂಚಿನ ಟಯರ್‌ಗಳನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹೆಚ್ಚಾದ ಇಂಪೀರಿಯಲ್ 400 ಬೈಕ್ ಬೇಡಿಕೆ - ಉತ್ಪಾದನೆ ಹೆಚ್ಚಿಸಿದ ಬೆನೆಲ್ಲಿ

ಹೊಸ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಕ್ಲಾಸಿಕ್ ಲುಕ್ ಆನ್ನು ಹೊಂದಿದೆ. ಈ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಮುಂಭಾಗದಿಂದ ಆಕರ್ಷಕವಾಗಿ ಕಾಣುತ್ತದೆ. ಕ್ಲಾಸಿಕ್ ಲುಕ್ ಗಾಗಿ ದುಂಡಾಗಿರುವ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ. ಇದರ ಜೊತೆಗೆ ಈ ಬೈಕ್‌ನಲ್ಲಿ ಟ್ವಿನ್ ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ ನೀಡಲಾಗಿದೆ.

ಹೆಚ್ಚಾದ ಇಂಪೀರಿಯಲ್ 400 ಬೈಕ್ ಬೇಡಿಕೆ - ಉತ್ಪಾದನೆ ಹೆಚ್ಚಿಸಿದ ಬೆನೆಲ್ಲಿ

ಸಸ್ಪೆಂಷನ್ ಗಾಗಿ, ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಅಳವಡಿಸಲಾಗಿದೆ. ಸುರಕ್ಷತೆಗಾಗಿ, ಈ ಬೈಕಿನಲ್ಲಿ ಎಬಿಎಸ್ ಹೊಂದಿರುವ ಡ್ಯುಯಲ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಬಜಾಜ್ ಪಲ್ಸರ್ ಎನ್ಎಸ್200 ಬೈಕ್

ಹೆಚ್ಚಾದ ಇಂಪೀರಿಯಲ್ 400 ಬೈಕ್ ಬೇಡಿಕೆ - ಉತ್ಪಾದನೆ ಹೆಚ್ಚಿಸಿದ ಬೆನೆಲ್ಲಿ

ಹೊಸ ಬೆನೆಲ್ಲಿ ಇಂಪೀರಿಯೇಲ್ 400 ಬೈಕಿನ ಹಿಂದಿನ ಮಾದರಿಯಂತೆ ಅದೇ ರೆಡ್, ಬ್ಲ್ಯಾಕ್ ಮತ್ತು ಸಿಲ್ವರ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಹೊಸ ಬಣ್ಣಗಳನ್ನು ಆಯ್ಕೆಯನ್ನು ನೀಡಲಾಗಿಲ್ಲ.

ಹೆಚ್ಚಾದ ಇಂಪೀರಿಯಲ್ 400 ಬೈಕ್ ಬೇಡಿಕೆ - ಉತ್ಪಾದನೆ ಹೆಚ್ಚಿಸಿದ ಬೆನೆಲ್ಲಿ

ಬೆನೆಲ್ಲಿ ಇಂಪೀರಿಯೇಲ್ 400 ಹಿಂದಿನ ಮಾದರಿಯು ಭಾರತೀಯ ಮಾರುಕಟ್ಟೆಯ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾದೆ. ಇಂಪೀರಿಯೇಲ್ 400 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಜಾವ ಬೈಕುಗಳಿಗೆ ಮತ್ತು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮಾದರಿಗೆ ನೇರ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Benelli India Upgrades Production Capacity: More Than 2,500 Imperiale 400 Bikes Delivered Since Launch Details In Kannada.
Story first published: Tuesday, July 21, 2020, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X