ಬಿಡುಗಡೆಯಾಯ್ತು ಬೆನ್ಲಿಂಗ್ ಒರಾ ಎಲೆಕ್ಟ್ರಿಕ್ ಸ್ಕೂಟರ್

ಚೀನಾ ಮೂಲದ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾದ ಬೆನ್ಲಿಂಗ್ ತನ್ನ ಒರಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಬೆಂಗಳೂರಿನಲ್ಲಿ ಈ ಒರಾ ಎಲೆಕ್ಟ್ರಿಕ್ ಸ್ಕೂಟರಿನ ಆನ್ ರೋಡ್ ಬೆಲೆಯು ರೂ.99,000ಗಳಾಗಿದೆ.

ಬಿಡುಗಡೆಯಾಯ್ತು ಬೆನ್ಲಿಂಗ್ ಒರಾ ಎಲೆಕ್ಟ್ರಿಕ್ ಸ್ಕೂಟರ್

ಬೆನ್ಲಿಂಗ್ ಕಂಪನಿಯು ಒರಾ ಸ್ಕೂಟರ್ ಅನ್ನು ಕೆಲ ತಿಂಗಳ ಹಿಂದೆ ಅನಾವರಣಗೊಳಿಸಿತ್ತು. ಈ ಸ್ಕೂಟರಿನಲ್ಲಿ 2500 ಬಿ‍ಎಲ್‍‍ಡಿಸಿ ಎಲೆಕ್ಟ್ರಿಕ್ ಮೋಟರ್ ಹಾಗೂ 72 ವೊಲ್ಟ್ / 40 ಎ‍‍ಹೆಚ್ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬೆನ್ಲಿಂಗ್ ಒರಾ ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರಿನ ವ್ಯಾಪ್ತಿಯ ಬಗ್ಗೆ ಬೇರೆ ಬೇರೆ ಡೀಲರ್‍‍ಗಳು ಬೇರೆ ಬೇರೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಡೀಲರ್ 60 ರಿಂದ 70 ಕಿ.ಮೀ ಎಂದು ಹೇಳಿದರೆ, ಮತ್ತೊಬ್ಬ ಡೀಲರ್ 90ರಿಂದ 100 ಕಿ.ಮೀ ಎಂದು ಹೇಳಿದ್ದಾರೆ.

ಬಿಡುಗಡೆಯಾಯ್ತು ಬೆನ್ಲಿಂಗ್ ಒರಾ ಎಲೆಕ್ಟ್ರಿಕ್ ಸ್ಕೂಟರ್

ಆದರೆ ಬೆನ್ಲಿಂಗ್ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಪೂರ್ತಿಯಾಗಿ ಚಾರ್ಜ್ ಆದರೆ 120 ಕಿ.ಮೀವರೆಗೂ ಚಲಿಸುತ್ತದೆ ಎಂದು ಹೇಳಿದೆ. ಬೆನ್ಲಿಂಗ್ ಕಂಪನಿಯು ಬ್ಯಾಟರಿಯ ಮೇಲೆ ಮೂರು ವರ್ಷಗಳ ವಾರಂಟಿ ನೀಡುತ್ತದೆ. ಈ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 65 ಕಿ.ಮೀಗಳಾಗಿದೆ.

ಬಿಡುಗಡೆಯಾಯ್ತು ಬೆನ್ಲಿಂಗ್ ಒರಾ ಎಲೆಕ್ಟ್ರಿಕ್ ಸ್ಕೂಟರ್

ಬೆನ್ಲಿಂಗ್ ಒರಾ ಸ್ಕೂಟರಿನಲ್ಲಿ ಬ್ರೇಕ್‍‍ಡೌನ್ ಸ್ಮಾರ್ಟ್ ಅಸಿಸ್ಟೆನ್ಸ್ ಸಿಸ್ಟಂ (ಬಿ‍ಎಸ್‍ಎ‍ಎಸ್) ಫೀಚರ್ ಅಳವಡಿಸಲಾಗಿದೆ. ಈ ಫೀಚರ್ ಸ್ಕೂಟರ್ ಬ್ರೇಕ್‍‍ಡೌನ್ ಆದಾಗ ಸ್ಕೂಟರ್ ಅನ್ನು ರಿಸ್ಟಾರ್ಟ್ ಮಾಡಿ ಚಲಿಸುವಂತೆ ಮಾಡುತ್ತದೆ.

ಬಿಡುಗಡೆಯಾಯ್ತು ಬೆನ್ಲಿಂಗ್ ಒರಾ ಎಲೆಕ್ಟ್ರಿಕ್ ಸ್ಕೂಟರ್

ಕಂಟ್ರೋಲರ್, ಮೋಟರ್ ಹಾಗೂ ಬ್ಯಾಟರಿಯಲ್ಲಿ ಯಾವುದೇ ತೊಂದರೆಯಾದರೆ ಬಿ‍ಎಸ್‍ಎ‍ಎಸ್ ಆನ್ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ಸ್ಕೂಟರ್ ರಿಸ್ಟಾರ್ಟ್ ಆಗಿ ಲೋ ಸ್ಪೀಡ್‍‍ನಲ್ಲಿ ಚಲಿಸುತ್ತದೆ. ಬಿ‍ಎಸ್‍ಎ‍ಎಸ್ ಆನ್ ಆದ ನಂತರ ಎಷ್ಟು ಪ್ರಮಾಣದ ಬ್ಯಾಟರಿ ಉಳಿದಿದೆಯೋ ಅಷ್ಟು ದೂರದವರೆಗೂ ಚಲಿಸುತ್ತದೆ.

ಬಿಡುಗಡೆಯಾಯ್ತು ಬೆನ್ಲಿಂಗ್ ಒರಾ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರಿನಲ್ಲಿರುವ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆಗಲು ನಾಲ್ಕು ಗಂಟೆಗಳು ಬೇಕಾಗುತ್ತವೆ. ಈ ಎಲೆಕ್ಟ್ರಿಕ್ ಸ್ಕೂಟರ್ ವೆಸ್ಪಾ ಸ್ಕೂಟರಿನಂತೆ ಕಾಣುತ್ತದೆ. ಈ ಸ್ಕೂಟರಿನಲ್ಲಿ ರೌಂಡ್ ಹೆಡ್‍‍ಲ್ಯಾಂಪ್, ಮುಂಭಾಗದ ಕೌಲ್‍‍ಗೆ ಇಂಟಿಗ್ರೇಟ್ ಮಾಡಲಾಗಿರುವ ಟರ್ನ್ ಸಿಗ್ನಲ್ ಇಂಡಿಕೇಟರ್, ದೊಡ್ಡ ಫ್ಲಾಟ್ ಸೀಟ್, ದೊಡ್ಡ ಫುಟ್ ಬೋರ್ಡ್, ರೆಟ್ರೊ ಶೈಲಿಯ ಟೇಲ್‍‍ಲೈಟ್‍‍ಗಳಿವೆ.

ಬಿಡುಗಡೆಯಾಯ್ತು ಬೆನ್ಲಿಂಗ್ ಒರಾ ಎಲೆಕ್ಟ್ರಿಕ್ ಸ್ಕೂಟರ್

ಒರಾ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿ ಕೀಲೆಸ್ ಸಿಸ್ಟಂ, ಯು‍ಎಸ್‍‍ಬಿ ಚಾರ್ಜರ್, ಆ್ಯಂಟಿ ಥೆಫ್ಟ್ ಅಲಾರಾಂ, ರೇರ್ ವ್ಹೀಲ್ ಇಂಟಿಗ್ರೇಟೆಡ್ ಲಾಕಿಂಗ್ ಸಿಸ್ಟಂ, ಪೂರ್ಣ ಪ್ರಮಾಣದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ರಿವರ್ಸ್ ಪಾರ್ಕ್ ಅಸಿಸ್ಟ್ ಗಳಿವೆ.

ಬಿಡುಗಡೆಯಾಯ್ತು ಬೆನ್ಲಿಂಗ್ ಒರಾ ಎಲೆಕ್ಟ್ರಿಕ್ ಸ್ಕೂಟರ್

ಬೆನ್ಲಿಂಗ್ ಇಂಡಿಯಾ ಈ ಮೊದಲು ಲೋ ಸ್ಪೀಡ್ ಸೆಗ್‍‍ಮೆಂಟ್‍‍ನಲ್ಲಿ ಕೃತಿ, ಐಕಾನ್ ಹಾಗೂ ಫಾಲ್ಕನ್ ಎಂಬ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿತ್ತು. ಈಗ ಒರಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹೈ ಸ್ಪೀಡ್ ಸ್ಕೂಟರ್ ಸೆಗ್‍‍ಮೆಂಟ್‍‍ನಲ್ಲಿ ಬಿಡುಗಡೆಗೊಳಿಸಿದೆ.

ಬಿಡುಗಡೆಯಾಯ್ತು ಬೆನ್ಲಿಂಗ್ ಒರಾ ಎಲೆಕ್ಟ್ರಿಕ್ ಸ್ಕೂಟರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬೆನ್ಲಿಂಗ್ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಈ ಸ್ಕೂಟರ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರಿಗೆ ಎಷ್ಟರ ಮಟ್ಟಿಗೆ ಪೈಪೋಟಿ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಚೇತಕ್ ಎಂಬುದು ಭಾರತೀಯರಿಗೆ ಭಾವನಾತ್ಮಕ ಸಂಗತಿಯಾಗಿದೆ.

Most Read Articles

Kannada
English summary
Benling Aura Electric Scooter Launched In India At Rs 99,000 On Road. Read in Kannada.
Story first published: Friday, January 24, 2020, 16:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X