ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ

ಭಾರತೀಯ ಆಟೋ ಉದ್ಯಮಕ್ಕೆ ಹೊಸದಾಗಿ ಪ್ರವೇಶಿಸಿರುವ ಆರ್‌ಆರ್ ಗ್ಲೊಬಲ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬ್ರ್ಯಾಂಡ್ ಬಿಗೌಸ್ ಆವೃತ್ತಿಯು ಕಳೆದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಮಾಡಿದ್ದು, ಇದೀಗ ಇವಿ ಸ್ಕೂಟರ್ ಖರೀದಿ ಮೇಲೆ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯವನ್ನು ಘೋಷಣೆ ಮಾಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಶೂನ್ಯ ಬಡ್ಡಿದರದ ಸಾಲ

ಹೌದು, ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಶೂನ್ಯ ಬಡ್ಡಿದರ ಸಾಲ ಸೌಲಭ್ಯ ಸಿಗಲಿದ್ದು, ಆಕರ್ಷಕ ಇಎಂಐ ದರಗಳನ್ನು ವಿಧಿಸಲಾಗಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ ಒದಗಿಸುವುದಕ್ಕಾಗಿ ಮನಿಟ್ಯಾಪ್ ಎನ್ನುವ ಹಣಕಾಸು ಸಂಸ್ಥೆಯೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿರುವ ಆರ್‌ಆರ್ ಗ್ಲೊಬಲ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವ ತವಕದಲ್ಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಶೂನ್ಯ ಬಡ್ಡಿದರದ ಸಾಲ

ಇನ್ನು ಹೊಸದಾಗಿ ಬಿಡುಗಡೆಯಾಗಿರುವ ಬಿಗೌಸ್ ಇವಿ ಸ್ಕೂಟರ್ ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ರಸ್ತೆಗಿಳಿದಿದ್ದು, ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಶೂನ್ಯ ಬಡ್ಡಿದರದ ಸಾಲ

ಸದ್ಯ ದೇಶಾದ್ಯಂತ ಹಲವಾರು ಆಟೋ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯತ್ತ ಹೆಚ್ಚು ಗಮನಹರಿಸುತ್ತಿದ್ದು, ದಿನಬಳಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಆರ್‌ಆರ್ ಗ್ಲೋಬಲ್ ಕಂಪನಿಯು ಕೂಡಾ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಮಾಡುವ ಮೂಲಕ ಆಟೋ ಉದ್ಯಮಕ್ಕೆ ಕಾಲಿಟ್ಟಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಶೂನ್ಯ ಬಡ್ಡಿದರದ ಸಾಲ

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಮೈಲೇಜ್ ರೇಂಜ್ ಆಧಾರದ ಮೇಲೆ A2 ಮತ್ತು B8 ಮಾದರಿಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, A2 ಮಾದರಿಯು ಲೀಡ್ ಆ್ಯಸಿಡ್ ಬ್ಯಾಟರಿ ಹೊಂದಲಿದ್ದರೆ B8 ಮಾದರಿಯು ಲೀಥಿಯಂ ಅಯಾನ್ ಬ್ಯಾಟರಿ ಹೊಂದಿರಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಶೂನ್ಯ ಬಡ್ಡಿದರದ ಸಾಲ

ಪ್ರತಿ ವೆರಿಯೆಂಟ್‌‌ನಲ್ಲೂ ಲೋ, ಮಿಡ್ ಮತ್ತು ಹೈ ಸ್ಪೀಡ್ ರೇಂಜ್ ನೀಡಲಾಗಿದ್ದು, ಲೀಡ್ ಆ್ಯಸಿಡ್ ಬ್ಯಾಟರಿ ಪ್ರೇರಿತ ಬಿಗೌಸ್ ಸ್ಕೂಟರ್‌ ಮಾದರಿಯು ಪ್ರತಿ ಚಾರ್ಜ್‌ಗೆ 78 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದರೆ, ಲೀಥಿಯಂ ಅಯಾನ್ ಬ್ಯಾಟರಿ ಪ್ರೇರಿತ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 70 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಶೂನ್ಯ ಬಡ್ಡಿದರದ ಸಾಲ

ಲೀಡ್ ಆ್ಯಸಿಡ್ ಬ್ಯಾಟರಿಯು ಪೂರ್ಣಪ್ರಮಾಣದ ಚಾರ್ಜ್ ಆಗಲು ಗರಿಷ್ಠ 8 ಗಂಟೆ ತೆಗೆದುಕೊಳ್ಳಲಿದ್ದರೆ ಲೀಥಿಯಂ ಅಯಾನ್ ಬ್ಯಾಟರಿಯು ಪೂರ್ಣಪ್ರಮಾದ ಚಾರ್ಜ್ ಆಗಲು ಗರಿಷ್ಠ 2 ಗಂಟೆ 15 ನಿಮಿಷ ಸಮಯಾವಕಾಶ ತೆಗೆದುಕೊಳ್ಳಲಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಶೂನ್ಯ ಬಡ್ಡಿದರದ ಸಾಲ

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ(ಎಕ್ಸ್‌ಶೋರೂಂ ಪ್ರಕಾರ)

A2 ಲೀಡ್ ಆ್ಯಸಿಡ್ ವೆರಿಯೆಂಟ್- ರೂ. 52,499

B8 ಲೀಡ್ ಆ್ಯಸಿಡ್ ವೆರಿಯೆಂಟ್- ರೂ. 62,999

A2 ಲೀಥಿಯಂ ಅಯಾನ್ ವೆರಿಯೆಂಟ್- ರೂ. 67,999

B8 ಲೀಥಿಯಂ ಅಯಾನ್ ವೆರಿಯೆಂಟ್- ರೂ. 82,999

B8 ಲೀ-ಟೆಕ್ ವೆರಿಯೆಂಟ್- ರೂ. 88,999

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಶೂನ್ಯ ಬಡ್ಡಿದರದ ಸಾಲ

ಇನ್ನು ಬಿಗೌಸ್ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳ ಗರಿಷ್ಠ ವೇಗವನ್ನು 50ಕಿ.ಮೀ ಮಿತಗೊಳಿಸಲಾಗಿದ್ದು, ಹೊಸ ಸ್ಕೂಟರ್‌ಗಳಲ್ಲಿ ತೆಗೆದುಹಾಕಬಹುದಾದ ಬ್ಯಾಟರಿ, ಎಲ್ಇಡಿ ಇನ್‌ಸ್ಟ್ರುಮೆಂಟ್ ಪ್ಯಾನೆಲ್, ಯುಎಸ್‌ಬಿ ಚಾರ್ಚಿಂಗ್ ಸಾಕೆಟ್, ತ್ರಿ ರೈಡಿಂಗ್ ಮೋಡ್ಸ್, ರಿವರ್ಸ್ ಅಸಿಸ್ಟ್, ಎರಡು ಬದಿ ಚಕ್ರದಲ್ಲೂ ಡಿಸ್ಕ್‌ ಬ್ರೇಕ್, ಸೈಡ್ ಸ್ಯಾಂಡ್ ಸೆನ್ಸಾರ್ ಮತ್ತು ಮಲ್ಟಿ ಕಲರ್ ಡಿಜಿಟಲ್ ಡಿಸ್‌ಪ್ಲೇ ಪಡೆದುಕೊಂಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಶೂನ್ಯ ಬಡ್ಡಿದರದ ಸಾಲ

ಜೊತೆಗೆ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಮಾರ್ಟ್ ಫೋನ್‌ನಲ್ಲಿ ಪ್ರತ್ಯೇಕವಾದ ಆ್ಯಪ್ ಮೂಲಕ ಹಲವು ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾಗಿದ್ದು, ಆ್ಯಪ್‌ ಮೂಲಕವೇ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡಬಹುದಲ್ಲದೆ ಸ್ಕೂಟರ್ ಇರುವ ಸ್ಥಳ ಗುರುತಿಸುವಿಕೆ ಮತ್ತು ಸೆಂಟರ್ ಸೀಟ್ ಲಾಕ್ ಅನ್ನು ಸಹ ನಿಯಂತ್ರಣ ಮಾಡಬಹುದಾಗಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಶೂನ್ಯ ಬಡ್ಡಿದರದ ಸಾಲ

ಆರ್‌ಆರ್ ಗ್ಲೋಬಲ್ ಕಂಪನಿಯು ಈಗಾಗಲೇ ಹೊಸ ಸ್ಕೂಟರ್ ಖರೀದಿಗಾಗಿ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ರೂ. 3 ಸಾವಿರ ಮುಂಗಡದೊಂದಿಗೆ ಆಸಕ್ತ ಗ್ರಾಹಕರು ಮುಂಗಡ ಪಾವತಿಸಬಹುದಾಗಿದೆ.

Most Read Articles

Kannada
Read more on ಬಿಗೌಸ್ bgauss
English summary
BGAUSS Partners With MoneyTap To Offer Attractive Financing Options. Read in Kannada.
Story first published: Thursday, August 13, 2020, 19:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X