ಆರ್‌ಆರ್ ಗ್ಲೋಬಲ್ ನಿರ್ಮಾಣದ ಮೊದಲ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಪುಣೆ ಮೂಲದ ಆರ್‌ಆರ್ ಗ್ಲೋಬಲ್ ಕಂಪನಿಯು ತನ್ನ ಮೊದಲ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ಬಿಡುಗಡೆಗೆ ಸಿದ್ದವಾಗಿದೆ.

ಆರ್‌ಆರ್ ಗ್ಲೋಬಲ್ ನಿರ್ಮಾಣದ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಸದ್ಯ ದೇಶಾದ್ಯಂತ ಹಲವಾರು ಆಟೋ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯತ್ತ ಹೆಚ್ಚು ಗಮನಹರಿಸುತ್ತಿದ್ದು, ದಿನಬಳಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಆರ್‌ಆರ್ ಗ್ಲೋಬಲ್ ಕಂಪನಿಯು ಕೂಡಾ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಮಾಡುವ ಮೂಲಕ ಆಟೋ ಉದ್ಯಮಕ್ಕೆ ಕಾಲಿಡುತ್ತಿದೆ. ಆರ್‌ಆರ್ ಗ್ಲೋಬಲ್ ಕಂಪನಿಯು ಬಿಡುಗಡೆ ಮಾಡಲಿರುವ ಮೊದಲ ಎಲೆಕ್ಟ್ರಿಕ್ ಮಾದರಿಯು ಅತ್ಯುತ್ತಮ ಬ್ಯಾಟರಿ ಸೌಲಭ್ಯದೊಂದಿಗೆ ಬಿಡುಗಡೆಯಾಗಲಿದ್ದು, ಗ್ರಾಹಕರ ಬೇಡಿಕೆಯೆಂತೆ ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಆರ್‌ಆರ್ ಗ್ಲೋಬಲ್ ನಿರ್ಮಾಣದ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಮೈಲೇಜ್ ರೇಂಜ್ ಆಧಾರದ ಮೇಲೆ A2 ಮತ್ತು B8 ಮಾದರಿಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, A2 ಮಾದರಿಯು ಲೀಡ್ ಆ್ಯಸಿಡ್ ಬ್ಯಾಟರಿ ಹೊಂದಲಿದ್ದರೆ B8 ಮಾದರಿಯು ಲೀಥಿಯಂ ಅಯಾನ್ ಬ್ಯಾಟರಿ ಹೊಂದಿರಲಿದೆ.

ಆರ್‌ಆರ್ ಗ್ಲೋಬಲ್ ನಿರ್ಮಾಣದ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಪ್ರತಿ ವೆರಿಯೆಂಟ್‌‌ನಲ್ಲೂ ಲೋ, ಮಿಡ್ ಮತ್ತು ಹೈ ಸ್ಪೀಡ್ ರೇಂಜ್ ನೀಡಲಾಗಿದ್ದು, ಲೀಡ್ ಆ್ಯಸಿಡ್ ಬ್ಯಾಟರಿ ಪ್ರೇರಿತ ಬಿಗೌಸ್ ಸ್ಕೂಟರ್‌ ಮಾದರಿಯು ಪ್ರತಿ ಚಾರ್ಜ್‌ಗೆ 78 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದರೆ, ಲೀಥಿಯಂ ಅಯಾನ್ ಬ್ಯಾಟರಿ ಪ್ರೇರಿತ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 70 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಆರ್‌ಆರ್ ಗ್ಲೋಬಲ್ ನಿರ್ಮಾಣದ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಆದರೆ ಲೀಡ್ ಆ್ಯಸಿಡ್ ಬ್ಯಾಟರಿಯು ಪೂರ್ಣಪ್ರಮಾಣದ ಚಾರ್ಜ್ ಆಗಲು ಗರಿಷ್ಠ 8 ಗಂಟೆ ತೆಗೆದುಕೊಳ್ಳಲಿದ್ದರೆ ಲೀಥಿಯಂ ಅಯಾನ್ ಬ್ಯಾಟರಿಯು ಪೂರ್ಣಪ್ರಮಾದ ಚಾರ್ಜ್ ಆಗಲು ಗರಿಷ್ಠ 2 ಗಂಟೆ 15 ನಿಮಿಷ ಸಮಯಾವಕಾಶ ತೆಗೆದುಕೊಳ್ಳಲಿದೆ.

ಆರ್‌ಆರ್ ಗ್ಲೋಬಲ್ ನಿರ್ಮಾಣದ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಗರಿಷ್ಠ ವೇಗವನ್ನು 50ಕಿ.ಮೀ ಮಿತಗೊಳಿಸಲಾಗಿದ್ದು, ಹೊಸ ಸ್ಕೂಟರ್‌ಗಳಲ್ಲಿ ತೆಗೆದುಹಾಕಬಹುದಾದ ಬ್ಯಾಟರಿ, ಎಲ್ಇಡಿ ಇನ್‌ಸ್ಟ್ರುಮೆಂಟ್ ಪ್ಯಾನೆಲ್, ಯುಎಸ್‌ಬಿ ಚಾರ್ಚಿಂಗ್ ಸಾಕೆಟ್, ತ್ರಿ ರೈಡಿಂಗ್ ಮೋಡ್ಸ್, ರಿವರ್ಸ್ ಅಸಿಸ್ಟ್, ಎರಡು ಬದಿ ಚಕ್ರದಲ್ಲೂ ಡಿಸ್ಕ್‌ ಬ್ರೇಕ್, ಸೈಡ್ ಸ್ಯಾಂಡ್ ಸೆನ್ಸಾರ್ ಮತ್ತು ಮಲ್ಟಿ ಕಲರ್ ಡಿಜಿಟಲ್ ಡಿಸ್‌ಪ್ಲೇ ಪಡೆದುಕೊಂಡಿದೆ.

ಆರ್‌ಆರ್ ಗ್ಲೋಬಲ್ ನಿರ್ಮಾಣದ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಜೊತೆಗೆ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಮಾರ್ಟ್ ಫೋನ್‌ನಲ್ಲಿ ಪ್ರತ್ಯೇಕವಾದ ಆ್ಯಪ್ ಮೂಲಕ ಹಲವು ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾಗಿದ್ದು, ಆ್ಯಪ್‌ ಮೂಲಕವೇ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡಬಹುದಲ್ಲದೆ ಸ್ಕೂಟರ್ ಇರುವ ಸ್ಥಳ ಗುರುತಿಸುವಿಕೆ ಮತ್ತು ಸೆಂಟರ್ ಸೀಟ್ ಲಾಕ್ ಅನ್ನು ಸಹ ನಿಯಂತ್ರಣ ಮಾಡಬಹುದಾಗಿದೆ.

MOST READ: ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಗೆ ಚಾಲನೆ ನೀಡಿದ ಎಥರ್

ಆರ್‌ಆರ್ ಗ್ಲೋಬಲ್ ನಿರ್ಮಾಣದ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಹೊಸ ಎಲೆಕ್ಟ್ರಿಕ್ ಅನ್ನು ಮುಂಬರುವ ಅಗಸ್ಟ್ ಮಧ್ಯಂತರದಿಂದ ವಿತರಣೆ ಆರಂಭಿಸುವುದಾಗಿ ಆರ್‌ಆರ್ ಗ್ಲೋಬಲ್ ಕಂಪನಿಯು ಅಧಿಕೃತ ಮಾಹಿತಿ ನೀಡಿದ್ದು, ಹೊಸ ಯೋಜನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡಿದೆ.

ಆರ್‌ಆರ್ ಗ್ಲೋಬಲ್ ನಿರ್ಮಾಣದ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಭಾರತದಲ್ಲಿ ಹೊಸ ಯೋಜನೆಗಾಗಿ ಮುಂದಿನ ಮೂರು ವರ್ಷಗಳಿಗೆ ರೂ.125 ಕೋಟಿ ಬಂಡವಾಳ ಹೂಡಿಕೆ ಮಾಡಲಿರುವ ಆರ್‌ಆರ್ ಗ್ಲೋಬಲ್ ಕಂಪನಿಯು ಪುಣೆಯಲ್ಲಿರುವ ತನ್ನ ದಿನಬಳಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನಾ ಘಟಕದಲ್ಲೇ ಹೊಸ ಇವಿ ಸ್ಕೂಟರ್ ಅನ್ನು ನಿರ್ಮಾಣಗೊಳಿಸಲಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಆರ್‌ಆರ್ ಗ್ಲೋಬಲ್ ನಿರ್ಮಾಣದ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಪ್ರಸಕ್ತ ಆರ್ಥಿಕ ವರ್ಷದಲ್ಲಿ 80 ಸಾವಿರ ಯುನಿಟ್ ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಗಿದ್ದು, ಹೊಸ ಸ್ಕೂಟರ್ ಮಾದರಿಯು ಬ್ಯಾಟರಿ ರೇಂಜ್ ಆಧಾರದ ಮೇಲೆ ರೂ. 60 ಸಾವಿರದಿಂದ ರೂ.90 ಸಾವಿರ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
English summary
BGauss Unveils Its First Two Models For The Indian Market. Read in Kannada.
Story first published: Thursday, July 2, 2020, 18:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more