ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಅಡ್ವೆಂಚರ್ ಬೈಕುಗಳು

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯ ಜಿಎಸ್ ಸರಣಿ ಬೈಕುಗಳು 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಎಫ್ 750 ಜಿಎಸ್, ಎಫ್ 850 ಜಿಎಸ್ ಮತ್ತು ಎಫ್ 850 ಜಿಎಸ್ ಎಂಬ ಮೂರು ಹೊಸ ಅಡ್ವೆಂಚರ್ ಬೈಕುಗಳನ್ನು ಅನಾವರಣಗೊಳಿಸಿದೆ. ಈ ಅಡ್ವೆಂಚರ್ ಬೈಕುಗಳನ್ನು ಶೀಘ್ರದಲ್ಲೇ ಭಾರತದಲ್ಲಿ ಪರಿಚಯಿಸಲಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಅಡ್ವೆಂಚರ್ ಬೈಕುಗಳು

ಈ ಅಡ್ವೆಂಚರ್ ಬೈಕುಗಳು ಬ್ಲ್ಯಾಕ್ ಮತ್ತು ಗೋಲ್ಡ್ ಬಣ್ಣದ ಆಯ್ಕೆಗಳನ್ನು ಹೊಂದಿರಲಿದೆ. ಈ ಬೈಕಿನ ನಕಲ್ ಗಾರ್ಡ್‌ಗಳು, ಸೀಟುಗಳು, ಟ್ಯಾಂಕ್ ಮತ್ತು ಇತರ ಸ್ಥಳಗಳಲ್ಲಿ ಯೆಲ್ಲೊ ಬಣ್ಣದ ಅಂಶಗಳು ಮತ್ತು ಸೈಡ್ ಪ್ಯಾನೆಲ್‌ಗಳಲ್ಲಿ ‘40 ಇಯರ್ಸ್ ಜಿಎಸ್' ಎಂಬ ಬ್ಯಾಡ್ಜಿಂಗ್ ಅನ್ನು ಒಳಗೊಂಡಿದೆ. ಈ ಬೈಕುಗಳಲ್ಲಿ ರೇಸಿಂಗ್ ರೆಡ್, ರೇಸಿಂಗ್ ಬ್ಲೂ ಮತ್ತು ರ‍್ಯಾಲಿ ಬಣ್ಣಗಳ ಆಯ್ಕೆಯಗಳಲ್ಲಿಯು ಲಭ್ಯವಿರಲಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಅಡ್ವೆಂಚರ್ ಬೈಕುಗಳು

ಈ ಬೈಕುಗಳಲ್ಲಿ ಎಲ್‌ಇಡಿ ಟರ್ನ್ ಸಿಗ್ನಲ್ ಇಂಡೀಕೆಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು, ಕಾರ್ನರಿಂಗ್ ಎಬಿಎಸ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಅಡ್ವೆಂಚರ್ ಬೈಕುಗಳು

ಈ ಅಡ್ವೆಂಚರ್ ಬೈಕುಗಳಲ್ಲಿ 853 ಸಿಸಿ ಪ್ಯಾರೆಲಲ್ ಟ್ವಿನ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಗಳನ್ನು ಎರಡು ರೀತಿಯಲ್ಲಿ ಟ್ಯೂನ್ ಮಾಡಲಾಗಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಅಡ್ವೆಂಚರ್ ಬೈಕುಗಳು

ಬಿಎಂಡಬ್ಲ್ಯು ಎಫ್ 750 ಜಿಎಸ್‌ನಲ್ಲಿರುವ ಎಂಜಿನ್ 77 ಬಿಹೆಚ್‌ಪಿ ಪವರ್ ಮತ್ತು 83 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಬಿಎಂಡಬ್ಲ್ಯು ಎಫ್ 850 ಜಿಎಸ್ ಮತ್ತು ಎಫ್ 850 ಜಿಎಸ್ ಮಾದರಿಗಳಲ್ಲಿನ ಎಂಜಿನ್ 95 ಬಿಹೆಚ್‌ಪಿ ಪವರ್ ಮತ್ತು 92 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಅಡ್ವೆಂಚರ್ ಬೈಕುಗಳು

ಈ ಅಡ್ವೆಂಚರ್ ಬೈಕುಗಳು ಉತ್ತಮ ಇಂಧನ ದಕ್ಷತೆ ಮತ್ತು ಹೆಚ್ಚು ಕಾರ್ಯಕ್ಷಮತೆಯನ್ನು ನೀಡಲು ಎಲ್ಲಾ ಮೂರು ಮಾದರಿಗಳಲ್ಲಿ ಪ್ರೊ ರೈಡಿಂಗ್ ಮೋಡ್‌ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ರ್ಯಾಗ್ ಟಾರ್ಕ್ ಕಂಟ್ರೋಲ್ (ಎಂಎಸ್ಆರ್) ಮತ್ತು ಡೈನಾಮಿಕ್ ಬ್ರೇಕಿಂಗ್ ಕಂಟ್ರೋಲ್ (ಡಿಬಿಸಿ) ಅನ್ನು ನೀಡಲಾಗಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಅಡ್ವೆಂಚರ್ ಬೈಕುಗಳು

ಇನ್ನು ಬಿಎಂಡಬ್ಲ್ಯು ಮೋಟೊರಾಡ್ ಇತರ ಸುದ್ದಿಗಳ ಬಗ್ಗೆ ಹೇಳುವುದಾದರೆ. ಬಿಎಂಡಬ್ಲ್ಯು ಕಂಪನಿಯು ತನ್ನ ಹೊಸ ಎಸ್ 1000 ಎಕ್ಸ್ಆರ್ ಪ್ರೊ ಅಡ್ವೆಂಚರ್-ಟೂರರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಪ್ರೊ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.20.90 ಲಕ್ಷಗಳಾಗಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಅಡ್ವೆಂಚರ್ ಬೈಕುಗಳು

ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಪ್ರೊ ಎಂಬ ಒಂದೇ ರೂಪಾಂತರದಲ್ಲಿ ಬಿಡುಗಡೆಗೊಳಿಸಿದೆ. ಈ ಅಡ್ವೆಂಚರ್ ಟೂರರ್ ಬಿಎಂಡಬ್ಲ್ಯೂ ಎಸ್ 1000 ಎಕ್ಸ್ಆರ್ ಮಾದರಿ ಬ್ರ್ಯಾಂಡ್‌ನ ಜನಪ್ರಿಯ ಸ್ಫೋರ್ಟ್ ಬೈಕ್ ಆದ ಎಸ್ 1000 ಆರ್‌ಆರ್‌ ಅನ್ನು ಆಧರಿಸಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಅಡ್ವೆಂಚರ್ ಬೈಕುಗಳು

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಹೊಸ ಎಫ್ 750 ಜಿಎಸ್, ಎಫ್ 850 ಜಿಎಸ್ ಮತ್ತು ಎಫ್ 850 ಜಿಎಸ್ ಅಡ್ವೆಂಚರ್ ಬೈಕುಗಳನ್ನು ಯುರೋಪಿನಲ್ಲಿ ಈ ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ಅಡ್ವೆಂಚರ್ ಬೈಕುಗಳನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
BMW F 750 GS, F 850 GS, F 850 GS Adventure 40 Year GS Models Unveiled. Read In Kannada.
Story first published: Friday, July 17, 2020, 20:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X