Just In
Don't Miss!
- Finance
ಪ್ರತಿ ಲೀಟರ್ ಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕ
- News
ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ
- Sports
ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ನೀಡಿದ ಪ್ರದರ್ಶನ ಅಸಾಮಾನ್ಯ: ಮೈಕಲ್ ವಾನ್
- Movies
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ
ಬಿಎಂಡಬ್ಲ್ಯು ಮೋಟರ್ರಾಡ್ ಕಂಪನಿಯು ತನ್ನ ಹೊಸ ಆರ್ 18 ಕ್ರೂಸರ್ ಪ್ರೊಡಕ್ಷನ್-ಸ್ಪೆಕ್ ಆವೃತ್ತಿಯನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಇದೀಗ ಬಿಎಂಡಬ್ಲ್ಯು ಮೋಟರ್ರಾಡ್ ಕಂಪನಿಯು ಆರ್ 18 ಕ್ರೂಸರ್ ಬೈಕ್ಗಾಗಿ ಅನಧಿಕೃತವಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ.

ಬಿಎಂಡಬ್ಲ್ಯು ಮೋಟರ್ರಾಡ್ ಕಂಪನಿಯು ತನ್ನ ಹೊಸ ಆರ್ 18 ಕ್ರೂಸರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಬೈಕಿನ ವಿತರಣೆಯನ್ನು ಅಕ್ಟೋಬರ್ ತಿಂಗಳಲ್ಲಿ ಆರಂಭಿಸಬಹುದು. ಹೊಸ ಆರ್ 18 ಕ್ರೂಸರ್ ಬೈಕ್ಗಾಗಿ ರೂ.1 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದುದಾಗಿದೆ. ಈ ಜರ್ಮನ್ ಬ್ರ್ಯಾಂಡ್ನ ಹೊಸ ಬಿಎಂಡಬ್ಲ್ಯು ಆರ್ 18 ಕ್ರೂಸರ್ ಅನ್ನು ಕಾನ್ಸೆಪ್ಟ್ ಮಾದರಿಯಾಗಿ ಕಳೆದ ವರ್ಷ ಪ್ರದರ್ಶಿಸಲಾಗಿತ್ತು. ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಪ್ರೊಡಕ್ಷನ್ ಸ್ಪೆಕ್ ಆವೃತ್ತಿಯು ಬ್ರ್ಯಾಂಡ್ನ ಕ್ಲಾಸಿಕ್ ಆರ್ 5 ಬೈಕಿನ ವಿನ್ಯಾಸದಿಂದ ಸ್ಪೋರ್ತಿ ಪಡೆದಿದೆ.

ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಡೊಡ್ಡ ಟಿಯರ್ ಡ್ರಾಪ್ ಫ್ಯೂಯಲ್ ಟ್ಯಾಂಕ್ನೊಂದಿಗೆ ರೆಟ್ರೊ-ಮಾರ್ಡನ್ ವಿನ್ಯಾಸವನ್ನು ಹೊಂದಿದೆ. ಈ ಬೈಕಿನಲ್ಲಿ ಹಲವಾರು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ಹೊಸ ಬೈಕಿನಲ್ಲಿ 1800 ಸಿಸಿ ಬಾಕ್ಸರ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಹೊಸ ಬಿಎಂಡಬ್ಲ್ಯು ಆರ್ 18 ಕ್ರೂಸರ್ ಅನ್ನು ಸ್ಟ್ಯಾಂಡರ್ಡ್ ಮತ್ತು ಫಸ್ಟ್ ಎಡಿಷನ್ ಎಂಬ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ.ಇದರಲ್ಲಿ ಫಸ್ಟ್ ಎಡಿಷನ್ ಬೈಕ್ ಆರ್ 5 ಕ್ಲಾಸಿಕ್ ಮಾದರಿಯಂತಿದೆ. ಈ ಬೈಕಿನಲ್ಲಿ ಸ್ಟೈಪಿಂಗ್, ಲೆದರ್ ಬೆಲ್ಟ್ ಮತು ಸ್ಲಾಟ್ಡ್ ಸ್ಕ್ರೂಗಳು ಒಳಗೊಂಡಿದೆ.

ಬಿಎಂಡಬ್ಲ್ಯೂ ಆರ್ 18 ಕ್ರೂಸರ್ 1,731 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿರುತ್ತದೆ. ಇದು ದೊಡ್ಡ ಗಾತ್ರದ ಬೈಕ್ ಆಗಿದೆ. ಬಿಎಂಡಬ್ಲ್ಯು ಆರ್ 18 ಕ್ರೂಸರ್ ಬೈಕ್ ಹೋಂಡಾ ಗೋಲ್ಡ್ ವಿಂಗ್ ಮಾದರಿಗಿಂತ ಉದ್ದವಾಗಿದೆ.

ಹೊಸ ಬಿಎಂಡಬ್ಲ್ಯು ಆರ್ 18 ಕ್ರೂಸರ್ ಬೈಕ್ ತನ್ನ ಪ್ರತಿಸ್ಪರ್ಧಿ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಗಿಂತ 23ಕೆಜಿ ಹೆಚ್ಚು ಭಾರವನ್ನು ಹೊಂದಿದೆ. ಬಿಎಂಡಬ್ಲ್ಯು ಆರ್ 18 ಕ್ರೂಸರ್ ಬೈಕ್ ರೆಟ್ರೂ ಲುಕ್ ಅನ್ನು ಹೊರತುಪಡಿಸಿ ಉಳಿದಂತೆ ಎಲ್ಲವೂ ಮಾರ್ಡನ್ ಫೀಚರ್ಗಳನ್ನು ಒಳಗೊಂಡಿದೆ.

ಈ ಬೈಕಿನಲ್ಲಿ ಎಲೆಕ್ಟ್ರಾನಿಕ್ಸ್ ಫೀಚರ್ಗಳನ್ನು ಅಳವಡಿಸಿದ್ದಾರೆ. ಇದರಲ್ಲಿ ಮೂರು ರೈಡಿಂಗ್ ಮೋಡ್ಗಳನ್ನು ಹೊಂದಿದೆ. ಈ ಹೊಸ ಬೈಕ್ ಆಟೋಮ್ಯಾಟಿಕ್ ಸ್ಟೆಬಿಲಿಟಿ ಕಂಟ್ರೋಲ್, ಮೋಟಾರ್ ಸ್ಲಿಪ್ ರೆಗ್ಯೋಲೆಷನ್ ಮತ್ತು ಎಬಿಎಸ್ ಆಗಿದೆ.

ಹೊಸ ಬಿಎಂಡಬ್ಲ್ಯು ಆರ್ 18 ಕ್ರೂಸರ್ ಬೈಕಿನಲ್ಲಿ ಹೆಡ್ ಲ್ಯಾಂಪ್, ಟೇಲ್ ಲೈಟ್, ಡಿಆರ್ಎಲ್ ಸೇರಿದಂತೆ ಎಲ್ಇಡಿ ಲೈಟಿಂಗ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸಣ್ಣ ಡಿಜೆಟಲ್ ಡಿಸ್ಪ್ಲೇ ದೊಡ್ಡ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಹೊಸ ಬಿಎಂಡಬ್ಲ್ಯು ಆರ್ 18 ಕ್ರೂಸರ್ನಲ್ಲಿ 1802 ಸಿಸಿ ಬಾಕ್ಸರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 4,750 ಆರ್ಪಿಎಂನಲ್ಲಿ 91 ಬಿಹೆಚ್ಪಿ ಪವರ್ ಮತ್ತು 2000 ರಿಂದ 4000 ಆರ್ಪಿಎಂ ನಡುವೆ 149 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್ಬಾಕ್ಸ್ ಜೋಡಿಸಲಾಗಿದೆ. ಆರ್ 5 ಕ್ಲಾಸಿಕ್ನಿಂದ ಸ್ಫೂರ್ತಿ ಪಡೆದ ಹೊಸ ಬಿಎಂಡಬ್ಲ್ಯು ಆರ್ 18 ಕ್ರೂಸರ್ ಸಹ ಎಕ್ಸ್ಪೋಸ್ಡ್ ಶಾಫ್ಟ್ ಡ್ರೈವ್ನೊಂದಿಗೆ ಬರುತ್ತದೆ.

ಈ ಹೊಸ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಬೈಕ್ ಭಾರತದಲ್ಲಿ ಮಾರಾಟ ಮಾಡಲು ಇದನ್ನು ಸಿಬಿಯು ಮೂಲಕ ತಂದು ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಬಹುದು. ಬಿಎಂಡಬ್ಲ್ಯು ಆರ್ 18 ಜರ್ಮನ್ ಬ್ರಾಂಡ್ನಿಂದ ಪೂರ್ಣ ಪ್ರಮಾಣದ ಹೆವಿವೇಯ್ಟ್ ಕ್ರೂಸರ್ ಕೊಡುಗೆಯಾಗಿದೆ.