Just In
- 5 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 5 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 6 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 6 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯುರೋಪಿನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ ಬಿಎಂಡಬ್ಲ್ಯು ಜಿ 310 ಆರ್ ಬೈಕ್
ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ ಹೊಸ ಜಿ 310 ಆರ್ ಬೈಕನ್ನು ಯುರೋಪಿನ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಯುರೋಪಿನ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಮೇಡ್ ಇನ್ ಇಂಡಿಯಾ ಮಾದರಿಯಾಗಿದೆ.

ಟಿವಿಎಸ್ ಕಂಪನಿಯು ಹೊಸೂರಿನ ಘಟಕದಲ್ಲಿ ಬೈಕುಗಳನ್ನು ತಯಾರಿಸುತ್ತದೆ. ಈ ಹೊಸೂರು ಘಟಕದಿಂದಲೇ ಅಂತರರಾಷ್ಟ್ರೀಯ ಮಾರುಕಟ್ಟೆಗೆ ರಫ್ತು ಮಾಡಲಾಗುತ್ತದೆ. ಯುರೋಪಿನ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಬೆಲೆಯು ಅಂದಾಜು ರೂ.4.81 ಲಕ್ಷಗಳಾಗಿದೆ. ಹಿಂದಿನ ಯುರೋಪ್ ಮಾದರಿಗಿಂತ ತುಸು ದುಬಾರಿಯಾಗಿದೆ. ಯುರೋಪಿನ ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆಯನ್ನು ನಡೆಸದೆ ಬಿಎಂಡಬ್ಲ್ಯು ಜಿ 310 ಆರ್ ಬೈಕನ್ನು ಬಿಡುಗಡೆಗೊಳಿಸಿದೆ.

ಹೊಸ ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಸ್ಟೈಲಿಂಗ್ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ ಹೆಡ್ಲ್ಯಾಂಪ್, ಟರ್ನ್ ಸಿಗ್ನಲ್ಗಳು ಮತ್ತು ಟೈಲ್ ಲ್ಯಾಂಪ್ಗಾಗಿ ಎಲ್ಇಡಿ ಲೈಟಿಂಗ್ ಅನ್ನು ನವೀಕರಿಸಲಾಗಿದೆ. 2020ರ ನವೀಕರಣದ ಭಾಗವಾಗಿ, ಜಿ 310 ಆರ್ ಪ್ಯಾಲೆಟ್ಗೆ ಬಿಎಂಡಬ್ಲ್ಯು ಹೊಸ ಬಣ್ಣಗಳನ್ನು ಸೇರಿಸಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್

ಹೊಸ ಬಿಎಂಡಬ್ಲ್ಯು ಜಿ 310 ಆರ್ ಬೈಕಿನಲ್ಲಿ 313 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,700 ಆರ್ಪಿಎಂನಲ್ಲಿ 34 ಬಿಹೆಚ್ಪಿ ಮತ್ತು 7,700 ಆರ್ಪಿಎಂನಲ್ಲಿ 28 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ತನ್ನ ಪ್ರತಿಸ್ಪರ್ಧಿ ಬೈಕುಗಳಗಿಂತ ಹೆಚ್ಚಿನ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿರುವುದರಿಂದ ಹೆಚ್ಚಿನ ಯುವಗ್ರಾಹಕರನ್ನು ಸೆಳೆಯಬಹುದು.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಈ ಹೊಸ ಜಿ 310 ಆರ್ ಬೈಕ್ 143 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಹೊಸ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಕೇವಲ 7.17 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ದೊಡ್ಡ ಬಿಎಂಡಬ್ಲ್ಯು ಆರ್ 1250 ಜಿಎಸ್ ಮಾದರಿಗಳಿಂದ ಹಲವಾರು ಫೀಚರ್ ಗಳನ್ನು ಎರವಲು ಪಡೆಯಲಾಗಿದೆ. ಇದರಲ್ಲಿ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಎಂಡಬ್ಲ್ಯು ಆರ್ 1250 ಜಿಎಸ್ ಮಾದರಿಯ ವಿಂಡ್ಸ್ಕ್ರೀನ್ ಅನ್ನು ಹೊಂದಿದೆ.
MOST READ: ಅಕ್ಟೋಬರ್ ತಿಂಗಳಿನಲ್ಲಿ 8 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಇನ್ನು ಹೊಸ ಜಿ 310 ಆರ್ ಬೈಕಿನಲ್ಲಿ ಹೊಂದಾಣಿಕೆ ಮಾಡಬಹುದಾದ ಕ್ಲಚ್ ಮತ್ತು ಹ್ಯಾಂಡ್ಬ್ರೇಕ್ ಲಿವರ್ ಅಳವಡಿಸಲಾಗಿದೆ. ನಾಲ್ಕು ಹೊಂದಾಣಿಕೆ ಮಟ್ಟಗಳಿವೆ. ಇದನ್ನು ಗ್ರಾಹಕರು ತಮಗೆ ಸಹಕಾರಿಯಾಗುವಂತೆ ಕಸ್ಟಮೈಸ್ ಮಾಡಬಹುದು.

ಹೊಸ ಬಿಎಂಡಬ್ಲ್ಯು ಜಿ 310 ಆರ್ ಯುರೋಪಿನ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 390, ಬಜಾಜ್ ಡೊಮಿನಾರ್ 400 ಮತ್ತು ಟಿವಿಎಸ್ ಅಪಾಚೆ ಆರ್ಆರ್310 ಬೈಕುಗಳಿಗೆ ಪೈಪೋಟಿ ನೀಡುತ್ತದೆ.