ಹೊಸ ಸರಣಿಯ ಇ-ಬೈಸಿಕಲ್ ಬಿಡುಗಡೆಗೊಳಿಸಿದ ಗೋಜೀರೊ

ಬ್ರಿಟನ್ ಮೂಲದ ಎಲೆಕ್ಟ್ರಿಕ್ ಬೈಕ್ ಹಾಗೂ ಲೈಫ್‌ಸ್ಟೈಲ್ ಕಂಪನಿಯಾದ ಗೋಜೀರೊ ಮೊಬಿಲಿಟಿ ತನ್ನ ಹೊಸ ಪರ್ಫಾಮೆನ್ಸ್ ಇ-ಬೈಸಿಕಲ್‌ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಹೊಸ ಸರಣಿಯ ಇ-ಬೈಸಿಕಲ್ ಬಿಡುಗಡೆಗೊಳಿಸಿದ ಗೋಜೀರೊ

ಈ ಹೊಸ ಬೈಸಿಕಲ್ ನ ಆರಂಭಿಕ ಬೆಲೆ ರೂ.19,999ಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆ ರೂ.34,999ಗಳಾಗಿದೆ. ಗೋಜೀರೊ ಕಂಪನಿಯು ಭಾರತದಲ್ಲಿ ಸ್ಕೇಲಿಂಗ್, ಸ್ಕೇಲಿಂಗ್ ಲೈಟ್ ಹಾಗೂ ಸ್ಕೇಲಿಂಗ್ ಪ್ರೊ ಸೇರಿದಂತೆ ಮೂರು ಮಾದರಿಗಳನ್ನು ಬಿಡುಗಡೆಗೊಳಿಸಿದೆ. ಸ್ಕೇಲಿಂಗ್ ಮಾದರಿಯ ಬೆಲೆ ರೂ.19,999ಗಳಾಗಿದೆ.

ಹೊಸ ಸರಣಿಯ ಇ-ಬೈಸಿಕಲ್ ಬಿಡುಗಡೆಗೊಳಿಸಿದ ಗೋಜೀರೊ

ಸ್ಕೇಲಿಂಗ್ ಲೈಟ್ ಮಾದರಿಯ ಬೆಲೆ ರೂ.24,999ಗಳಾದರೆ, ಟಾಪ್ ಎಂಡ್ ಮಾದರಿಯಾದ ಸ್ಕೇಲಿಂಗ್ ಪ್ರೊ ಬೆಲೆ ರೂ.34,999ಗಳಾಗಿದೆ. ಈ ಬೈಸಿಕಲ್ ಗಳನ್ನು ಬ್ರಿಟನ್‌ನಲ್ಲಿ ವಿನ್ಯಾಸಗೊಳಿಸಿ, ಭಾರತದಲ್ಲಿ ತಯಾರಿಸಲಾಗಿದೆ ಎಂದು ಕಂಪನಿ ಹೇಳಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೊಸ ಸರಣಿಯ ಇ-ಬೈಸಿಕಲ್ ಬಿಡುಗಡೆಗೊಳಿಸಿದ ಗೋಜೀರೊ

ಈ ಬೈಸಿಕಲ್ ಗಳು ಇಂಡೋ-ಬ್ರಿಟಿಷ್ ಕರಕುಶಲತೆಯ ಪರಿಪೂರ್ಣ ಮಿಶ್ರಣವಾಗಿದೆ ಎಂದು ಗೋಜೀರೊ ಹೇಳಿದೆ. ಮಾಹಿತಿಗಳ ಪ್ರಕಾರ ಸ್ಕೇಲಿಂಗ್ ಹಾಗೂ ಸ್ಕೇಲಿಂಗ್ ಪ್ರೊ ಮಾದರಿಗಳನ್ನು ಆನ್‌ಲೈನ್ ಹಾಗೂ ಡೀಲರ್ ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

ಹೊಸ ಸರಣಿಯ ಇ-ಬೈಸಿಕಲ್ ಬಿಡುಗಡೆಗೊಳಿಸಿದ ಗೋಜೀರೊ

ಸ್ಕೇಲಿಂಗ್ ಲೈಟ್ ಮಾದರಿಯನ್ನು ಕಂಪನಿಯ ವೆಬ್‌ಸೈಟ್ ಹಾಗೂ ಇತರ ಇ-ಕಾಮರ್ಸ್ ಪ್ಲಾಟ್‌ಫಾರಂಗಳ ಮೂಲಕ ಮಾರಾಟ ಮಾಡಲಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೊಸ ಸರಣಿಯ ಇ-ಬೈಸಿಕಲ್ ಬಿಡುಗಡೆಗೊಳಿಸಿದ ಗೋಜೀರೊ

ಈ ಬೈಸಿಕಲ್ ಬಿಡುಗಡೆ ವೇಳೆ ಮಾತನಾಡಿದ ಗೋಜೀರೊ ಮೊಬಿಲಿಟಿ ಸಿಇಒ ಅಂಕಿತ್ ಕುಮಾರ್, ಕರೋನಾ ವೈರಸ್ ನಂತರದ ದಿನಗಳಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುವ ಕಾರಣ ಜಾಗತಿಕವಾಗಿ ಇ-ಬೈಕ್ ಗಳ ಮಾರಾಟದಲ್ಲಿ ದಿಢೀರನೆ ಹೆಚ್ಚಳವಾಗಿದೆ.

ಹೊಸ ಸರಣಿಯ ಇ-ಬೈಸಿಕಲ್ ಬಿಡುಗಡೆಗೊಳಿಸಿದ ಗೋಜೀರೊ

ಗೋಜೀರೊದಲ್ಲಿ ಅಸಾಧಾರಣ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಈ ವರ್ಷ ಕಂಪನಿಯು ತಯಾರಿಸಿದ ಸ್ಕೇಲಿಂಗ್‌ನ ಪ್ರೊ ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದೇವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೊಸ ಸರಣಿಯ ಇ-ಬೈಸಿಕಲ್ ಬಿಡುಗಡೆಗೊಳಿಸಿದ ಗೋಜೀರೊ

ಈ ಸರಣಿಯಲ್ಲಿ ಆಕ್ಟಿವ್ ಪರ್ಫಾಮೆನ್ಸ್ ಜೊತೆಗೆ ಗ್ರಾಹಕರಿಗೆ ಹೊಸ ಟೋಲ್-ಫ್ರೀ ಲೈನ್‌ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು. ಗೋಜೀರೊ ಕಂಪನಿಯು ಸ್ಕೇಲಿಂಗ್ ಬೈಸಿಕಲ್ ಗಳ ಪ್ರೀ ಆರ್ಡರ್ ಗಳನ್ನು ನವೆಂಬರ್ 8ರಿಂದ ಆರಂಭಿಸುತ್ತಿದೆ.

ಹೊಸ ಸರಣಿಯ ಇ-ಬೈಸಿಕಲ್ ಬಿಡುಗಡೆಗೊಳಿಸಿದ ಗೋಜೀರೊ

ಅಮೆಜಾನ್ ಆರ್ಡರ್ ಹಾಗೂ ವಿತರಣೆಗಳನ್ನು ನವೆಂಬರ್ 12ರಿಂದ ನವೆಂಬರ್ 25ರವರೆಗೆ ಆರಂಭಿಸಲಾಗುವುದು. ಮೇಕ್ ಫಿಟ್ ಸರಣಿಯ ಆರ್ಡರ್ ಗಳು ನವೆಂಬರ್ 10ರಿಂದ ಆರಂಭವಾಗಲಿದ್ದು, ನವೆಂಬರ್ 20ರಿಂದ ವಿತರಣೆಗಳನ್ನು ಆರಂಭಿಸಲಾಗುವುದು ಎಂದು ಅಂಕಿತ್ ಕುಮಾರ್ ಹೇಳಿದರು.

Most Read Articles

Kannada
English summary
Britain based Gozero mobility launches performance e bicycles in India. Read in Kannada.
Story first published: Saturday, November 7, 2020, 18:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X