ಹೊಸ ರೂಪದಲ್ಲಿ ಬರಲಿದೆ ಬಿಎಸ್-6 ಬಜಾಜ್ ಪ್ಲಾಟಿನಾ 100 ಬೈಕ್

ಬಜಾಜ್ ಆಟೋ ಕಂಪನಿಯು ತನ್ನ ಜನಪ್ರಿಯ ಪ್ಲಾಟಿನಾ 100 ಬೈಕನ್ನು ಇತ್ತೀಚೆಗೆ ಬಿಎಸ್-6 ಆವೃತ್ತಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಪ್ಲಾಟಿನಾ 100 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಲ್ಲಿ ಒಂದಾಗಿದೆ.

ಹೊಸ ರೂಪದಲ್ಲಿ ಬರಲಿದೆ ಬಿಎಸ್-6 ಬಜಾಜ್ ಪ್ಲಾಟಿನಾ 100 ಬೈಕ್

ಹೊಸ ಬಜಾಜ್ ಪ್ಲಾಟಿನಾ 100 ಬೈಕನ್ನು ಕಿಕ್‌ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಬಜಾಜ್ ಪ್ಲಾಟಿನಾ 100 ಬೈಕಿನ ಕಿಕ್‌ಸ್ಟಾರ್ಟ್ ರೂಪಾಂತರದ ಬೆಲೆಯು ರೂ.49,261 ಗಳಾಗಿದ್ದರೆ, ಎಲೆಕ್ಟ್ರಿಕ್ ಸ್ಟಾರ್ಟ್ ರೂಪಾಂತರದ ಬೆಲೆಯು ರೂ.55,546ಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ. ಇನ್ನು ಈ ಬಜಾಜ್ ಪ್ಲಾಟಿನಾ 100 ಇಎಸ್‌ನ ಡಿಸ್ಕ್ ಬ್ರೇಕ್ ರೂಪಾಂತರವನ್ನು ಪರಿಚಯಿಸಲಿದೆ ಎಂದು ವರದಿಗಳು ಪ್ರಕಟವಾಗಿದೆ.

ಹೊಸ ರೂಪದಲ್ಲಿ ಬರಲಿದೆ ಬಿಎಸ್-6 ಬಜಾಜ್ ಪ್ಲಾಟಿನಾ 100 ಬೈಕ್

ಹೆಚ್ಚು ಪರಿಸರ ಸ್ನೇಹಿ ಮಾದರಿಯಾದ ಬಜಾಜ್ ಪ್ಲಾಟಿನಾ 100 ಮಾದರಿಯನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಬೈಕಿನಲ್ಲಿ ಹೆಚ್ಚಿನ ಮೈಲೇಜ್ ಗಾಗಿ ಮತ್ತು ಕಾರ್ಯಕ್ಷಮತೆಗಾಗಿ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಹೊಸ ರೂಪದಲ್ಲಿ ಬರಲಿದೆ ಬಿಎಸ್-6 ಬಜಾಜ್ ಪ್ಲಾಟಿನಾ 100 ಬೈಕ್

ಬಜಾಜ್ ಪ್ಲಾಟಿನಾ 100 ಬೈಕಿನಲ್ಲಿ 102 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 7.7 ಬಿಹೆಚ್‍ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 8.34 ಎನ್ಎಂ ಟಾರ್ಕ್ ಅನ್ನು ಉತ್ಪಾಸುತ್ತದೆ. ಈ ಎಂಜಿನ್ ನೊಂದಿಗೆ 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಹೊಸ ಬಜಾಜ್ ಪ್ಲಾಟಿನಾ 100 ಬೈಕ್ ಪ್ರತಿ ಗಂಟೆಗೆ 90 ಕಿ.ಮೀ ಕ್ರಮಿಸುತ್ತದೆ.

ಹೊಸ ರೂಪದಲ್ಲಿ ಬರಲಿದೆ ಬಿಎಸ್-6 ಬಜಾಜ್ ಪ್ಲಾಟಿನಾ 100 ಬೈಕ್

ಹೊಸ ಬಜಾಜ್ ಪ್ಲಾಟಿನಾ 100 ಬೈಕ್ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದರ ಹೊರತಾಗಿ ಈ ಬೈಕಿನ ವಿನ್ಯಾಸದಲ್ಲಿಯು ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಬೈಕಿನಲ್ಲಿ ಹೊಸ ಬಣ್ಣದ ವಿಂಡ್‌ಸ್ಕ್ರೀನ್ ಅಳವಡಿಸಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಹೊಸ ರೂಪದಲ್ಲಿ ಬರಲಿದೆ ಬಿಎಸ್-6 ಬಜಾಜ್ ಪ್ಲಾಟಿನಾ 100 ಬೈಕ್

ಈ ಹೊಸ ಬೈಕಿನಲ್ಲಿ ಎಲ್ಇಡಿ ಡಿಆರ್ಎಲ್ ಜೊತೆಯಲ್ಲಿ ಆಕರ್ಷಕ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ. ಹೆಚ್ಚುವರಿಯಾಗಿ ಈ ಬೈಕಿನಲ್ಲಿ ಉದ್ದದ ಡಬಲ್ ಸ್ಪ್ರಿಂಗ್ ರೇರ್ ಸಂಸ್ಪೆಕ್ಷನ್, ಸ್ಪ್ರಿಂಗ್-ಸಾಫ್ಟ್ ಸೀಟ್, ಡೈರೆಕ್ಷನಲ್ ಟಯರ್ ಮತ್ತು ರಬ್ಬರ್ ಸೈಡ್‌ವಾಲ್‌ ಅನ್ನು ಹೊಂದಿದೆ.

ಹೊಸ ರೂಪದಲ್ಲಿ ಬರಲಿದೆ ಬಿಎಸ್-6 ಬಜಾಜ್ ಪ್ಲಾಟಿನಾ 100 ಬೈಕ್

ಈ ಬೈಕಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗ 130 ಎಂಎಂ ಮತ್ತು ಹಿಂದಿನ 110 ಎಂಎಂ ಡ್ರಮ್‌ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಕಾಂಬಿ ಬ್ರೇಕಿಂಗ್ ಸಿಸ್ಟಮ್ (ಸಿಬಿಎಸ್) ಪ್ಲಾಟಿನಂ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ಹೊಸದಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಲಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಹೊಸ ರೂಪದಲ್ಲಿ ಬರಲಿದೆ ಬಿಎಸ್-6 ಬಜಾಜ್ ಪ್ಲಾಟಿನಾ 100 ಬೈಕ್

2020 ಬಜಾಜ್ ಪ್ಲಾಟಿನಾ 100 ಬೈಕ್ ಗಾತ್ರದಲ್ಲಿ ಬದಲಾಗಿಲ್ಲ ಎಂಬುದನ್ನೂ ಗಮನಿಸಬೇಕಾದ ಸಂಗತಿ. ಬಜಾಜ್ ಪ್ಲಾಟಿನಾ 100 ಬೈಕ್ 2003 ಎಂಎಂ ಉದ್ದ, 713 ಎಂಎಂ ಅಗಲ ಮತ್ತು 1100 ಎಂಎಂ ಎತ್ತರವನ್ನು ಹೊಂದಿದೆ. ಈ ಹೊಸ ಬೈಕ್ 1,255 ಎಂಎಂ ಉದ್ದದ ವ್ಹೀಲ್ ಬೇಸ್‌ ಅನ್ನು ಹೊಂದಿದೆ.

ಹೊಸ ರೂಪದಲ್ಲಿ ಬರಲಿದೆ ಬಿಎಸ್-6 ಬಜಾಜ್ ಪ್ಲಾಟಿನಾ 100 ಬೈಕ್

ಈ ಹೂಸ ಬಜಾಜ್ ಪ್ಲಾಟಿನಾ 100 ಬೈಕ್ 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇನ್ನು ಈ ಹೊಸ ಬಜಾಜ್ ಪ್ಲಾಟಿನಾ 100 ಬೈಕಿನ ಕಿಕ್‌ಸ್ಟಾರ್ಟ್ ರೂಪಾಂತರವು 116 ಕೆಜಿ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ ಮಾದರಿಯು 117.5 ಕೆಜಿ ತೂಕವಿದೆ.

Most Read Articles

Kannada
English summary
Bajaj Platina 100 ES To Get A Disc Brake Variant Soon Details. Read In Kannada.
Story first published: Friday, July 3, 2020, 17:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X