ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 180ಎಫ್ ಬೈಕ್

ಬಜಾಜ್ ಆಟೋ ಕಂಪನಿಯು ತನ್ನ ಹೊಸ ಪಲ್ಸರ್ 180 ಎಫ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಬಿಎಸ್-6 ಪಲ್ಸರ್ 180ಎಫ್ ಬೈಕಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.08 ಲಕ್ಷಗಳಾಗಿದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 180ಎಫ್ ಬೈಕ್

ಬಿಎಸ್-6 ಬಜಾಜ್ ಪಲ್ಸರ್ 180ಎಫ್ ಬೈಕಿನಲ್ಲಿ ಕಾರ್ಬ್ಯುರೇಟರ್ ಬದಲಿಗೆ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.ಹೊಸ ಪಲ್ಸರ್ 180ಎಫ್ ಬೈಕಿನಲ್ಲಿ 178.6 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ.ಈ ಎಂಜಿನ್ 16.8 ಬಿಹೆಚ್‍ಪಿ ಪವರ್ ಮತ್ತು 14.52 ನ್ಯೂಟನ್-ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಬಿಹೆಚ್‍ಪಿ ಪವರ್ ಮತ್ತು ಟಾರ್ಕ್ ಅಂಕಿ ಅಂಶದಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 180ಎಫ್ ಬೈಕ್

ಹೊಸ ಬಜಾಜ್ 180ಎಫ್ ಬೈಕಿನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ ಐದು ಮಾದರಿಯ ನೈಟ್ರಾಕ್ಸ್ ಶಾಕ್ ಅಬ್ಸಾರ್ಬರ್ ಅನ್ನು ಅಳವಡಿಸಲಾಗಿದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 180ಎಫ್ ಬೈಕ್

ಈ ಹೂಸ ಬೈಕಿನಲ್ಲಿ ಸವಾರರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಈ ಬೈಕಿನ ಮುಂಬಾಗದಲ್ಲಿ 260 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 180ಎಫ್ ಬೈಕ್

ಹೊಸ ಬಜಾಜ್ 180ಎಫ್ ಬೈಕ್ ಬ್ಲ್ಯಾಕ್ ರೆಡ್ ಮತ್ತು ನಿಯಾನ್ ಆರೆಂಜ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.ಈ ಬೈಕಿನ ವ್ಹೀಲ್‍‍ಬೇಸ್ ಉದ್ದದಲ್ಲಿ 5 ಎಂಎಂ ಹೆಚ್ಚಳವಾಗಿರಲಿದೆ. ಆದರೆ ರೈಡಿಂಗ್ ಡೈನಾಮಿಕ್ಸ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 180ಎಫ್ ಬೈಕ್

ಬಜಾಜ್ ಆಟೋ ಕಂಪನಿಯು ಉಚಿತ ಸರ್ವಿಸ್ ಮತ್ತು ವಾರಂಟಿ ಅವಧಿಯನ್ನು ವಿಸ್ತರಿಸಿದೆ. ಪ್ರಸ್ತುತ ಕರೋನಾ ವೈರಸ್ ಭೀತಿಯಿಂದ ಗ್ರಾಹಕರಿಗೆ ಸಹಕಾರಿಯಾಗಲು ಈ ನಿರ್ಧಾರವನ್ನು ಕೈಗೊಂಡಿದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 180ಎಫ್ ಬೈಕ್

ಮಾರ್ಚ್ 20 ಮತ್ತು ಏಪ್ರಿಲ್ 30ರ ನಡುವೆ ಮುಕ್ತಾಯಗೊಳ್ಳುವ ಬಜಾಜ್ ಕಂಪನಿಯ ಸರ್ವಿಸ್ ಮತ್ತು ವಾರಂಟಿ ಅವಧಿಯನ್ನು ಮೇ31 ರವರೆಗೆ ವಿಸ್ತರಿಸಲಾಗಿದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 180ಎಫ್ ಬೈಕ್

ಹೊಸ ಬಜಾಜ್ ಪಲ್ಸರ್ 160 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಬೈಕಿನಲ್ಲಿ ಬಿಎಸ್-6, 160.3 ಸಿಸಿ ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಹೊಸ ಪಲ್ಸರ್ ಎನ್‍ಎಸ್160 ಎಂಜಿನ್ 9,000 ಆರ್‍‍ಪಿಎಂನಲ್ಲಿ 17.2 ಬಿ‍‍ಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಬಜಾಜ್ ಪಲ್ಸರ್ 180ಎಫ್ ಬೈಕ್

ಹೊಸ ಬಜಾಜ್ 180ಎಫ್ ಬೈಕ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ನೇರವಾಗಿ ಟಿವಿಎಸ್ ಅಪಾಚೆ ಆರ್‌ಟಿಆರ್ 180 ನೇರವಾಗಿ ಪೈಪೋಟಿ ನೀಡುತ್ತದೆ. ಪಲ್ಸರ್ ಬೈಕ್‍‍ಗಳ ಸರಣಿಯ ಜನಪ್ರಿಯತೆಯನ್ನು ಮರಳಿ ಪಡೆಯಲು ಬಜಾಜ್ ಆಟೋ ಪ್ರಯತ್ನಿಸುತ್ತಿದೆ.

Most Read Articles

Kannada
English summary
BS6 Bajaj Pulsar NS160 launched. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X