ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್

ಹಾರ್ಲೆ ಡೇವಿಡ್ಸನ್ ಕಂಪನಿಯು ತನ್ನ ಬಿಎಸ್-6 1200 ಕಸ್ಟಮ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಗಿತ್ತು. ಇದೀಗ ಹಾರ್ಲೆ ಡೇವಿಡ್ಸನ್ ಕಂಪನಿಯು ಈ ಹೊಸ 1200 ಕಸ್ಟಮ್ ಬೈಕಿನ ಬೆಲೆಯನ್ನು ಹೆಚ್ಚಿಸಿದೆ.

ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್

ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕನ್ನು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.10.77 ಲಕ್ಷಗಳಿಗೆ ಬಿಡುಗಡೆಗೊಳಿಸಿದ್ದರು. ಆದರೆ ಇದೀಗ ಕಂಪನಿಯು ರೂ.12,000 ರವರೆಗೆ ಹೆಚ್ಚಿಸಿದೆ. ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ರೆಟ್ರೊ ಲುಕಿಂಗ್ ಹೆಡ್‌ಲ್ಯಾಂಪ್ ಮತ್ತು ಟರ್ನ್ ಸಿಗ್ನಲ್ ಇಂಡಿಕೇಟರ್‍ಗಳನ್ನು ಹೊಂದಿವೆ. ಈ ಬೈಕಿನ ಎಂಜಿನ್‍ ನಲ್ಲಿ ಡಯಾಗ್ನೋಸ್ಟಿಕ್ಸ್ ಮತ್ತು ಈ ಬೈಕಿನಲ್ಲಿ ಇಂಧನ ಕಡಿಮೆಯಾದಾಗ ಎಚ್ಚರಿಸುವ ಪಾರ್ಟ್ ಡಿಜೆಟಲ್ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್

ಈ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಲ್ಲಿ ಇರುವ ಇತರ ಫೀಚರ್ಸ್‍ಗಳು ಓಡೋಮೀಟರ್, ದಿನದ ಸಮಯ ಸೂಚಿಸುವ ಕ್ಲಾಕ್, ಡ್ಯುಯಲ್ ಟ್ರಿಪ್ ಮೀಟರ್, ಎಲ್ಇಡಿ ಲೈಟನ್ನು ಹೊಂದಿದೆ. ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕಿನಲ್ಲಿ 1200 ಸಿಸಿ, ಏರ್-ಕೂಲ್ಡ್ ಎವಲ್ಯೂಷನ್ ಎಂಜಿನ್ ಅನ್ನು ಅಳವಡಿಸಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್

ಈ ಎಂಜಿನ್ 97 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ. ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕಿನ ಬಿಹೆಚ್‍ಪಿ ಪವರ್ ಎಷ್ಟು ಉತ್ಪಾದಿಸುತ್ತದೆ ಎಂಬ ಮಾಹಿತಿಯು ಬಹಿರಂಗವಾಗಿಲ್ಲ.

ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್

ಈ ಎಂಜಿನ್ ಆಲ್-ಬ್ಲ್ಯಾಕ್ ರಾಕರ್ಸ್ ಮತ್ತು ಏರ್ ಕ್ಲೀನರ್ ಕವರ್‌ಗಳನ್ನು ಹೊಂದಿದೆ. ಇದರೊಂದಿಗೆ ಆಲ್-ಕ್ರೋಮ್ ಡ್ಯುಯಲ್-ಟ್ಯಾಪರ್ಡ್ ಎಕ್ಸಾಸ್ಟ್ ಸಿಸ್ಟಂ ಅನ್ನು ಸಹ ಒಳಗೊಂಡಿದೆ. 1200 ಕಸ್ಟಮ್ ಬಿಎಸ್ 6 ಮಾದರಿಯು ಕ್ಲೋಸ್ಡ್-ಲೂಪ್ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್

ಹಾರ್ಲೆ-ಡೇವಿಡ್ಸನ್ 1200 ಕಸ್ಟಮ್ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಅಭಿವೃದ್ದಿಪಡಿಸಲಾಗಿದೆ. ಈ ಬೈಕಿನಲ್ಲಿ ಸವಾರರ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸುರಕ್ಷತೆಗಾಗಿ ಈ ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್

ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಸಂಸೆಕ್ಷೆನ್ ಯುನಿಟ್ ಅನ್ನು ಅಳವಡಿಸಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್

ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್ ಮಿಡ್ನೈಟ್ ಬ್ಲೂ, ರಿವರ್ ರಾಕ್ ಗ್ರೇ, ವಿವಾರ್ಡ್ ಬ್ಲ್ಯಾಕ್ನೊಂದಿಗೆ ಬಿಲ್ಲಾರ್ಡ್ ರೆಡ್ ಮತ್ತು ವಿವಿದ್ ಬ್ಲ್ಯಾಕ್ನೊಂದಿಗೆ ರಿವರ್ ರಾಕ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ.

ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್

ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್ ಆಕರ್ಷಕ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಈ ಬೈಕ್ ಹೆಚ್ಚಾಗಿ ಯುವ ಗ್ರಾಹಕರನ್ನು ಸೆಳೆಯಬಹುದು. ಆದರೆ ಪ್ರಸ್ತುತ ಕರೋನಾ ವೈರಸ್ ಭೀತಿ ಮತ್ತು ಮತ್ತಷ್ಟು ದುಬಾರಿಯಾಗಿರುವುದರಿಂದ ಈ ಬೈಕಿನ ಮಾರಾಟದ ಮೇಲೆ ಪರಿಣಾಮವನ್ನು ಬೀರಬಹುದು.

Most Read Articles

Kannada
English summary
2020 Harley-Davidson 1200 Custom BS6 receives a price hike. Read In Kannada.
Story first published: Monday, June 22, 2020, 19:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X