ಮತ್ತಷ್ಟು ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ ಐರನ್ 883 ಬೈಕ್

ಹಾರ್ಲೆ ಡೇವಿಡ್ಸನ್ ಕಂಪನಿಯು ತನ್ನ ಬಿಎಸ್-6 ಐರನ್ 883 ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಈ ಬಿಎಸ್-6 ಹಾರ್ಲೆ ಡೇವಿಡ್ಸನ್ ಐರನ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.9.26 ಲಕ್ಷಗಳಾಗಿದೆ.

ಮತ್ತಷ್ಟು ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ ಐರನ್ ಬೈಕ್

ಬಿಎಸ್-6 ಹಾರ್ಲೆ ಡೇವಿಡ್ಸನ್ ಐರನ್ ಬೈಕಿನ ಬೆಲೆಯನ್ನು ರೂ.12,000 ಗಳವರೆಗೆ ಹೆಚ್ಚಿಸಿದೆ. ಇದೀಗ ಈ ಬೈಕಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.9.38 ಲಕ್ಷಗಳಾಗಿದೆ. ಈ ಬಿಎಸ್-6 ಹಾರ್ಲೆ ಡೇವಿಡ್ಸನ್ ಐರನ್ ಬೈಕ್ ಬ್ಲ್ಯಾಕ್ ಡೆನಿಮ್, ಬಾರ್ರಾಕುಡಾ ಸಿಲ್ವರ್ ಡೆನಿಮ್, ರಿವರ್ ರಾಕ್ ಗ್ರೇ ಮತ್ತು ಡ್ಯುಯಲ್ ಟೋನ್ ಸ್ಕಾರ್ಚ್ಡ್ ಆರೆಂಜ್/ಸಿಲ್ವರ್ ಫ್ಲಕ್ಸ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಮತ್ತಷ್ಟು ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ ಐರನ್ ಬೈಕ್

ಬಿಎಸ್-6 ಹಾರ್ಲೆ ಡೇವಿಡ್ಸನ್ ಐರನ್ ಬೈಕಿನಲ್ಲಿ ಏರ್-ಕೂಲ್ಡ್ ‘ಎವಲ್ಯೂಷನ್' ವಿ-ಟ್ವಿನ್ 883 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 4,750 ಆರ್‌ಪಿಎಂನಲ್ಲಿ 68 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಮತ್ತಷ್ಟು ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ ಐರನ್ ಬೈಕ್

ಹಿಂದಿನ ಬಿಎಸ್-4 ಹಾರ್ಲೆ ಡೇವಿಡ್ಸನ್ ಐರನ್ ಬೈಕಿನ ಎಂಜಿನ್ 3,500 ಆರ್‌ಪಿಎಂನಲ್ಲಿ 70 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ.

ಮತ್ತಷ್ಟು ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ ಐರನ್ ಬೈಕ್

ಬಿಎಸ್-6 ಹಾರ್ಲೆ ಡೇವಿಡ್ಸನ್ ಐರನ್ ಬೈಕಿನಲ್ಲಿ ಎಂಜಿನ್ ಅಪ್‌ಡೇಟ್‌ನ ಹೊರತಾಗಿ ಇತರ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ ಐರನ್ ಬೈಕ್ 2,185 ಎಂಎಂ ಉದ್ದವನ್ನು ಮತ್ತು 1,515 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಮತ್ತಷ್ಟು ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ ಐರನ್ ಬೈಕ್

ಈ ಬಿಎಸ್-6 ಹಾರ್ಲೆ ಡೇವಿಡ್ಸನ್ ಐರನ್ ಬೈಕ್ 247 ಕೆಜಿ ತೂಕವನ್ನು ಹೊಂದಿದೆ. ಈ ಬೈಕಿನಲ್ಲಿ ದುಂಡಗಿನ ಆಕಾರದ ಹೆಡ್‌ಲ್ಯಾಂಪ್, ಸಿಂಗಲ್-ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟರ್ನ್-ಇಂಡಿಕೇಟರ್ಸ್ ಮತ್ತು ವಿಶಾಲವಾದ ಹ್ಯಾಂಡಲ್‌ಬಾರ್ ಹೊಂದಿದೆ.

ಮತ್ತಷ್ಟು ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ ಐರನ್ ಬೈಕ್

ಇನ್ನು ಈ ಬೈಕಿನಲ್ಲಿ ಫಾರ್ವರ್ಡ್-ಸೆಟ್ ಫುಟ್‌ಪೆಗ್ಸ್, ಬ್ಲ್ಯಾಕ್ಡ್-ಔಟ್ ಡ್ಯುಯಲ್-ಎಕ್ಸಾಸ್ಟ್ ಮತ್ತು ಬಾಬರ್ ಟಕ್ ಅಂಡ್ ರೋಲ್ ವಿನ್ಯಾಸದ ಸೀಟ್. ಈ ಬೈಕಿನಲ್ಲಿ ಸಿಂಗಲ್ ಸೀಟ್ ಅನ್ನು ಅಳವಡಿಸಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಮತ್ತಷ್ಟು ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ ಐರನ್ ಬೈಕ್

ಬಿಎಸ್-6 ಹಾರ್ಲೆ ಡೇವಿಡ್ಸನ್ ಐರನ್ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಯುನಿಟ್ ಮತ್ತು ಹಿಂಭಾಗದಲ್ಲಿ ಟ್ವಿನ್-ಶಾಕ್ ಸೆಟಪ್ ಅನ್ನು ಹೊಂದಿದೆ. ಇನ್ನು ಎರಡೂ ತುದಿಗಳಲ್ಲಿ ಡ್ಯುಯಲ್-ಪಿಸ್ಟನ್ ಕಾಲಿಪರ್ಗಳೊಂದಿಗೆ ಡಿಸ್ಕ್ ಬ್ರೇಕ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಮತ್ತಷ್ಟು ದುಬಾರಿಯಾಯ್ತು ಬಿಎಸ್-6 ಹಾರ್ಲೆ ಡೇವಿಡ್ಸನ್ ಐರನ್ ಬೈಕ್

ಬಿಎಸ್-6 ಹಾರ್ಲೆ ಡೇವಿಡ್ಸನ್ ಐರನ್ ಲಾಗ್ ರೈಡ್ ಹೋಗುವವರಿಗೆ ಉತ್ತಮ ಆಯ್ಕೆಯಾಗಿದೆ. ಆದರೆ ಈ ಬೈಕ್ ಸಿಂಗಲ್ ಸೀಟ್ ಬೈಕ್ ಆಗಿದೆ. ಇನ್ನು ರೈಡರ್ ಸುರಕ್ಷತೆಗಾಗಿ ಬೈಕಿನಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ.

Most Read Articles

Kannada
English summary
Harley-Davidson Iron 883 BS6 Price Hike Announced In India. Read In Kannada.
Story first published: Wednesday, June 17, 2020, 19:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X