Just In
Don't Miss!
- Movies
ಸೆಟ್ ಮುಂದೆಯೇ ಅಪಘಾತದಲ್ಲಿ ಮೃತನಾದ ಬಿಗ್ಬಾಸ್ ವ್ಯವಸ್ಥಾಪಕ
- News
ಸತ್ಯ ಹೇಳುವ ಏಕೈಕ ರಾಜಕಾರಣಿ ರಾಹುಲ್ ಗಾಂಧಿ; ಮುಫ್ತಿ
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Sports
ಆಸ್ಟ್ರೇಲಿಯಾ ವಿರುದ್ಧ ಆಡ್ತಿರೋದು ಅತೀ ದುರ್ಬಲ ಭಾರತ ತಂಡ ಅನ್ನೋದು ಗೊತ್ತಾ!?
- Lifestyle
ನಿಮ್ಮ ಮಕ್ಕಳ ಕೋಣೆಯನ್ನು ವಾಸ್ತು ಪ್ರಕಾರ ಈ ರೀತಿ ರೆಡಿ ಮಾಡಿ
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು
ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಎಕ್ಸ್ಟ್ರಿಮ್ 200ಎಸ್ ಮತ್ತು ಎಕ್ಸ್ಪಲ್ಸ್ 200ಟಿ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೀರೋ ಮೋಟೊಕಾರ್ಪ್ ಕಂಪನಿಯು ಈ 200 ಸಿಸಿಯ ಎರಡು ಹೊಸ ಬೈಕುಗಳನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

ಹೀರೋ ಮೋಟೊಕಾರ್ಪ್ ಕಂಪನಿಯು ಹೊಸ ಎಕ್ಸ್ಟ್ರಿಮ್ 200ಎಸ್ ಮತ್ತು ಎಕ್ಸ್ಪಲ್ಸ್ 200ಟಿ ಬೈಕುಗಳ ಟೀಸರ್ ಅನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಎಕ್ಸ್ಟ್ರಿಮ್ 200ಎಸ್ ಮತ್ತು ಎಕ್ಸ್ಪಲ್ಸ್ 200ಟಿ ಬೈಕುಗಳು ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಎಂದು ವರದಿ ಪ್ರಕಟವಾಗಿದೆ. ಈ ಎರಡು ಬೈಕುಗಳ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿರುತ್ತದೆ. ಇದನ್ನು ಹೊರತುಪಡಿಸಿ ಉಳಿದ ಬದಲಾವಣೆಗಳನ್ನು ಹೊಂದಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಹೊಸ ಹೀರೋ ಎಕ್ಸ್ಟ್ರಿಮ್ 200ಎಸ್ ಸಂಪೂರ್ಣ ಫೇರ್ಡ್ ಮಾದರಿಯಾಗಿದ್ದರೆ, ಎಕ್ಸ್ಪಲ್ಸ್ 200ಟಿ ಟೂರರ್ ಮಾದರಿಯಾಗಿದೆ. ಈ ಎರಡು ಬೈಕುಗಳು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಟೈಲ್ ಲೈಟ್, ಡಿಆರ್ಎಲ್, ಸ್ಟೈಲಿಶ್ ಅಲಾಯ್ ವ್ಹೀಲ್ ಮತ್ತು ಇತರ ಫೀಚರುಗಳನ್ನುಹೊಂದಿರಲಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹೂಸ ಹೀರೋ ಎಕ್ಸ್ಪಲ್ಸ್ 200ಟಿ ತನ್ನ ಹೆಚ್ಚು ಆಫ್-ರೋಡ್-ಆಧಾರಿತ ಎಕ್ಸ್ಪಲ್ಸ್ 200 ಬೈಕಿನಿಂದ ಸಾಕಷ್ಟು ಅಂಶಗಳನ್ನು ಎರವಲು ಪಡೆಯುತ್ತದೆ. ಈಗಾಗಲೇ ತನ್ನ ಆಫ್-ರೋಡ್ ಎಕ್ಸ್ಪಲ್ಸ್ 200 ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಿದೆ.

ಹೊಸ ಎರಡು ಬೈಕುಗಳು ಹೀರೋ ಮೊಟೊಕಾರ್ಪ್ನ 'ಎಕ್ಸ್' ಸರಣೆಯ ಭಾಗಿವಾಗಿದ್ದು, ಇದರ ಸರಣಿಯಲ್ಲಿ ಒಟ್ಟು ಐದು ಮಾದರಿಗಳನ್ನು ಹೊಂದಿದೆ. ಇದರಲ್ಲಿ ಎಕ್ಸ್ಪಲ್ಸ್ 200, ಎಕ್ಸ್ಪಲ್ಸ್ 200ಟಿ, ಎಕ್ಸ್ಟ್ರಿಮ್ 200ಆರ್, ಎಕ್ಸ್ಟ್ರಿಮ್ 200ಎಸ್ ಮತ್ತು ಇತ್ತೀಚೆಗೆ ಬಿಡುಗಡೆಗೊಳಿಸಿದ ಎಕ್ಸ್ಟ್ರಿಮ್ 160ಆರ್ ಬೈಕ್ ಒಳಗೊಂಡಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಇದರಲ್ಲಿ ಎಕ್ಸ್ಟ್ರಿಮ್ 160ಆರ್ ಮತ್ತು ಎಕ್ಸ್ಪಲ್ಸ್ 200 ಬೈಕುಗಳನ್ನು ಈಗಾಗಲೇ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಿದೆ. ಇನ್ನು ಎಕ್ಸ್ಟ್ರಿಮ್ 200ಎಸ್ ಮತ್ತು ಎಕ್ಸ್ಪಲ್ಸ್ 200ಟಿ ಬೈಕುಗಳನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

ಎಕ್ಸ್ಟ್ರಿಮ್ 160ಆರ್ ಮಾದರಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಬೈಕುಗಳ ಒಂದೇ 200 ಸಿಸಿ ಎಂಜಿನ್ ಅನ್ನು ಒಳಗೊಂಡಿದೆ. ಬಿಎಸ್ 6 ಮಾದರಿಯಲ್ಲಿ 199 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿರಲಿದೆ.
MOST READ: ಹೊಸ ಮಹೀಂದ್ರಾ ಮೊಜೊ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಈ ಎಂಜಿನ್ 8500 ಆರ್ಪಿಎಂನಲ್ಲಿ 17.7 ಬಿಹೆಚ್ಪಿ ಪವರ್ ಮತ್ತು 6400 ಆರ್ಪಿಎಂನಲ್ಲಿ 16.45 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5 ಸ್ಪೀಡ್ ಗೇರ್ಬಾಕ್ಸ್ಗೆ ಜೋಡಿಸಲಾಗಿದೆ.

ಈ ಎರಡು ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಿವಿಎಸ್ ಅಪಾಚೆ ಆರ್ಟಿಆರ್ 200 4ವಿ, ಬಜಾಜ್ ಪಲ್ಸರ್ ಎನ್ಎಸ್ 200 ಮತ್ತು ಬಜಾಜ್ ಪಲ್ಸರ್ ಆರ್ಎಸ್ 200 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಇನ್ನು ಈ ಹೊಸ ಎಕ್ಸ್ಟ್ರಿಮ್ 160ಆರ್ ಮತ್ತು ಎಕ್ಸ್ಪಲ್ಸ್ 200 ಬೈಕುಗಳ ಬೆಲೆಯು ಹಿಂದಿನ ಮಾದರಿಗಿಂತ ತುಸು ದುಬಾರಿಯಾಗಿರಲಿದೆ.