ದುಬಾರಿಯಾಯ್ತು ಬಿಎಸ್-6 ಹೋಂಡಾ ಯೂನಿಕಾರ್ನ್ ಬೈಕ್

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಹಲವು ಜನಪ್ರಿಯ ಬಿಎಸ್-6 ಮಾದರಿಗಳ ಬೆಲೆಯನ್ನು ಹೆಚ್ಚಿಸುತ್ತಿದೆ. ಇದೀಗ ಹೋಂಡಾ ಕಂಪನಿಯು ಜನಪ್ರಿಯ ಬಿಎಸ್-6 ಯೂನಿಕಾರ್ನ್ ಬೈಕಿನ ಬೆಲೆಯನ್ನು ಕೂಡ ಹೆಚ್ಚಿಸಿದೆ.

ದುಬಾರಿಯಾಯ್ತು ಬಿಎಸ್-6 ಹೋಂಡಾ ಯೂನಿಕಾರ್ನ್ ಬೈಕ್

ಬಿಎಸ್-6 ಯೂನಿಕಾರ್ನ್ ಬೈಕನ್ನು ರೂ.93,593 ಬೆಲೆಯಲ್ಲಿ ಬಿಡುಗಡೆಗೊಳಿಸಿದ್ದರು. ಇದೀಗ ಈ ಬೈಕಿನ ಬೆಲೆಯನ್ನು ರೂ.955 ಗಳವರೆಗೆ ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ. ಈ ಬೆಲೆ ಏರಿಕೆಯ ಬಳಿಕ, ಈ ಬಿಎಸ್-6 ಯೂನಿಕಾರ್ನ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.94,548 ಗಳಾಗಿದೆ. ಬಿಎಸ್-6 ಯೂನಿಕಾರ್ನ್ ಬೈಕಿನಲ್ಲಿ 162.7 ಸಿಸಿ, ಸಿಂಗಲ್ ಸಿಲಿಂಡರ್, ಇಂಧನ-ಇಂಜೆಕ್ಟ್ ಎಂಜಿನ್ ಅನ್ನು ಹೊಂದಿದೆ.

ದುಬಾರಿಯಾಯ್ತು ಬಿಎಸ್-6 ಹೋಂಡಾ ಯೂನಿಕಾರ್ನ್ ಬೈಕ್

ಈ ಎಂಜಿನ್ 7,500 ಆರ್‌ಪಿಎಂನಲ್ಲಿ 12.5 ಬಿಹೆಚ್‍ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 14 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಆಕ್ಟಿವಾ 6ಜಿ ಸ್ಕೂಟರ್

ದುಬಾರಿಯಾಯ್ತು ಬಿಎಸ್-6 ಹೋಂಡಾ ಯೂನಿಕಾರ್ನ್ ಬೈಕ್

ಬಿಎಸ್-6 ಹೋಂಡಾ ಯೂನಿಕಾರ್ನ್ ಬೈಕ್ ಇಂಪೀರಿಯಲ್ ರೆಡ್ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಪರ್ಲ್ ಇಗ್ನಿಯಸ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.

ದುಬಾರಿಯಾಯ್ತು ಬಿಎಸ್-6 ಹೋಂಡಾ ಯೂನಿಕಾರ್ನ್ ಬೈಕ್

ಬಿಎಸ್-6 ಹೋಂಡಾ ಯೂನಿಕಾರ್ನ್ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದ ಮೊನೊ-ಶಾಕ್ ಸೆಟಪ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ದುಬಾರಿಯಾಯ್ತು ಬಿಎಸ್-6 ಹೋಂಡಾ ಯೂನಿಕಾರ್ನ್ ಬೈಕ್

ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ,ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.

ದುಬಾರಿಯಾಯ್ತು ಬಿಎಸ್-6 ಹೋಂಡಾ ಯೂನಿಕಾರ್ನ್ ಬೈಕ್

ಬಿಎಸ್-6 ಹೋಂಡಾ ಯೂನಿಕಾರ್ನ್ ಬೈಕಿನಲ್ಲಿ ಮುಂಭಾಗದ ಕೌಲ್, ಅರೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬದಿಯಲ್ಲಿ ಕ್ರೋಮ್ ಎಕ್ಸಾಸ್ಟ್, ನೇಮ್‌ಪ್ಲೇಟ್‌ಗಾಗಿ ಕ್ರೋಮ್ ಅಕ್ಷರಗಳು ಮತ್ತು 3 ಡಿ ಹೋಂಡಾ ಲೋಗೊವನ್ನು ಒಳಗೊಂಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ದುಬಾರಿಯಾಯ್ತು ಬಿಎಸ್-6 ಹೋಂಡಾ ಯೂನಿಕಾರ್ನ್ ಬೈಕ್

ಇದರೊಂದಿಗೆ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಬಿಎಸ್-6 ಆಕ್ಟಿವಾ 6ಜಿ ಸ್ಕೂಟರ್ ಬೆಲೆಯನ್ನು ಎರಡನೇ ಬಾರಿ ಹೆಚ್ಚಿಸಿದೆ. ಎರಡನೇ ಬಾರಿ ಬಿಎಸ್-6 ಆಕ್ಟಿವಾ 6ಜಿ ಸ್ಕೂಟರಿನ ಬೆಲೆಯನ್ನು ರೂ,955 ಗಳವರೆಗೆ ಹೆಚ್ಚಿಸಲಾಗಿದೆ.

ದುಬಾರಿಯಾಯ್ತು ಬಿಎಸ್-6 ಹೋಂಡಾ ಯೂನಿಕಾರ್ನ್ ಬೈಕ್

ಭಾರತೀಯ ಮಾರುಕಟ್ಟೆಯ ಜನಪ್ರಿಯ ಬೈಕುಗಳಲ್ಲಿ ಬಿಎಸ್-6 ಯೂನಿಕಾರ್ನ್ ಕೂಡ ಒಂದಾಗಿದೆ. ಹೊಸ ಬಿಎಸ್-6 ಹೋಂಡಾ ಯೂನಿಕಾರ್ನ್ ಬೈಕಿನ ಬೆಲೆಯನ್ನು ಹೆಚ್ಚಿಸಿರುವುದರಿಂದ ಮಾರಾಟದ ಮೇಲೆ ಪರಿಣಾಮ ಬೀರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Honda Unicorn BS6 Gets A Nominal Price Hike. Read In Kannada.
Story first published: Saturday, August 15, 2020, 13:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X