Just In
Don't Miss!
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Movies
'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜುಲೈ ತಿಂಗಳ ಮಾರಾಟದಲ್ಲಿ ಕೆಟಿಎಂ ಡ್ಯೂಕ್ 250 ಬೈಕನ್ನು ಹಿಂದಿಕ್ಕಿದ ಹಸ್ಕ್ವರ್ನಾ 250
ಹಸ್ಕ್ವರ್ನಾ ಕಂಪನಿಯು ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಭಾರತಿಯ ಮಾರುಕಟ್ಟೆಯಲ್ಲಿ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕ್ ಗಳನ್ನು ಬಿಡುಗಡೆಗೊಳಿಸಿತ್ತು. ಈ ಹಸ್ಕ್ವರ್ನಾ ಬೈಕುಗಳು ಭಾರತೀಯ ಮಾರುಕಟ್ಟೆಯ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ.

ಹಸ್ಕ್ವರ್ನಾ ಬ್ರ್ಯಾಂಡ್ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗೆ ಹೊಸದಾಗಿ ಪ್ರವೇಶಿಸಿದ್ದರೂ ಕಡಿಮೆ ಅವಧಿಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. 2020ರ ಜುಲೈ ತಿಂಗಳ ಅವಧಿಯಲ್ಲಿ ಹಸ್ಕ್ವರ್ನಾ ಕಂಪನಿಯ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕುಗಳ 725 ಯುನಿಟ್‌ಗಳನ್ನು ದೇಶದಲ್ಲಿ ಮಾರಾಟ ಮಾಡಲಾಗಿದೆ. ಕೆಟಿಎಂ ಡ್ಯೂಕ್ 250 ಬೈಕಿಗಿಂತ 517 ಯುನಿಟ್ ಹೆಚ್ಚು ಹಸ್ಕ್ವರ್ನಾ ಬೈಕುಗಳು ಮಾರಾಟವಾಗಿವೆ.

ಈ ಎರಡೂ ಮಾದರಿಗಳನ್ನು ಭಾರತದಲ್ಲಿ ಮೊದಲ ಬಾರಿಗೆ ನವೆಂಬರ್‌ನಲ್ಲಿ ನಡೆದ 2019 ಇಂಡಿಯಾ ಬೈಕ್ ವೀಕ್ (ಐಬಿಡಬ್ಲ್ಯು) ನಲ್ಲಿ ಪ್ರದರ್ಶಿಸಲಾಗಿತ್ತು. ಹಸ್ಕ್ವರ್ನಾ ಕಂಪನಿಯು ಈ ಬೈಕ್ ಗಳನ್ನು ಭಾರತದಲ್ಲಿ ಕೆಟಿಎಂ ಶೋರೂಂಗಳ ಮೂಲಕ ಮಾರಾಟ ಮಾಡಲಾಗುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 250 ಬೈಕ್ ನಿಯೋ-ರೆಟ್ರೊ ಸ್ಕ್ರ್ಯಾಂಬ್ಲರ್ ವಿನ್ಯಾಸವನ್ನು ಹೊಂದಿದೆ. ವಿಟ್‌ಪಿಲೆನ್ 250 ಬೈಕ್ ಕೆಫೆ ರೇಸರ್ ಸ್ಟೈಲಿಂಗ್ ಅನ್ನು ಒಳಗೊಂಡಿದೆ.

ವಿಶೇಷವೆಂದರೆ ಹಸ್ಕ್ವರ್ನಾದ ಸ್ವಾರ್ಟ್ಪಿಲೆನ್ 250 ಹಾಗೂ ವಿಟ್‍ಪಿಲೆನ್ 250 ಬೈಕ್‍ಗಳನ್ನು ಕೆಟಿಎಂ ಡ್ಯೂಕ್ 250 ಬೈಕಿನ ಆಧಾರದ ಮೇಲೆ ತಯಾರಿಸಲಾಗಿದೆ. ಈ ಎರಡೂ ಬೈಕ್‍ಗಳಲ್ಲಿ ಡ್ಯೂಕ್ 250 ಬೈಕಿನಲ್ಲಿರುವಂತಹ ಬಿಡಿಭಾಗ ಹಾಗೂ ಎಂಜಿನ್‍ಗಳನ್ನು ಅಳವಡಿಸಲಾಗಿದೆ.
MOST READ: ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇದರ ಜೊತೆಗೆ ಎರಡು ಬೈಕ್‍ಗಳು ಕೆಟಿಎಂ ಬೈಕ್‍ಗಳಂತೆ ವಿಶಿಷ್ಟವಾದ ಡಿಸೈನ್ ಫೀಚರ್‍ಗಳನ್ನು ಹೊಂದಿವೆ. ಸ್ವಾರ್ಟ್‍ಪಿಲೆನ್ 250 ಬೈಕ್ ಸ್ಕ್ರಾಂಬ್ಲರ್‍ನಂತಿದ್ದರೆ, ವಿಟ್‍ಪಿಲೆನ್ ಕೆಫೆ ರೇಜರ್ ಬೈಕಿನಂತಿದೆ. ಸ್ವಾರ್ಟ್‍ಪಿಲೆನ್ 250 ಬೈಕಿನಲ್ಲಿ ಡ್ಯುಯಲ್ ಪರ್ಪಸ್ ಟಯರ್‍ಗಳನ್ನು ಅಳವಡಿಸಲಾಗಿದೆ.

ವಿಭಿನ್ನವಾದ ಕೆಫೆ ರೇಜರ್ ಬೈಕ್ ಆದ ವಿಟ್‍ಪಿಲೆನ್ 250 ಬೈಕ್, ಹ್ಯಾಂಡಲ್‍ಬಾರ್ ಮೇಲೆ ಕ್ಲಿಪ್ ಹಾಗೂ ಮುಂಭಾಗಕ್ಕೆ ಬಾಗಿರುವ ಸೀಟಿಂಗ್ ಸಿಸ್ಟಂಗಳನ್ನು ಹೊಂದಿದೆ. ಈ ಬೈಕ್‍ಗಳಲ್ಲಿ ಕೆಟಿಎಂ ಡ್ಯೂಕ್ 250 ಬೈಕಿನಲ್ಲಿರುವಂತಹ 248.8 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಈ ಎಂಜಿನ್ 29.5 ಬಿಹೆಚ್‍ಪಿ ಪವರ್ ಹಾಗೂ 24 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್‍ಗಳಲ್ಲಿ ಕೆಟಿಎಂ ಬೈಕ್‍ಗಳಲ್ಲಿರುವಂತಹ ಟ್ರೆಲ್ಲಿಸ್ ಫ್ರೇಂ ಸಿಸ್ಟಂ ನೀಡಲಾಗಿದೆ. ಈ ಸಿಸ್ಟಂನಿಂದಾಗಿ ಬೈಕಿನ ಲುಕ್ ಹೆಚ್ಚುವುದರ ಜೊತೆಗೆ ಹ್ಯಾಂಡ್ಲಿಂಗ್ ಹೆಚ್ಚು ಸಹಕಾರಿಯಾಗಿದೆ.

ಸಸ್ಪೆಂಷನ್‍ಗಳಿಗಾಗಿ ಈ ಬೈಕ್‍ಗಳ ಮುಂಭಾಗದಲ್ಲಿ 43 ಎಂಎಂ ಡಬ್ಲ್ಯುಪಿ ಅಪೆಕ್ಸ್ ಅಪ್‍ಸೈಡ್ ಡೌನ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಡಬ್ಲ್ಯುಪಿ ಅಪೆಕ್ಸ್ ಮೊನೊ ಶಾಕ್ ಅಬ್ಸರ್ವರ್‍ಗಳನ್ನು ನೀಡಲಾಗಿದೆ. ಮುಂಭಾಗದಲ್ಲಿ 320 ಎಂಎಂನ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 230 ಎಂಎಂನ ಡಿಸ್ಕ್ ಬ್ರೇಕ್‍ಗಳಿವೆ. ಬಾಷ್ ಕಂಪನಿಯ ಡ್ಯುಯಲ್ ಚಾನೆಲ್ ಎಬಿಎಸ್ ಬ್ರೇಕಿಂಗ್ ಟೆಕ್ನಾಲಜಿಯನ್ನು ಈ ಬೈಕ್‍ಗಳಲ್ಲಿ ಅಳವಡಿಸಲಾಗಿದೆ.