ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಕವಾಸಕಿ ಝಡ್900 ಬೈಕ್

ಕವಾಸಕಿ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಪ್ರೀಮಿಯಂ ಝಡ್900 ಬೈಕನ್ನು ಭಾರತದಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಕವಾಸಕಿ ಕಂಪನಿಯು ಭಾರತದಲ್ಲಿ ಈ ಹೊಸ ಝಡ್900 ಬೈಕನ್ನು ಇದೇ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಕವಾಸಕಿ ಝಡ್900 ಬೈಕ್

ಹೊಸ ಕವಾಸಕಿ ಝಡ್900 ಬೈಕಿನಲ್ಲಿ ಹಲವಾರು ಹೊಸ ಫೀಚರ್ಸ್‍‍ಗಳನ್ನು ಹೊಂದಿರಲಿದೆದೆ. ಇದರಲ್ಲಿ ಹೆಡ್‍‍ಲ್ಯಾಂಪ್ ಮತ್ತು ಟೇಲ್‍‍ಲೈ‍‍ಟ್‍, ಎಲ್‍ಇಡಿ ಲೈಟ್‍ಗಳು ಮತ್ತು ಎರಡು ಕಡೆಗಳಲ್ಲಿ ನವೀಕರಿಸಿದ ಸಸ್ಪೆಂಕ್ಷನ್ ಸೆಟ್ಟಿಂಗ್‍‍ಗಳು ಮತ್ತು ರೈಡಿಯಾಲಜಿ ಎಂಬ ಆ್ಯಪ್ ಮೂಲಕ ಸ್ಮಾರ್ಟ್‍‍ಫೋನ್ ಕನೆಕ್ಟಿವಿಟಿ ಹೊಂದಿರುವ ಹೊಸ 4.3 ಇಂಚಿನ ಟಿಎ‍ಫ್‍ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿರಲಿದೆ. ಈ ಹೊಸ ಕವಾಸಕಿ ಝಡ್900 ಬೈಕ್ ಇದೇ ತಿಂಗಳ ಮೂರನೇ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಕವಾಸಕಿ ಝಡ್900 ಬೈಕ್

ಹೊಸ ಕವಾಸಕಿ ಝಡ್‍900 ಬೈಕಿನಲ್ಲಿ 948 ಸಿಸಿ ಇನ್‍-ಲೈನ್ ನಾಲ್ಕು ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 9,500 ಆರ್‍‍‍ಪಿಎಂನಲ್ಲಿ 123 ಬಿ‍‍ಹೆಚ್‍‍ಪಿ ಪವರ್ ಮತ್ತು 7,700 ಆರ್‍‍ಪಿಎಂನಲ್ಲಿ 98.4 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಕವಾಸಕಿ ಝಡ್900 ಬೈಕ್

ಈ ಎಂಜಿನ್‍‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಬಿಎಸ್-6 ಕವಾಸಕಿ ಝಡ್900 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.50 ಲಕ್ಷಗಳಿಂದ ರೂ.9 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಕವಾಸಕಿ ಝಡ್900 ಬೈಕ್

ಹೊಸ ಕವಾಸಕಿ ಝಡ್900 ಬೈಕ್‍‍ನಲ್ಲಿ ಹೊಸ ಪವರ್ ಮೋಡ್‍ನೊಂದಿಗೆ ಇತರ ರೈಡಿಂಗ್ ಮೋಡ್‍‍ಗಳನ್ನು ನೀಡಲಾಗಿದೆ. ಇದರೊಂದಿಗೆ ಟ್ರಾಕ್ಷನ್ ಕಂಟ್ರೂಲ್, ಸ್ಟ್ರಾಂಗ್ ಫ್ರೇಮ್ ಮತ್ತು ಡನ್‍‍ಲಾಪ್ ಸ್ಪೋರ್ಟ್ಸ್‌ಮ್ಯಾಕ್ಸ್ ರೋಡ್ಸ್‌ಪೋರ್ಟ್ 2 ಟಯರ್‍‍ಗಳನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಕವಾಸಕಿ ಝಡ್900 ಬೈಕ್

ಹೊಸ ಕವಾಸಕಿ ಝಡ್900 ಬೈಕ್ ಅನ್ನು ಎರಡು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ನೀಡುತ್ತದೆ. ಇದು ಮೆಟಾಲಿಕ್ ಗ್ರ್ಯಾಫೈಟ್ ಗ್ರೇ ಜೊತೆ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಜೊತೆ ಮೆಟಾಲಿಕ್ ಫ್ಲಾಟ್ ಸ್ಪಾರ್ಕ್ ಬ್ಲ್ಯಾಕ್ ಬಣ್ಣಗಳಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಕವಾಸಕಿ ಝಡ್900 ಬೈಕ್

ಹೊಸ ಕವಸಾಕಿ ಝಡ್900 ಬೈಕ್ ಇತರ ಬದಲಾವಣೆಗಳನ್ನು ಮಾಡಲಾಗಿಲ್ಲ. ಉಳಿದಂತೆ ಸಸ್ಪೆಂಕ್ಷನ್ ಸೆಟಪ್ ಗಾಗಿ ಮುಂಭಾಗದಲ್ಲಿ ಅದೇ 41 ಎಂಎಂ ಯು‍ಎಸ್‍‍ಡಿ ಫೋರ್ಕ್‍‍ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಕವಾಸಕಿ ಝಡ್900 ಬೈಕ್

ಬ್ರೇಕಿಂಗ್ ಸಿಸ್ಟಂನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಮುಂಭಾಗದಲ್ಲಿ ಡ್ಯುಯಲ್ 300 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 250 ಎಂಎಂ ಪೆಟಲ್ ಡಿಸ್ಕ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿ‍ಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಕವಾಸಕಿ ಝಡ್900 ಬೈಕ್

ಕವಾಸಕಿ ಝಡ್900 ಪ್ರೀಮಿಯಂ ಸೂಪರ್‍‍ನೇಕಡ್ ಬೈಕ್ ಆಗಿದೆ. ಕವಾಸಕಿ ಕಂಪನಿಯು ತನ್ನ ಜನಪ್ರಿಯ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗುತ್ತಿದೆ. ಅದರಂತೆ ಶೀಘ್ರದಲ್ಲೇ ಬಿಎಸ್-6 ಕವಾಸಕಿ ಝಡ್900 ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Kawasaki Z900 BS6 to launch in September third week. Read In Kannada.
Story first published: Tuesday, September 1, 2020, 11:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X