ದುಬಾರಿಯಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್

ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನ ಹಿಮಾಲಯನ್ ಬೈಕ್ ಬೆಲೆಯನ್ನು ಹೆಚ್ಚಿಸಿದ ಬಳಿಕ ಇದೀಗ ತನ್ನ ಇನ್ನೊಂದು ಜನಪ್ರಿಯ ಮಾದರಿಯಾದ ಕ್ಲಾಸಿಕ್ 350 ಬೆಲೆಯನ್ನು ಹೆಚ್ಚಿಸಿದೆ. ಈ ಹೊಸ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.57 ಲಕ್ಷಗಳಾಗಿದೆ.

ದುಬಾರಿಯಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್

ಇದೀಗ ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಕ್ಲಾಸಿಕ್ 350 ಬೈಕಿನ ಬೆಲೆಯನ್ನು ಹೆಚ್ಚಿಸಲಾಗಿದೆ. ಬಿ‍ಎಸ್ 6 ಕ್ಲಾಸಿಕ್ 350 ಬೈಕ್ ಹೊಸ ಎಂಜಿನ್‍‍ನೊಂದಿಗೆ ಹಲವಾರು ಅಪ್‍‍ಡೇಟ್‍‍ಗಳನ್ನು . ಇವುಗಳಲ್ಲಿ ಹೊಸ ಫೀಚರ್‍‍ಗಳು, ಎಕ್ವಿಪ್‍‍ಮೆಂಟ್‍‍ಗಳು, ಹೊಸ ಬಣ್ಣಗಳು ಸೇರಿವೆ. ಪ್ರಮುಖ ಬದಲಾವಣೆಯೆಂದರೆ ಹೊಸ ಬೈಕಿನಲ್ಲಿ 346 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

ದುಬಾರಿಯಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್

ಹೊಸ ಕ್ಲಾಸಿಕ್ 350 ಬೈಕಿನಲ್ಲಿರುವ ಬಿ‍ಎಸ್ 4 ಎಂಜಿನ್ 19.8 ಬಿ‍‍ಹೆಚ್‍‍ಪಿ ಪವರ್ ಹಾಗೂ 28 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ದುಬಾರಿಯಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್

ಹಳೆಯ ಬೈಕಿನಲ್ಲಿ ಕಾರ್ಬುರೇಟರ್‍‍ಗಳನ್ನು ಅಳವಡಿಸಲಾಗಿದ್ದರೆ, ಹೊಸ ಬೈಕಿನಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅಳವಡಿಸಲಾಗಿದೆ. ಇದರಿಂದಾಗಿ ಬಿ‍ಎಸ್ 6 ಮಾಲಿನ್ಯ ನಿಯಮಗಳಿಗೆ ಹೊಂದಿಕೊಳ್ಳಲು ಸಹಾಯವಾಗಲಿದೆ. ಎಂಜಿನ್‍‍ನ ಹೊರತಾಗಿ ಹೊಸ ಬೈಕ್ ಅಲಾಯ್ ವ್ಹೀಲ್‍, ಸ್ಟೀಲ್ತ್ ಬ್ಲಾಕ್ ಹಾಗೂ ಕ್ರೋಮ್ ಬ್ಲಾಕ್‍ ಎಂಬ ಎರಡು ಹೊಸ ಬಣ್ಣಗಳನ್ನು ಹೊಂದಿದೆ.

ದುಬಾರಿಯಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್

ಈ ಹೊಸ ಬಣ್ಣಗಳ ಜೊತೆಗೆ ಬಿಎಸ್ 6 ಕ್ಲಾಸಿಕ್ 350 ಬೈಕ್ ಅನ್ನು ಸಿಗ್ನಲ್ಸ್ ಏರ್ ಬೋರ್ನ್ ಬ್ಲೂ, ಸಿಗ್ನಲ್ಸ್ ಸ್ಟಾರ್ಮ್ ರೈಡರ್ ಸ್ಯಾಂಡ್, ಗನ್ ಮೆಟಲ್ ಗ್ರೇ ಹಾಗೂ ಕ್ಲಾಸಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತಿವೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ದುಬಾರಿಯಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್

ಹೆಚ್ಚು ಪ್ರೀಮಿಯಂ ಆವೃತ್ತಿಯಾದ ಡ್ಯುಯಲ್ ಚಾನೆಲ್ ಎಬಿಎಸ್ ಆವೃತ್ತಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.65 ಲಕ್ಷಗಳಾಗಿದೆ. ಈ ಆವೃತ್ತಿಯು ಕ್ರೋಮ್ ಬ್ಲ್ಯಾಕ್, ಕ್ಲಾಸಿಕ್ ಬ್ಲ್ಯಾಕ್, ಸ್ಟೆಲ್ತ್ ಬ್ಲ್ಯಾಕ್, ಸ್ಟಾರ್ಮ್‌ರೈಡರ್ ಸ್ಯಾಂಡ್, ಬ್ಲೂ ಮತ್ತು ಗನ್‌ಮೆಟಲ್ ಗ್ರೇ. ಎಂಬ ಬಣ್ಣಗಳಲ್ಲಿ ಲಭ್ಯವಿದೆ.

ದುಬಾರಿಯಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್

ಸ್ಟಲ್ತ್ ಬ್ಲ್ಯಾಕ್ ಮತ್ತು ಗನ್ ಮೆಟಲ್ ಗ್ರೇ ಬಣ್ಣದ ರೂಪಾಂತರಗಳಲ್ಲಿ ಟ್ಯೂಬ್‌ಲೆಸ್ ಟಯರ್ ಗಳೊಂದಿಗೆ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ರಾಯಲ್ ಎನ್‍ಫೀಲ್ಡ್ ಬೈಕುಗಳ ಬೆಲೆ ಏರಿಕೆಯ ಹೊರತಾಗಿ ಬೈಕಿನಲ್ಲಿ ಇತರ ಯಾವುದೇ ಬದಲಾವಣೆಗಳನ್ನು ಅಥವಾ ನವೀಕರಣಗಳನ್ನು ಮಾಡಲಾಗುವುದಿಲ್ಲ. ಕ್ಲಾಸಿಕ್ 350 ಬೈಕಿನ ಬೆಲೆಯನ್ನು ರೂ.2,755ಗಳವರೆಗೆ ಹೆಚ್ಚಿಸಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

Model BS6 Colour Old BS6 Price New BS6 Price Price Hike
Classic 350 Single-Channel ABS Chestnut Red, Ash, Mercury Silver, and Redditch Red Rs 1,57,097 Rs 1,59,851 Rs 2,754
Classic 350 Dual-Channel ABS

Classic Black Rs 1,65,026 Rs 1,67,780 Rs 2,754
Airborne Blue and Stormrider Sand Rs 1,75,217 Rs 1,77,972 Rs 2,755
Gunmetal Grey Rs 1,78,573 Rs 1,81,327 Rs 2,754
Chrome Black and Stealth Black Rs 1,81,727 Rs 1,84,482 Rs 2,755
ದುಬಾರಿಯಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್

ರಾಯಲ್ ಎನ್‍‍‍ಫೀಲ್ಡ್ ಕಂಪನಿಯು ತನ್ನ 500 ಸಿಸಿ ಯು‍ಸಿಇ ಸೆಗ್‍‍ಮೆಂಟ್‍‍ನ ಬೈ‍ಕುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿದೆ. ಆದರೆ 500ಸಿಸಿ ಸೆಗ್‍‍ಮೆಂಟ್‍ ಬೈಕು‍ಗಳ ನೆನಪಿಗಾಗಿ ತಯಾರಕ ಕಂಪನಿಯು ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಲಿಮೆಟೆಡ್ ಆವೃತ್ತಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಿದ್ದರು.

ದುಬಾರಿಯಾಯ್ತು ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್

ರಾಯಲ್ ಎನ್‍ಫೀಲ್ಡ್ ಕಂಪನಿಯು ಕರೋನಾ ವೈರಸ್ ನಿಂದಾಗಿ ಮಾರಾಟದಲ್ಲಿ ಕುಸಿತ ಕಂಡಿರುವ ವೇಳೆಯಲ್ಲಿ ಕ್ಲಾಸಿಕ್ 350 ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಕೇವಲ ಕ್ಲಾಸಿಕ್ ಬೈಕ್ ಅಲ್ಲದೇ ಹಿಮಾಲಯನ್ ಮತ್ತು ಬುಲೆಟ್ ಮಾದರಿಗಳಬೆಲೆಯನ್ನು ಹೆಚಿಸಿದೆ.

Most Read Articles

Kannada
English summary
Prices of BS6 Royal Enfield Classic 350 hiked. Read in Kannada.
Story first published: Saturday, May 16, 2020, 18:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X