ಹೊಸ ಟೈಗರ್ 900 ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಹೊಸ ಟ್ರಯಂಫ್ ಟೈಗರ್ 900 ಅಡ್ವೆಂಚರ್ ಟೂರರ್ ಬೈಕನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಈ ಹೊಸ ಟ್ರಯಂಫ್ ಟೈಗರ್ 900 ಬೈಕಿನ ವಿತರಣೆಯನ್ನು ಪ್ರಾರಂಭಿಸಿದ್ದಾರೆ.

ಹೊಸ ಟೈಗರ್ 900 ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ಹೊಸ ಟೈಗರ್ 900 ಬೈಕಿನ ಆರಂಭಿಕ ಬೆಲೆಯು ರೂ.13.70 ಲಕ್ಷಗಳಾಗಿದೆ. ಟ್ರಯಂಫ್ ಟೈಗರ್ 900 ಬೈಕ್ ಜಿಟಿ (ರಸ್ತೆ-ಕೇಂದ್ರಿತ), ರ‌್ಯಾಲಿ (ಆಫ್-ರೋಡ್) ಮತ್ತು ರೇಂಜ್-ಟಾಪಿಂಗ್ ರ‌್ಯಾಲಿ ಪ್ರೊ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಟಾಪ್ ಸ್ಪೆಕ್ ರ‌್ಯಾಲಿ ಪ್ರೊ ರೂಪಾಂತರದ ಬೆಲೆಯು ರೂ.15.50 ಲಕ್ಷಗಳಾಗಿದೆ. ಮಿಡ್ ಸ್ಪೆಕ್ ರ‌್ಯಾಲಿ ರೂಪಾಂತರದ ಬೆಲೆ ರೂ.14.35 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಹೊಸ ಟೈಗರ್ 900 ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ಟ್ರಯಂಫ್ ಕಂಪನಿಯು ಈ ಹೊಸ ಟೈಗರ್ 900 ಬೈಕಿನ ಬುಕ್ಕಿಂಗ್ ಅನ್ನು ಇತ್ತೀಚೆಗೆ ಆರಂಭಿಸಿತು. ಈ ಹೊಸ ಟೈಗರ್ 900 ಬೈಕ್ ಗಾಗಿ ಗ್ರಾಹಕರು ಟೋಕನ್ ಮೊತ್ತ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಹೊಸ ಟೈಗರ್ 900 ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ಹೊಸ ಟೈಗರ್ 900 ಬೈಕ್ ಹೆಚ್ಚು ಪವರ್‍‍ಫುಲ್ ಎಂಜಿನ್ ಅನ್ನು ಹೊಂದಿದೆ. ಹೊಸ ಟೈಗರ್ 900 ಬೈಕಿನಲ್ಲಿ ಬೋಲ್ಡ್ - ಆನ್ ಸಬ್ ಫ್ರೇಮ್, ಹೊಸ ಅಲ್ಯೂಮಿನಿಯಂ ಸ್ವಿಂಗಾರ್ಮ್, ಹೊಸ ಎಲ್‍ಇ‍ಡಿ ಹೆಡ್‍‍ಲ್ಯಾಂಪ್, ಡಿ‍ಆರ್‍ಎಲ್ ಮತ್ತು ಟಿಎಫ್‍ಟಿ ಸ್ಕ್ರೀನ್ ಅನ್ನು ಅಳವಡಿಸಿದೆ.

ಹೊಸ ಟೈಗರ್ 900 ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ಹೊಸ ಬೈಕ್ ಟೈಗರ್ 800 ಬೈಕ್‍‍ಗಿಂತ ಹಗುರವಾಗಿದೆ. ಟೈಗರ್ 900 ಬೈಕ್ ಟೈಟರ್ ಫ್ಯೂಯಲ್ ಟ್ಯಾಂಕ್ ಹೊಂದಿರುವುದರಿಂದ ಬೈಕ್ ಅನ್ನು ಸುಲಭವಾಗಿ ರೈಡ್ ಮಾಡಲು ಸಹಕಾರಿಯಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಹೊಸ ಟೈಗರ್ 900 ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ಇದು ಟೈಗರ್ 800 ಮಾದರಿಯ ಅಲ್ಯೂಮಿನಿಯಂ ಫಿನಿಶ್‍‍ಗೆ ಹೋಲಿಸಿದರೆ ಪ್ಲಾಸ್ಟಿಕ್‍‍ನಿಂದ ಮಾಡಲ್ಪಟ್ಟ ನವೀಕರಿಸಿದ ಫ್ರಂಟ್ ಫೆಂಡರ್, ವಿಂಡ್‍‍ಸ್ಕ್ರೀನ್ ಮತ್ತು ಸಂಪ್ ಗಾರ್ಡ್ ಅನ್ನು ಹೊಂದಿದೆ. ಟ್ರಯಂಫ್ ಟೈಗರ್ 800 ಬೈಕಿನ ಎಕ್ಸ್‌ಆರ್ ಮತ್ತು ಎಕ್ಸ್‌ಸಿ ರೂಪಾಂತರಗಳನ್ನು ಟ್ರೈಗರ್ 900ನಲ್ಲಿ ಜಿಟಿ ಮತ್ತು ರ್‍ಯಾಲಿ ಮಾದರಿಗಳೊಂದಿಗೆ ಬದಲಾಯಿಸಿದೆ.

ಹೊಸ ಟೈಗರ್ 900 ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ಟ್ರಯಂಫ್ ಟೈಗರ್ 900 ಬೈಕಿನಲ್ಲಿ 888 ಸಿಸಿ ಇನ್‍‍ಲೈನ್ 3 ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಯುರೋ 5 ಮತ್ತು ಬಿಎಸ್-6 ಮಾಲಿನ್ಯ ನಿಯಮದ ಅನುಸಾರವಾಗಿದೆ. ಈ ಎಂಜಿನ್ 94 ಬಿ‍‍ಹೆಚ್‍‍ಪಿ ಪವರ್ ಮತ್ತು 87 ಎನ್‍‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಟೈಗರ್ 900 ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ಜಿಟಿ ರೂಪಾಂತರದಲ್ಲಿ ಸಸ್ಪೆಂಷನ್ ಮತ್ತು ಬ್ರೇಕಿಂಗ್ ಅನ್ನು 180 ಎಂಎಂ ಫ್ರಂಟ್ ಮತ್ತು 170 ರೇರ್ ಬ್ರೇಕ್‍ನೊಂದಿಗೆ ಅಡ್ಜೆಂಸ್ಟ್ ಮಾಡಬಹುದಾದ ಮೊನೊಶಾಕ್ ಅನ್ನು ಹೊಂದಿದೆ. ಪ್ರೊ ಟ್ರೀಮ್ 9 ಹಂತದ ಡ್ಯಾಂಪಿಂಗ್ ಮತ್ತು 4 ಫ್ರೀಪಿಕ್ಸ್ ಪ್ರೀ ಲೋಡ್ ಸೆಟ್ಟಿಂಗ್‍‍ಗಳೊಂದಿಗೆ ಎಲೆಕ್ಟ್ರಾನಿಕ್ ಅಡ್ಜೆಂಸ್ಟ್ ಬಲ್ ಹೊಂದಿರುವ ಮೊನೊಶಾಕ್ ಹೊಂದಿದೆ.

ಹೊಸ ಟೈಗರ್ 900 ಬೈಕಿನ ವಿತರಣೆ ಆರಂಭಿಸಿದ ಟ್ರಯಂಫ್

ಈ ಬೈಕಿನಲ್ಲಿ ಮೆಟ್ಜೆಲರ್ ಟೂರನ್ಸ್ ನೆಕ್ಸ್ಟ್ ಟಯರ್‍‍ಗಳೊಂದಿಗೆ 19/17 ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಸ್ಟೈಲ್ಮಾ ಕ್ಯಾಲಿಪರ್‍‍ಗಳ ಮೂಲಕ ಬ್ರೇಕಿಂಗ್ ಹೊಂದಿದೆ. ಈ ಹೊಸ ಟ್ರಯಂಫ್ ಟೈಗರ್ 900 ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಫ್ 850 ಜಿಎಸ್, ಹೊಸ ಹೋಂಡಾ ಆಫ್ರಿಕಾ ಟ್ವಿನ್ ಮತ್ತು ಡುಕಾಟಿ ಮಲ್ಟಿಸ್ಟ್ರಾಡಾ 950 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Triumph Tiger 900 BS6 Models Deliveries Begin In India. Read In Kannada.
Story first published: Monday, July 6, 2020, 15:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X