ಅತಿ ಹೆಚ್ಚು ಮೈಲೇಜ್ ನೀಡಿ ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ ಈ ಟಿವಿಎಸ್ ಬೈಕ್

ಟಿವಿಎಸ್ ಮೋಟಾರ್ ಕಂಪನಿಯು 110ಸಿಸಿ 'ಸ್ಪೋರ್ಟ್' ಬೈಕ್ ಅತ್ಯುನ್ನತ ಆನ್-ರೋಡ್ ಮೈಲೇಜ್ ನೀಡಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಟಿವಿಎಸ್ ಬೈಕುಗಳ ಸರಣಿಯಲ್ಲಿ ಸ್ಪೋರ್ಟ್ಸ್ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡಿ ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ ಈ ಟಿವಿಎಸ್ ಬೈಕ್

ಟಿವಿಎಸ್ ಸ್ಪೋರ್ಟ್ ಕಮ್ಯೂಟರ್ ಬೈಕ್ ಪ್ರತಿ ಲೀಟರ್‌ಗೆ 110.12 ಕಿ.ಮೀ ಮೈಲೇಜ್ ಅನ್ನು ಒದಗಿಸಿ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪ್ರವೇಶಿಸಿದೆ. ಬಿಎಸ್-6 ಪ್ರೇರಿತ ಮಾದರಿಯು ಹಿಂದಿನ ಬಿಎಸ್ 4 ಮಾದರಿಯ ದಾಖಲೆಯನ್ನು ತಾನೇ ಬ್ರೇಕ್ ಮಾಡಿದೆ. ಯುನೈಟೆಡ್ ಇಂಡಿಯಾ ರೈಡ್ ಸರಣಿಯ ಅಂಗವಾಗಿ 2020ರ ಆಗಸ್ಟ್ 8 ಮತ್ತು 13ರ ನಡುವೆ ಟಿವಿಎಸ್ ಸ್ಪೋರ್ಟ್ ಬೈಕ್ ರೈಡ್ ಮಾಡಿದ ಪವಿತ್ರಾ ಪ್ಯಾಟ್ರೊ ಅವರು ಈ ಹೊಸ ದಾಖಲೆಯನ್ನು ಸಾಧಿಸಿದ್ದಾರೆ.

ಅತಿ ಹೆಚ್ಚು ಮೈಲೇಜ್ ನೀಡಿ ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ ಈ ಟಿವಿಎಸ್ ಬೈಕ್

ಪ್ಯಾಟ್ರೊ ಟಿವಿಎಸ್ ಸ್ಪೋರ್ಟ್‌ನಲ್ಲಿ 54 ಲ್ಯಾಪ್‌ಗಳಲ್ಲಿ ಒಟ್ಟು 1021.90 ಕಿ.ಮೀ ದೂರವರೆಗೂ ಚಲಾಯಿಸಿದ್ದಾರೆ, ಈ ಒಟ್ಟು 1021.90 ಕಿ.ಮೀ ದೂರವನ್ನು ಚಲಿಸಲು 9.28-ಲೀಟರ್ ಫ್ಯೂಯಲ್ ಬಳಿಕೆಯಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಅತಿ ಹೆಚ್ಚು ಮೈಲೇಜ್ ನೀಡಿ ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ ಈ ಟಿವಿಎಸ್ ಬೈಕ್

ಟಿವಿಎಸ್ ಸ್ಪೋರ್ಟ್ ತನ್ನದೇ ಆದ 2019ರ ದಾಖಲೆಯನ್ನು ಮುರಿದಿದೆ. ಟಿವಿಎಸ್ ಸ್ಪೋರ್ಟ್‌ನ ಹಳೆಯ ಹಿಂದಿನ ಬಿಎಸ್-4 100 ಸಿಸಿ ಆವೃತ್ತಿಯು ಕಳೆದ ವರ್ಷ ಭಾರತ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪ್ರವೇಶಿಸಿತ್ತು. ಈ ಸಂದರ್ಭದಲ್ಲಿ ಆನ್-ರೋಡ್ 76.40 ಕಿ.ಮೀ ಮೈಲೇಜ್ ಒದಗಿಸಿ ದಾಖಲೆಯನ್ನು ನಿರ್ಮಿಸಿದ್ದರು.

ಅತಿ ಹೆಚ್ಚು ಮೈಲೇಜ್ ನೀಡಿ ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ ಈ ಟಿವಿಎಸ್ ಬೈಕ್

ಕಮ್ಯೂಟರ್ ಮೋಟಾರ್‌ಸೈಕಲ್ಸ್, ಸ್ಕೂಟರ್ಸ್ ಮತ್ತು ಕಾರ್ಪೊರೇಟ್ ಬ್ರ್ಯಾಂಡ್‌ನ ಉಪಾಧ್ಯಕ್ಷ (ಮಾರ್ಕೆಟಿಂಗ್) ಅನಿರುದ್ಧಾ ಹಲ್ದಾರ್ ಅವರು ಮಾತನಾಡಿ, 'ಭರತ್ ಕಾ ಮೈಲೇಜ್ ಚಾಂಪಿಯನ್' ಎಂಬುದನ್ನು ಟಿವಿಎಸ್ ಸ್ಪೋರ್ಟ್ ಮತ್ತೆ ಹೊಸ ದಾಖಲೆಯನ್ನು ನಿರ್ಮಿಸಿ ಸಾಬಿತು ಮಾಡಿದೆ ಎಂದರು.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಅತಿ ಹೆಚ್ಚು ಮೈಲೇಜ್ ನೀಡಿ ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ ಈ ಟಿವಿಎಸ್ ಬೈಕ್

ಟಿವಿಎಸ್ ಸ್ಪೋರ್ಟ್ ಬಿಎಸ್-6 ಮಾದರಿಯಲ್ಲಿ ಇಟಿ-ಫೈ ತಂತ್ರಜ್ಞಾನದಿಂದಾಗಿ ಮೈಲೇಜ್ ಗಮನಾರ್ಹ ಸುಧಾರಣೆಯಾಗಿದ್ದು, ಇದರಿಂದ ಈ ಹೊಸ ದಾಖಲೆಯನ್ನು ನಿರ್ಮಿಸಿದೆ. ಸತತ ಎರಡು ದಾಖಲೆಗಳನ್ನು ಸಾಧಿಸಿದರೂ, ಟಿವಿಎಸ್ ಸ್ಪೋರ್ಟ್‌ನ ಸಾಟಿಯಿಲ್ಲದ ಸಾಧನೆ ಎಂದರೆ 2.5 ದಶಲಕ್ಷಕ್ಕೂ ಹೆಚ್ಚಿನ ಗ್ರಾಹಕರು ಅದರಲ್ಲಿ ಇಟ್ಟಿರುವ ನಂಬಿಕೆಯಾಗಿದೆ ಎಂದು ಹೇಳಿದರು.

ಅತಿ ಹೆಚ್ಚು ಮೈಲೇಜ್ ನೀಡಿ ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ ಈ ಟಿವಿಎಸ್ ಬೈಕ್

ಟಿವಿಎಸ್ ಸ್ಪೋರ್ಟ್ ಬೈಕಿನಲ್ಲಿ ಬಿಎಸ್-6, 109.7 ಸಿಸಿ, ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8.17 ಬಿಹೆಚ್‌ಪಿ ಪವರ್ ಮತ್ತು 8.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅತಿ ಹೆಚ್ಚು ಮೈಲೇಜ್ ನೀಡಿ ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ ಈ ಟಿವಿಎಸ್ ಬೈಕ್

ಹಿಂದಿನ ಬಿಎಸ್-4 ಟಿವಿಎಸ್ ಸ್ಪೋರ್ಟ್ ಬೈಕಿನಲ್ಲಿ 99.7 ಸಿಸಿ ಎಂಜಿನ್ ಅನ್ನು ಅಳವಡಿಸಿದ್ದರು. ಈ ಎಂಜಿನ್ 7.27 ಬಿಹೆಚ್‌ಪಿ ಪವರ್ ಮತ್ತು 7.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅತಿ ಹೆಚ್ಚು ಮೈಲೇಜ್ ನೀಡಿ ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ ಈ ಟಿವಿಎಸ್ ಬೈಕ್

ಟಿವಿಎಸ್ ಸ್ಪೋರ್ಟ್ ಬೈಕ್ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇದು ವಾಲ್ಕೆನೊ ರೆಡ್, ಮೆರೆಕ್ಯೂರಿ ಗ್ರೇ, ಬ್ಲ್ಯಾಕ್ ಜೊತೆ ರೆಡ್, ರೆಡ್ ಮತ್ತು ವೈಟ್ ಜೊತೆ ಪರ್ಪಲ್ ಬಣ್ಣಗಳ ಆಯ್ಕೆಯಾಗಿದೆ.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಅತಿ ಹೆಚ್ಚು ಮೈಲೇಜ್ ನೀಡಿ ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ ಈ ಟಿವಿಎಸ್ ಬೈಕ್

ಈ ಬೈಕಿನಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಐದು ಹಂತದ ಅಡ್ಜೆಸ್ಟಬಲ್ ರೇರ್ ಶಾಕ್ ಅಬ್ಸಾರ್ಬರ್ ಅನ್ನು ಹೊಂದಿದೆ. ಇನ್ನು ಆಂಕರಿಂಗ್ ಪವರ್ 130 ಎಂಎಂ ಫ್ರಂಟ್ ಮತ್ತು 110 ಎಂಎಂ ರೇರ್ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಅತಿ ಹೆಚ್ಚು ಮೈಲೇಜ್ ನೀಡಿ ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ ಈ ಟಿವಿಎಸ್ ಬೈಕ್

ಭಾರತದಲ್ಲಿ ಹೆಚ್ಚಿನವರು ಬೈಕ್ ಖರೀದಿಸುವ ಮೈಲೇಜ್ ವಿಷಯಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತಾರೆ. ಅಂತಹ ಗ್ರಾಹಕರಿಗೆ ಟಿವಿಎಸ್ ಟಿವಿಎಸ್ ಸ್ಪೋರ್ಟ್ ಬೈಕ್ ಉತ್ತಮ ಆಯ್ಕೆಯಾಗಿದೆ. ಟಿವಿಎಸ್ ಸ್ಪೋರ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಸ್ಪ್ಲೆಂಡರ್ ಮತ್ತು ಹೋಂಡಾ ಸಿಡಿ 110 ಡ್ರೀಮ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
TVS Sport BS6 Registers Highest Fuel-Efficiency Of 110.12km/l. Read In Kannada.
Story first published: Thursday, September 24, 2020, 16:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X