ಬಿಡುಗಡೆಗೊಂಡ ಹೊಸ ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಹೆರಿಟೇಜ್ ಬೈಕ್

ಚೀನಾ ಮೂಲದ ಸಿಎಫ್‌ಮೊಟೊ ಕಂಪನಿಯು ತನ್ನ ಬಹುನಿರೀಕ್ಷಿತ 700 ಸಿಎಲ್-ಎಕ್ಸ್ ಹೆರಿಟೇಜ್ ಬೈಕನ್ನು ಫಿಲಿಪೈನ್ಸ್‌ನಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಬೈಕನ್ನು ಇಟಲಿಯ 2019ರ ಇಐಸಿಎಂಎದಲ್ಲಿ ಜಾಗತಿಕವಾಗಿ ಅನಾವರಣಗೊಳಿಸಲಾಯಿತು.

ಬಿಡುಗಡೆಗೊಂಡ ಹೊಸ ಸಿಎಫ್‌ಮೊಟೊ 700ಸಿಎಲ್-ಎಕ್ಸ್ ಹೆರಿಟೇಜ್ ಬೈಕ್

ಹೊಸ ಸಿಎಫ್‌ಮೊಟೊ 700ಸಿಎಲ್-ಎಕ್ಸ್ ಸ್ಪೋರ್ಟ್ ಮತ್ತು ಸಿಎಲ್-ಎಕ್ಸ್ ಅಡ್ವೆಂಚರ್ ಎಂಬ ಇತರ ಇರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಹೆರಿಟೇಜ್ ಮಾದರಿಯು ಅದರ ಹೆಸರೇ ಸೂಚಿಸುವಂತೆ ಕ್ಲಾಸಿಕ್ ಸ್ಟೈಲಿಂಗ್ ಕಂಪ್ಲೀಟ್ ವಿಟ್ ಟ್ಯಾನ್ ಲೆದರ್ ಸೀಟ್, ಡ್ಯುಯಲ್-ಟೋನ್ ಪೇಂಟ್ ಮತ್ತು ಗೋಲ್ಡ್ ಡಿಟೆಲಿಂಗ್ ಅನ್ನು ಪಡೆಯುತ್ತದೆ. ಹೊಸ ಸಿಎಫ್‌ಮೊಟೊ 700ಸಿಎಲ್-ಎಕ್ಸ್ ಬೈಕನ್ನು ಬೆಲೆಯು ರೂ. 5.64 ಲಕ್ಷಗಳಾಗಿದೆ.

ಬಿಡುಗಡೆಗೊಂಡ ಹೊಸ ಸಿಎಫ್‌ಮೊಟೊ 700ಸಿಎಲ್-ಎಕ್ಸ್ ಹೆರಿಟೇಜ್ ಬೈಕ್

ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಬೈಕ್ ಅಡ್ವೆಂಚರ್, ಹೆರಿಟೇಜ್ ಮತ್ತು ಸ್ಪೋರ್ಟ್ ಎಂಬ ಮೂರು ಮಾದರಿಗಳಲ್ಲಿ ಒಂದೇ 693ಸಿಸಿ, ಲಿಕ್ವಿಡ್-ಕೂಲ್ಡ್, ಡಿಒಹೆಚ್‌ಸಿ, ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಬಿಡುಗಡೆಗೊಂಡ ಹೊಸ ಸಿಎಫ್‌ಮೊಟೊ 700ಸಿಎಲ್-ಎಕ್ಸ್ ಹೆರಿಟೇಜ್ ಬೈಕ್

ಈ ಎಂಜಿನ್ 8,500 ಆರ್‌ಪಿಎಂನಲ್ಲಿ 73 ಬಿಹೆಚ್‌ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 68 ಎನ್‌ಎಂ ಪೀಕ್ ಟಾರ್ಕ್ ಅನ್ನ ಉತ್ಪಾದಿಸುತ್ತದೆ .ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಬೈಕ್ ಆಕರ್ಷಕವಾಗಿ ವಿಭಿನ್ನವಾದ ವಿನ್ಯಾಸವನ್ನು ಹೊಂದಿದೆ.

ಬಿಡುಗಡೆಗೊಂಡ ಹೊಸ ಸಿಎಫ್‌ಮೊಟೊ 700ಸಿಎಲ್-ಎಕ್ಸ್ ಹೆರಿಟೇಜ್ ಬೈಕ್

ಈ ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಮಾದರಿಗಳಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 41 ಎಂಎಂ ಕೆವೈಬಿ ಇನ್ವರ್ಡಡ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ 150 ಎಂಎಂ ಪ್ರಿ ಲೋಡ್‌ನೊಂದಿಗೆ ಕೆವೈಬಿ ಮೊನೊಶಾಕ್ ಸೆಟಪ್ ಅನ್ನು ಅಳವಡಿಸಲಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಿಡುಗಡೆಗೊಂಡ ಹೊಸ ಸಿಎಫ್‌ಮೊಟೊ 700ಸಿಎಲ್-ಎಕ್ಸ್ ಹೆರಿಟೇಜ್ ಬೈಕ್

ಇನ್ನು ಈ ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಮಾದರಿಗಳ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಜೆ ಜುವಾನ್ ನಾಲ್ಕು-ಪಿಸ್ಟನ್ ರೇಡಿಯಲ್ ಕ್ಯಾಲಿಪರ್‌ಗಳು ಮತ್ತು ಹಿಂಭಾಗದಲ್ಲಿ 260 ಎಂಎಂ ಡಿಸ್ಕ್ ಗಳೊಂದಿಗೆ ಕಾಂಟಿನೆಂಟಲ್‌ನಿಂದ ಎಬಿಎಸ್‌ನೊಂದಿಗೆ ಬ್ರೇಕಿಂಗ್ ಅನ್ನು ನಿರ್ವಹಿಸುತ್ತದೆ.

ಬಿಡುಗಡೆಗೊಂಡ ಹೊಸ ಸಿಎಫ್‌ಮೊಟೊ 700ಸಿಎಲ್-ಎಕ್ಸ್ ಹೆರಿಟೇಜ್ ಬೈಕ್

ಹೊಸದಾಗಿ ವಿನ್ಯಾಸಗೊಳಿಸಲಾದ ಸ್ಪ್ಲಿಟ್ ಫ್ರೇಮ್ 16.5 ಕೆಜಿ ತೂಕವನ್ನು ಹೊಂದಿದ್ದರೆ, 6.7 ಕೆಜಿ ಅಲ್ಯೂಮಿನಿಯಂ ಅಲಾಯ್ ಸ್ವಿಂಗಾರ್ಮ್ ನೊಂದಿಗೆ 700 ಸಿಎಲ್-ಎಕ್ಸ್ ಹೆರಿಟೇಜ್ ಮಾದರಿಯು 183 ಕೆಜಿ ತೂಕವನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಿಡುಗಡೆಗೊಂಡ ಹೊಸ ಸಿಎಫ್‌ಮೊಟೊ 700ಸಿಎಲ್-ಎಕ್ಸ್ ಹೆರಿಟೇಜ್ ಬೈಕ್

ಈ ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಮಾದರಿಗಳಲ್ಲಿ ಆನ್-ಬೋರ್ಡ್ ಕಂಪ್ಯೂಟರ್ ಎಕಾನಮಿ ಮತ್ತು ಸ್ಪೋರ್ಟ್ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಸಹ ಕ್ರೂಸ್ ಕಂಟ್ರೋಲ್ ಜೊತೆಗೆ ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್ ಅನ್ನು ನೀಡುತ್ತದೆ.

ಬಿಡುಗಡೆಗೊಂಡ ಹೊಸ ಸಿಎಫ್‌ಮೊಟೊ 700ಸಿಎಲ್-ಎಕ್ಸ್ ಹೆರಿಟೇಜ್ ಬೈಕ್

ಹೊಸ ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಮಾದರಿಗಳು ನ್ಯೂ-ರೆಟ್ರೊ ವಿನ್ಯಾಸವನ್ನು ಹೊಂದಿದೆ, ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಮಾದರಿಗಳು ಸ್ಕ್‌ವರ್ನಾ ಕಂಪನಿಯ ಸ್ವಾರ್ಟ್‍‍ಪಿಲೆನ್ ಹಾಗೂ ವಿಟ್‍‍ಪಿಲೆನ್ ಬೈಕ್‍‍ಗಳ ವಿನ್ಯಾಸವನ್ನು ಎರವಲು ಪಡೆದಿದೆ.

Most Read Articles

Kannada
English summary
CFMoto 700 CL-X Heritage Launched In Philippines. Read In Kannada.
Story first published: Wednesday, December 2, 2020, 20:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X