ಚೇತಕ್ ಎಲೆಕ್ಟ್ರಿಕ್ ಸರ್ವೀಸ್ ಸೆಂಟರ್‌ಗಳನ್ನು ಪುನಾರಂಭಗೊಳಿಸಿದ ಬಜಾಜ್ ಆಟೋ

ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯೆಂತೆ ಈಗಾಗಲೇ ವಾಹನ ಮಾರಾಟವನ್ನು ಪುನಾರಂಭಿಸಿರುವ ಬಜಾಜ್ ಆಟೋ ಕಂಪನಿಯು ತನ್ನ ಜನಪ್ರಿಯ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯನ್ನು ಶುರು ಮಾಡಿರುವುದಲ್ಲದೆ ಸರ್ವೀಸ್ ಸೆಂಟರ್‌ಗಳಿಗೂ ಮರುಚಾಲನೆ ನೀಡಿದೆ.

ಚೇತಕ್ ಎಲೆಕ್ಟ್ರಿಕ್ ಸರ್ವೀಸ್ ಸೆಂಟರ್ ತೆರೆದ ಬಜಾಜ್ ಆಟೋ

ಕರೋನಾ ವೈರಸ್ ಪ್ರಕರಣಗಳ ಹೆಚ್ಚಳದ ನಡುವೆಯೂ ಕೇಂದ್ರ ಸರ್ಕಾರವು ಹಸಿರು ಮತ್ತು ಕಿತ್ತಳೆಯ ವಲಯದಲ್ಲಿನ ಕೈಗಾರಿಕಾ ಚಟುವಟಿಕೆಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದ್ದು, ಬಹುತೇಕ ಆಟೋ ಕಂಪನಿಗಳು ಉದ್ಯಮ ವ್ಯವಹಾರವನ್ನು ಪುನಾರಂಭಿಸಿವೆ. ವೈರಸ್ ತಡೆಗಾಗಿ ಲಾಕ್‌ಡೌನ್ ಅನಿವಾರ್ಯವಾಗಿದ್ದರಿಂದ ಭಾರತೀಯ ಆಟೋ ಉದ್ಯಮವು ಸಹ ದಿನಂಪ್ರತಿ ನೂರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಆಟೋ ಕ್ಷೇತ್ರಕ್ಕೆ ವಿನಾಯ್ತಿ ನೀಡಲಾಗಿದೆಯಾದರೂ ಆರ್ಥಿಕ ಮುಗ್ಗಟ್ಟು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಚೇತಕ್ ಎಲೆಕ್ಟ್ರಿಕ್ ಸರ್ವೀಸ್ ಸೆಂಟರ್ ತೆರೆದ ಬಜಾಜ್ ಆಟೋ

ಹೊಸ ಸುರಕ್ಷಾ ಮಾರ್ಗಸೂಚಿತಂತೆ ಆಟೋ ಉದ್ಯಮವು ಮರು ಚಾಲನೆಗೊಂಡರು ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ಪರದಾಡುತ್ತಿದ್ದು, ಹೊಸ ವಾಹನಗಳ ಮಾರಾಟವು ಭಾರೀ ಪ್ರಮಾಣದಲ್ಲಿ ಕುಸಿತ ಕಾಣುವ ಸಾಧ್ಯತೆಗಳಿವೆ.

ಚೇತಕ್ ಎಲೆಕ್ಟ್ರಿಕ್ ಸರ್ವೀಸ್ ಸೆಂಟರ್ ತೆರೆದ ಬಜಾಜ್ ಆಟೋ

ಸಂಕಷ್ಟದ ಪರಿಸ್ಥಿತಿಯಲ್ಲೂ ಕೇಂದ್ರ ಸರ್ಕಾರದ ಹೊಸ ಸುರಕ್ಷಾ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ವಾಹನ ಮಾರಾಟಕ್ಕೆ ಚಾಲನೆ ನೀಡಿರುವ ಆಟೋ ಕಂಪನಿಗಳು ವೈರಸ್ ಹರಡದಂತೆ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಂಡಿವೆ. ಬಜಾಜ್ ಆಟೋ ಕಂಪನಿಯು ಇದೀಗ ದೇಶದ ವಿವಿಧಡೆ ಹರಡಿಕೊಂಡಿರುವ ಸಾವಿರಾರು ವಾಹನ ಮಾರಾಟ ಕೇಂದ್ರಗಳನ್ನು ಪುನಾರಂಭಿಸಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಗರಿಷ್ಟ ಪ್ರಮಾಣದ ಪ್ರೊಟೋಕಾಲ್ ನಿಯಮಗಳನ್ನು ಜಾರಿಗೊಳಿಸಿದೆ.

ಚೇತಕ್ ಎಲೆಕ್ಟ್ರಿಕ್ ಸರ್ವೀಸ್ ಸೆಂಟರ್ ತೆರೆದ ಬಜಾಜ್ ಆಟೋ

ಹೊಸ ಸುರಕ್ಷಾ ಮಾರ್ಗಸೂಚಿಗಳಿಂದಾಗಿ ಪ್ರತಿ ಹಂತದಲ್ಲೂ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಥರ್ಮಾ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಜರ್, ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್ ಬಳಕೆಯೂ ಕಡ್ಡಾಯವಾಗಿಸಿದೆ.

ಚೇತಕ್ ಎಲೆಕ್ಟ್ರಿಕ್ ಸರ್ವೀಸ್ ಸೆಂಟರ್ ತೆರೆದ ಬಜಾಜ್ ಆಟೋ

ಜೊತೆಗೆ ಮಾರಾಟ ಮಳಿಗೆಗಳು ಮತ್ತು ಸರ್ವೀಸ್ ಸೆಂಟರ್‌ಗಳಿಗೆ ಗ್ರಾಹಕರ ಆಗಮನ ತಡೆಯುವುದಕ್ಕಾಗಿ ಕಂಪನಿಯೇ ಆನ್‌ಲೈನ್ ಮೂಲಕವೇ ಪತ್ರ ವ್ಯವಹಾರ ಮುಗಿಸಿ ಅಂತಿಮವಾಗಿ ಬೈಕ್ ಉತ್ಪನ್ನಗಳನ್ನು ಗ್ರಾಹಕರ ಬಾಗಿಲುಗಳಿಗೆ ತಲುಪಿಸುತ್ತಿದ್ದು, ವಾಹನಗಳ ವಿತರಣೆ ಸಂದರ್ಭದಲ್ಲೂ ನಂಜು ನಿರೋಧಕ ರಸಾಯನಿಕಗಳಿಂದ ಸ್ವಚ್ಚಗೊಳಿಸಿದ ನಂತರವೇ ಗ್ರಾಹಕರಿಗೆ ಹಸ್ತಾಂತರಿಸಲಿದೆ.

ಚೇತಕ್ ಎಲೆಕ್ಟ್ರಿಕ್ ಸರ್ವೀಸ್ ಸೆಂಟರ್ ತೆರೆದ ಬಜಾಜ್ ಆಟೋ

ಇನ್ನು ಕರೋನಾ ವೈರಸ್‌ ವಿರುದ್ಧ ಹೋರಾಟದಲ್ಲೂ ಸರ್ಕಾರದ ಬೆನ್ನಿಗೆ ನಿಂತಿರುವ ಬಜಾಜ್ ಆಟೋ ಕಂಪನಿಯು ಟಾಟಾ ನಂತರ ಅತಿ ಹೆಚ್ಚು ದೇಣಿಗೆ ನೀಡಿದ್ದು, ವೈದ್ಯಕೀಯ ಉಪಕರಣಗಳು ಮತ್ತು ಸುರಕ್ಷಾ ಸಾಧನಗಳ ಖರೀದಿಗಾಗಿ ಬರೋಬ್ಬರಿ ರೂ.100 ಕೋಟಿ ಹಣಕಾಸು ಸಹಾಯವನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ.

Most Read Articles

Kannada
English summary
Chetak Electric Service Centres Reopen In Bengaluru And Pune. Read in Kannada.
Story first published: Tuesday, May 19, 2020, 22:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X