Just In
- 4 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 7 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 7 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 9 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2020ರ ಡಕಾರ್ ರ್ಯಾಲಿ ಜಯಿಸಿದ ರಿಕಿ ಬ್ರಾಬೆಕ್
2020ರ ಡಕಾರ್ ರ್ಯಾಲಿಯ ಹನ್ನೆರಡನೇ ಹಾಗೂ ಅಂತಿಮ ಹಂತದಲ್ಲಿ, ಮಾನ್ಸ್ಟರ್ ಎನರ್ಜಿ ಹೋಂಡಾದ ಜೋಸ್ ಇಗ್ನಾಸಿಯೊ ಕಾರ್ನೆಜೊ ಜಯ ಪಡೆದರು. ಮಾನ್ಸ್ಟರ್ ಎನರ್ಜಿ ಹೋಂಡಾದವರೇ ಆದ ರಿಕಿ ಬ್ರಾಬೆಕ್ 2020ರ ಡಕಾರ್ ರ್ಯಾಲಿಯನ್ನು ಗೆದ್ದಿದ್ದಾರೆ.
ರಿಕಿ ಬ್ರಾಬೆಕ್, ಡಕಾರ್ ರ್ಯಾಲಿಯನ್ನು ಆರಂಭಿಸಿದ ನಂತರ ಈ ರ್ಯಾಲಿಯಲ್ಲಿ ಗೆದ್ದ ಮೊದಲ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 12ನೇ ಸುತ್ತಿನಲ್ಲಿ ಬ್ರಾಬೆಕ್ ತನ್ನ ತಂಡದ ಆಟಗಾರನ ಹಿಂದೆ ಎರಡನೇ ಸ್ಥಾನ ಪಡೆದರು.
ಅಮೆರಿಕದ ಈ ಬೈಕ್ ಸವಾರ 2020ರ ಡಕಾರ್ ರ್ಯಾಲಿಯನ್ನು 16 ನಿಮಿಷಗಳ ಅಂತರದಿಂದ ಗೆದ್ದಿದ್ದಾರೆ. ರಾಕ್ ಸ್ಟಾರ್ ಎನರ್ಜಿ ಹಸ್ಕ್ ವರ್ನಾ ಫ್ಯಾಕ್ಟರಿ ತಂಡದ ಪ್ಯಾಬ್ಲೊ ಕ್ವಿಂಟಾನಿಲ್ಲಾ ಹಾಗೂ ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡದ ಟೋಬಿ ಪ್ರೈಸ್ ಕ್ರಮವಾಗಿ 2 ಹಾಗೂ 3ನೇ ಸ್ಥಾನವನ್ನು ಪಡೆದರು.
ರಿಕಿ ಬ್ರಾಬೆಕ್ರವರು 3ನೇ ಸುತ್ತಿನಲ್ಲಿ ಭರ್ಜರಿ ಮುನ್ನಡೆಯನ್ನು ಸಾಧಿಸಿದ್ದರು. ಇದಾದ ನಂತರ ಅವರು ಸತತವಾಗಿ ಉತ್ತಮ ಪ್ರದರ್ಶನವನ್ನು ನೀಡಿದರು. ಹನ್ನೆರಡನೇಯ ಹಾಗೂ ಅಂತಿಮ ಸುತ್ತು ಹರಾದ್ ಮತ್ತು ಕಿಡ್ಡಿಯಾ ನಡುವೆ ನಡೆಯಿತು. 447 ಕಿ.ಮೀ ಅಂತರದ ಈ ಸುತ್ತಿನಲ್ಲಿ 167 ಕಿ.ಮೀ ವಿಶೇಷ ಹಂತವನ್ನು ಹೊಂದಿತ್ತು.
ರ್ಯಾಲಿ ನಡೆಯುತ್ತಿದ್ದ ಮಾರ್ಗದಲ್ಲಿದ್ದ ತೈಲ ಘಟಕವೊಂದರಲ್ಲಿ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದ ಕಾರಣಕ್ಕೆ ವಿಶೇಷ ಹಂತವನ್ನು ಕಡಿಮೆ ಮಾಡಲಾಗಿತ್ತು. ಇದರಿಂದಾಗಿ ರೇಸಿನಲ್ಲಿ ಮುಂದಿದ್ದವರಿಗೆ ಸವಾಲು ಹಾಕಲು ಇತರ ಸವಾರರು ಕಡಿಮೆ ದೂರವನ್ನು ಹೊಂದಿದ್ದರು.
ರ್ಯಾಲಿಯ 12ನೇ ಸುತ್ತಿನಲ್ಲಿ ಲಯಾ ಸೈಂಜ್ರವರು 25ನೇ ಸ್ಥಾನವನ್ನು ಪಡೆದರು. ಅವರು ಈ ರ್ಯಾಲಿಯಲ್ಲಿ ಭಾಗವಹಿಸಿದ್ದ ಮಹಿಳಾ ರೈಡರ್ಗಳನ್ನು ಮುನ್ನಡೆಸಿದರು. ಅವರಿಂದಾಗಿ ಗ್ಯಾಸ್ ಫ್ಯಾಕ್ಟರಿ ರ್ಯಾಲಿ ತಂಡವು ಒಟ್ಟಾರೆ 18ನೇ ಸ್ಥಾನವನ್ನು ಪಡೆಯಿತು.
ರ್ಯಾಲಿಯ 9ನೇ ಸುತ್ತಿನ ನಂತರ ಉಳಿದ ಏಕೈಕ ರೈಡರ್ ಅಂದರೆ ಶೆರ್ಕೊ ಟಿವಿಎಸ್ ರ್ಯಾಲಿ ತಂಡದ ಆಡ್ರಿಯನ್ ಮೆಟ್ಜ್. ಫ್ರಾನ್ಸ್ ದೇಶದವರಾದ ಇವರು ಒಂದೇ ರೀತಿಯ ಸ್ಥಿರತೆಯನ್ನು ತೋರಿಸಿ ಈ ರ್ಯಾಲಿಯ ಕೊನೆಯ ಸುತ್ತಿನಲ್ಲಿ 7ನೇ ಸ್ಥಾನವನ್ನು ಪಡೆದರು. ಆಡ್ರಿಯನ್ ಮೆಟ್ಜ್ ರವರಿಂದಾಗಿ ಶೆರ್ಕೊ ಟಿವಿಎಸ್ ರ್ಯಾಲಿ ತಂಡವು ಒಟ್ಟಾರೆಯಾಗಿ 12ನೇ ಸ್ಥಾನವನ್ನು ಪಡೆಯಿತು.
ಶೆರ್ಕೊ ಟಿವಿಎಸ್ ರ್ಯಾಲಿ ತಂಡದಲ್ಲಿದ್ದ ಹರಿತ್ ನೋವಾರವರು ಡಕಾರ್ ರ್ಯಾಲಿಯ ಕೊನೆಯ ಕೆಲವು ಸುತ್ತುಗಳಲ್ಲಿ ಅಸಾಧಾರಣ ಪ್ರದರ್ಶನ ನೀಡಿದರು. ಭಾರತದ ಈ ಯುವ ರೈಡರ್ ಈ ವರ್ಷದ ಡಕಾರ್ ರ್ಯಾಲಿಯ ಅಂತಿಮ ಹಂತದಲ್ಲಿ 27ನೇ ಸ್ಥಾನವನ್ನು ಪಡೆದರು.
ಎರಡು ಬಾರಿಯ ಫಾರ್ಮುಲಾ 1 ವಿಶ್ವ ಚಾಂಪಿಯನ್ ಫರ್ನಾಂಡೊ ಅಲೋನ್ಸೊ ಮೊದಲ ಬಾರಿಗೆ ಡಕಾರ್ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಅವರು 12ನೇ ಸುತ್ತಿನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದರು. ಟೊಯೊಟಾ ಗಜೂ ರೇಸಿಂಗ್ ತಂಡಕ್ಕಾಗಿ ಸ್ಪರ್ಧಿಸಿದ ಸ್ಪೇನ್ನ ಅಲೋನ್ಸೊ ತಮ್ಮ ಮೊದಲ ಡಕಾರ್ ರ್ಯಾಲಿಯಲ್ಲಿ ಒಟ್ಟಾರೆಯಾಗಿ 13ನೇ ಸ್ಥಾನವನ್ನು ಪಡೆದರು.
ಶೆರ್ಕೊ ಟಿವಿಎಸ್ ರ್ಯಾಲಿ ತಂಡದ ಒಟ್ಟಾರೆ ಫಲಿತಾಂಶ
12ನೇ ಸ್ಥಾನ - ಆಡ್ರಿಯನ್ ಮೆಟ್ಜ್
ಬೈಕ್ ವಿಭಾಗದಲ್ಲಿನ ಒಟ್ಟಾರೆ ಫಲಿತಾಂಶ
1 ನೇ ಸ್ಥಾನ - ರಿಕಿ ಬ್ರಾಬೆಕ್ (ಮಾನ್ಸ್ಟರ್ ಎನರ್ಜಿ ಹೋಂಡಾ)
2 ನೇ ಸ್ಥಾನ - ಪ್ಯಾಬ್ಲೊ ಕ್ವಿಂಟಾನಿಲ್ಲಾ (ರಾಕ್ಸ್ಟಾರ್ ಎನರ್ಜಿ ಹಸ್ಕ್ ವರ್ನಾ ಫ್ಯಾಕ್ಟರಿ)
3 ನೇ ಸ್ಥಾನ - ಟೋಬಿ ಬೆಲೆ (ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ)
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಈ ವರ್ಷದ ಡಕಾರ್ ರ್ಯಾಲಿಯು ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಆಕರ್ಷಕವಾಗಿ ಹಾಗೂ ಕಷ್ಟಕರವಾಗಿತ್ತು. ರ್ಯಾಲಿಯ ಆರಂಭದಲ್ಲಿ ಹಾಗೂ ಅಂತ್ಯದಲ್ಲಿರುವುದು ಒಂದು ದೊಡ್ಡ ಸಾಧನೆಯಾಗಿದೆ. ರಿಕಿ ಬ್ರಾಬೆಕ್ ಅವರು ರ್ಯಾಲಿಯನ್ನು ಗೆದ್ದು, ಇತಿಹಾಸದ ಪುಟ ಸೇರಿದ್ದಾರೆ. ಹರಿತ್ ನೋವಾರವರು ಭರವಸೆಯನ್ನು ಮೂಡಿಸಿದ್ದು, ಮುಂದಿನ ಬಾರಿ ಗೆಲ್ಲುವ ನಿರೀಕ್ಷೆಯನ್ನು ಮೂಡಿಸಿದ್ದಾರೆ.