ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಮೊಪೆಡ್ ಬಿಡುಗಡೆಗೊಳಿಸಿದ ಡೆಟೆಲ್ ಎಲೆಕ್ಟ್ರಿಕ್

ಡೆಟೆಲ್ ಎಲೆಕ್ಟ್ರಿಕ್ ಮೊಬಿಲಿಟಿ, ಭಾರತದ ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಮೊಪೆಡ್, ಈಸಿಯನ್ನು ಬಿಡುಗಡೆಗೊಳಿಸಿದೆ. ಈ ಎಲೆಕ್ಟ್ರಿಕ್ ಮೊಪೆಡ್‌ನ ಬೆಲೆ ರೂ.19,999ಗಳಾಗಿದೆ. ಈ ಎಲೆಕ್ಟ್ರಿಕ್ ಮೊಪೆಡ್‌ನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 25 ಕಿ.ಮೀಗಳಾಗಿರುವುದರಿಂದ ಈ ಮೊಪೆಡ್ ಅನ್ನು ರಿಜಿಸ್ಟರ್ ಇಲ್ಲದೆ ಚಲಾಯಿಸಬಹುದು.

ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಮೊಪೆಡ್ ಬಿಡುಗಡೆಗೊಳಿಸಿದ ಡೆಟೆಲ್ ಎಲೆಕ್ಟ್ರಿಕ್

ಡೆಟೆಲ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು 2017ರಲ್ಲಿ ಸ್ಥಾಪನೆಯಾಯಿತು. ಇದಕ್ಕೂ ಮುನ್ನ ಕಂಪನಿಯು ಹಲವಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸಿತ್ತು. ಡೆಟೆಲ್ ವಿಶ್ವದ ಅಗ್ಗದ ಎಲ್ಇಡಿ ಟೆಲಿವಿಷನ್ ಅನ್ನು ಕೇವಲ ರೂ.4,000ಗಳಿಗೆ ಬಿಡುಗಡೆಗೊಳಿಸಿತ್ತು. ಇದರ ಜೊತೆಗೆ ಕಂಪನಿಯು ವಿಶ್ವದ ಅಗ್ಗದ ಫೀಚರ್ ಫೋನ್ ಅನ್ನು ಸಹ ಬಿಡುಗಡೆಗೊಳಿಸಿತ್ತು. ಕಂಪನಿಯು ಬಿಡುಗಡೆಗೊಳಿಸಿದ ಫೀಚರ್ ಫೋನ್ ಬೆಲೆ ರೂ.299ಗಳಾಗಿದೆ.

ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಮೊಪೆಡ್ ಬಿಡುಗಡೆಗೊಳಿಸಿದ ಡೆಟೆಲ್ ಎಲೆಕ್ಟ್ರಿಕ್

ಡೆಟೆಲ್ ಎಲೆಕ್ಟ್ರಿಕ್ ಮೊಪೆಡ್ ಕೈಗೆಟಕುವ ಬೆಲೆಯನ್ನು ಹೊಂದಿದ್ದು, ಸಾಕಷ್ಟು ಉಪಯುಕ್ತವಾಗಿದೆ. ಈ ಮೊಪೆಡ್ ಅನ್ನು ಕಚೇರಿ, ಶಾಪಿಂಗ್ ಅಥವಾ ಸಿಟಿಯೊಳಗಿನ ಪ್ರಯಾಣಕ್ಕಾಗಿ ಬಳಸಬಹುದು.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಮೊಪೆಡ್ ಬಿಡುಗಡೆಗೊಳಿಸಿದ ಡೆಟೆಲ್ ಎಲೆಕ್ಟ್ರಿಕ್

ಈ ಮೊಪೆಡ್ ಅನ್ನು ಮೇಂಟೆನ್ ಮಾಡುವುದು ಬಹಳ ಸುಲಭ. ಈ ಮೊಪೆಡ್ ವೇಗವಾಗಿ ಚಾರ್ಜ್ ಆಗುತ್ತದೆ. ಈ ಎಲೆಕ್ಟ್ರಿಕ್ ಮೊಪೆಡ್ ಸಣ್ಣ ಬೈಸಿಕಲ್ ಆಕಾರವನ್ನು ಹೊಂದಿದ್ದು, ಹಗುರವಾದ ತೂಕವನ್ನು ಹೊಂದಿದೆ.

ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಮೊಪೆಡ್ ಬಿಡುಗಡೆಗೊಳಿಸಿದ ಡೆಟೆಲ್ ಎಲೆಕ್ಟ್ರಿಕ್

ಈಸಿ ಮೊಪೆಡ್ ನಲ್ಲಿರುವ ಚೈನ್ ಪ್ಯಾಡಲ್ ಸಹಾಯದಿಂದ ಚಾರ್ಜ್ ಮುಗಿದ ನಂತರವೂ ಸಹ ಈ ಮೊಪೆಡ್ ಅನ್ನು ಚಲಾಯಿಸಬಹುದು. ಈಸಿ ಮೊಪೆಡ್ ನಲ್ಲಿ 48 ವೋಲ್ಟ್ ನ 12 ಆಂಪಿಯರ್ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಮೊಪೆಡ್ ಬಿಡುಗಡೆಗೊಳಿಸಿದ ಡೆಟೆಲ್ ಎಲೆಕ್ಟ್ರಿಕ್

ಈಸಿ ಮೊಪೆಡ್‌ 6-7 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಮೊಪೆಡ್ 60 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಮೊಪೆಡ್‌ನಲ್ಲಿ ವಸ್ತುಗಳನ್ನು ಕೊಂಡೊಯ್ಯಲು ಮುಂಭಾಗದಲ್ಲಿ ಬಾಸ್ಕೆಟ್ ನೀಡಲಾಗಿದೆ.

ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಮೊಪೆಡ್ ಬಿಡುಗಡೆಗೊಳಿಸಿದ ಡೆಟೆಲ್ ಎಲೆಕ್ಟ್ರಿಕ್

ಈ ಮೊಪೆಡ್ ನ ಮುಂಭಾಗದಲ್ಲಿ ಹೆಡ್‌ಲ್ಯಾಂಪ್ ಸಹ ಅಳವಡಿಸಲಾಗಿದೆ. ಈ ಮೊಪೆಡ್ ನಲ್ಲಿ ಇಬ್ಬರು ಆರಾಮವಾಗಿ ಸವಾರಿ ಮಾಡಬಹುದು. ಸವಾರನ ಸೀಟ್ ಅನ್ನು ಅಡ್ಜಸ್ಟ್ ಮಾಡಿಕೊಳ್ಳಬಹುದು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಮೊಪೆಡ್ ಬಿಡುಗಡೆಗೊಳಿಸಿದ ಡೆಟೆಲ್ ಎಲೆಕ್ಟ್ರಿಕ್

ಈ ಸೀಟ್ ಅನ್ನು ಮೇಲಕ್ಕೆ, ಕೆಳಕ್ಕೆ ಸರಿ ಹೊಂದಿಸಿ ಕೊಳ್ಳಬಹುದು. ಈ ಮೊಪೆಡ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಸ್ಪ್ರಿಂಗ್ ಲೋಡೆಡ್ ಸಸ್ಪೆಂಷನ್ ಗಳನ್ನು ಹೊಂದಿದೆ.

ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಮೊಪೆಡ್ ಬಿಡುಗಡೆಗೊಳಿಸಿದ ಡೆಟೆಲ್ ಎಲೆಕ್ಟ್ರಿಕ್

ಈ ಎಲೆಕ್ಟ್ರಿಕ್ ಮೊಪೆಡ್ ಅನ್ನು ಆನ್, ಆಫ್ ಹಾಗೂ ಲಾಕ್ ಮಾಡಲು ಕೀಗಳನ್ನು ಸಹ ನೀಡಲಾಗಿದೆ. ಈ ಸ್ಕೂಟರ್ ಅನ್ನು ಡೆಟೆಲ್ ಕಂಪನಿಯ ವೆಬ್ ಸೈಟ್ ಮೂಲಕ ಖರೀದಿಸಬಹುದು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಮೊಪೆಡ್ ಬಿಡುಗಡೆಗೊಳಿಸಿದ ಡೆಟೆಲ್ ಎಲೆಕ್ಟ್ರಿಕ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರದ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ ಫೇಮ್ -2 ಯೋಜನೆಯಡಿಯಲ್ಲಿ ಗ್ರಾಹಕರು ಹಾಗೂ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಲಾಭ ಪಡೆಯುತ್ತಿವೆ.

Most Read Articles

Kannada
English summary
Detel electric mobility launches cheapest electric moped. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X