ಹೊಸ ತಂತ್ರಜ್ಞಾನ ಪ್ರೇರಿತ ಗ್ರ್ಯಾನ್‌ಟೂರಿಸ್ಮೊ ವಿ4 ಎಂಜಿನ್ ಅನಾವರಣಗೊಳಿಸಿದ ಡುಕಾಟಿ

ಇಟಾಲಿಯನ್ ಜನಪ್ರಿಯ ಸೂಪರ್ ಬೈಕ್ ತಯಾರಿಕ ಕಂಪನಿಯಾದ ಡುಕಾಟಿ ತನ್ನ ಹೊಸ ಎಂಜಿನ್ ಮಾದರಿಯಾದ ಗ್ರ್ಯಾನ್‌ಟೂರಿಸ್ಮೊ ವಿ4 ಆವೃತ್ತಿಯನ್ನು ಅನಾವರಣಗೊಳಿಸಿದ್ದು, ಹೊಸ ತಂತ್ರಜ್ಞಾನ ಪ್ರೇರಿತ ಎಂಜಿನ್ ಮಾದರಿಯು ಜಾಗತಿಕ ಮಾರುಕಟ್ಟೆಗಾಗಿ ಅಭಿವೃದ್ದಿಗೊಳಿಸಲಾಗಿದೆ.

ಗ್ರ್ಯಾನ್‌ಟೂರಿಸ್ಮೊ ವಿ4 ಎಂಜಿನ್ ಅನಾವರಣಗೊಳಿಸಿದ ಡುಕಾಟಿ

ಗ್ರ್ಯಾನ್‌ಟೂರಿಸ್ಮೊ ವಿ4 ಎಂಜಿನ್ ಮಾದರಿಯು ನ್ಯೂ ಜನರೇಷನ್ ಮಾದರಿಯಾದ ಮಲ್ಟಿಸ್ಟ್ರಾಡಾ ಅಡ್ವೆಂಚರ್ ಟೂರರ್ ಮೋಟಾರ್‌ಸೈಕಲ್‌ನಲ್ಲಿ ಅಳವಡಿಸಲು ಉದ್ದೇಶಿಸಿದ್ದು, ನ್ಯೂ ಜನರೇಷನ್ ಮಲ್ಟಿಸ್ಟ್ರಾಡಾ ಅಡ್ವೆಂಚರ್ ಟೂರರ್ ಮಾದರಿಯ ಮುಂದಿನ ನವೆಂಬರ್ ಹೊತ್ತಿಗೆ ಬಿಡುಗಡೆಯಾಗಲಿದೆ. ಹೊಸ ತಂತ್ರಜ್ಞಾನ ಪ್ರೇರಿತ ಗ್ರ್ಯಾನ್‌ಟೂರಿಸ್ಮೊ ವಿ4 ಎಂಜಿನ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೆಸ್ಮೊಸೆಡಿಸ್ಸಿ ಸ್ಟ್ರಾಡ್ಲೆ ಎಂಜಿನ್‌ ಮಾದರಿಯಲ್ಲೇ ಅಭಿವೃದ್ದಿಗೊಳಿಸಲಾಗುತ್ತಿದ್ದು, ಹೆಚ್ಚು ಪವರ್ ಉತ್ಪಾದನೆಯೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿದೆ.

ಗ್ರ್ಯಾನ್‌ಟೂರಿಸ್ಮೊ ವಿ4 ಎಂಜಿನ್ ಅನಾವರಣಗೊಳಿಸಿದ ಡುಕಾಟಿ

ಮಲ್ಟಿಸ್ಟ್ರಾಡಾ ಅಡ್ವೆಂಚರ್ ಟೂರರ್ ಮೋಟಾರ್‌ಸೈಕಲ್‌ನಲ್ಲಿ ಸದ್ಯ ಟೆಸ್ಟ್ರಾಸ್ಟೆಟ್ಟಾ ಎಂಜಿನ್ ಬಳಕೆ ಮಾಡಲಾಗುತ್ತಿದ್ದು, ನಾಲ್ಕನೇ ತಲೆಮಾರಿನ ಮಲ್ಟಿಸ್ಟ್ರಾಡಾ ಅಡ್ವೆಂಚರ್ ಟೂರರ್ ಮಾದರಿಯಲ್ಲಿ ಹೊಸ ಗ್ರ್ಯಾನ್‌ಟೂರಿಸ್ಮೊ ವಿ4 ಎಂಜಿನ್ ಅಳವಡಿಸಲಾಗುತ್ತಿದೆ.

ಗ್ರ್ಯಾನ್‌ಟೂರಿಸ್ಮೊ ವಿ4 ಎಂಜಿನ್ ಅನಾವರಣಗೊಳಿಸಿದ ಡುಕಾಟಿ

ಗ್ರ್ಯಾನ್‌ಟೂರಿಸ್ಮೊ ವಿ4 ಎಂಜಿನ್ ಜೋಡಣೆ ನಂತರ ಟೆಸ್ಟ್ರಾಸ್ಟೆಟ್ಟಾ ಎಂಜಿನ್ ಸ್ಥಗಿತಗೊಳಿಸಲಿರುವ ಡುಕಾಟಿ ಕಂಪನಿಯು ಹೊಸ ಎಂಜಿನ್ ಮಾದರಿಯನ್ನು ವಿವಿಧ ಸೂಪರ್ ಬೈಕ್ ಮಾದರಿಗಳಲ್ಲಿ ಬಳಕೆ ಮಾಡಿಕೊಳ್ಳಲಿದ್ದು, ಮೊದಲ ಹಂತವಾಗಿ ನ್ಯೂ ಜನರೇಷನ್ ಮಲ್ಟಿಸ್ಟ್ರಾಡಾ ಅಡ್ವೆಂಚರ್ ಟೂರರ್ ಬೈಕ್ ಮಾದರಿಯಲ್ಲಿ ಅಳವಡಿಸಲಾಗುತ್ತಿದೆ.

ಗ್ರ್ಯಾನ್‌ಟೂರಿಸ್ಮೊ ವಿ4 ಎಂಜಿನ್ ಅನಾವರಣಗೊಳಿಸಿದ ಡುಕಾಟಿ

ಟೆಸ್ಟ್ರಾಸ್ಟೆಟ್ಟಾ ಎಂಜಿನ್‌ಗಿಂತಲೂ 1.7 ಕೆ.ಜಿ ಹಗುರವಾಗಿರುವ ಗ್ರ್ಯಾನ್‌ಟೂರಿಸ್ಮೊ ವಿ4 ಎಂಜಿನ್ ಒಟ್ಟು 66.7 ಕೆ.ಜಿ ತೂಕದೊಂದಿಗೆ 95 ಎಂಎಂ ನಷ್ಟು ಕಡಿಮೆ ಎತ್ತರ ವಿನ್ಯಾಸ ಹೊಂದಿದ್ದು, ಬೈಕಿನ ತೂಕವನ್ನು ಮಧ್ಯದ ಸ್ಥಾನದಲ್ಲಿಸಲು ಸಹಕಾರಿಯಾಗಿದೆ.

ಗ್ರ್ಯಾನ್‌ಟೂರಿಸ್ಮೊ ವಿ4 ಎಂಜಿನ್ ಅನಾವರಣಗೊಳಿಸಿದ ಡುಕಾಟಿ

ಈ ಮೂಲಕ ಅಡ್ವೆಂಚರ್ ಟೂರರ್ ರೈಡಿಂಗ್‌ಗೆ ಬೇಕಿರುವ ಎಲ್ಲಾ ಅವಶ್ಯಕತೆ ಪೂರೈಸಲು ಸಹಕಾರಿಯಾಗಿರುವ ಹೊಸ ಎಂಜಿನ್ ಮಾದರಿಯು ಲೈಟ್‌ವೆಟ್, ಹೈ ಪರ್ಫಾಮೆನ್ಸ್ ಮತ್ತು ಅಧಿಕ ಮಟ್ಟದ ಟಾರ್ಕ್ ಉತ್ಪಾದನೆಯೊಂದಿಗೆ ಅರಾಮದಾಯಕ ರೈಡಿಂಗ್ ಒದಗಿಸುವುದಾಗಿ ಡುಕಾಟಿ ಕಂಪನಿಯು ಹೇಳಿಕೊಂಡಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಗ್ರ್ಯಾನ್‌ಟೂರಿಸ್ಮೊ ವಿ4 ಎಂಜಿನ್ ಅನಾವರಣಗೊಳಿಸಿದ ಡುಕಾಟಿ

ಹೊಸ ಎಂಜಿನ್ ಅನ್ನು ಯುರೋ 5 ಎಮಿಷನ್‌ಗೆ ಅನುಗುಣವಾಗಿ ಅಭಿವೃದ್ದಿಪಡಿಸಿರುವ ಡುಕಾಟಿ ಕಂಪನಿಯು 10,500 ಆರ್‌ಪಿಎಂ ನಲ್ಲಿ ಗರಿಷ್ಠ 168-ಬಿಎಚ್‌ಪಿ ಮತ್ತು 8,750 ಆರ್‌ಪಿಎಂನಲ್ಲಿ 125-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, 6-ಸ್ಪೀಡ್ ಬಿ-ಡಿರೆಕ್ಷನಲ್ ಕ್ವಿಕ್ ಶಿಫ್ಟರ್ ಹೊಂದಿರುವ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಗ್ರ್ಯಾನ್‌ಟೂರಿಸ್ಮೊ ವಿ4 ಎಂಜಿನ್ ಅನಾವರಣಗೊಳಿಸಿದ ಡುಕಾಟಿ

ಯುರೋಪಿನ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ ಯುರೋ 5 ಎಮಿಷನ್ ನಿಯಮವು ಭಾರತದಲ್ಲಿನ ಬಿಎಸ್-6 ಎಮಿಷನ್‌ಗೆ ಸಮನಾಗಿದ್ದು, ಹೊಸ ಎಮಿಷನ್‌ನೊಂದಿಗೆ ಅಭಿವೃದ್ದಿಗೊಂಡಿರುವ ಗ್ರ್ಯಾನ್‌ಟೂರಿಸ್ಮೊ ವಿ4 ಎಂಜಿನ್ ಹೊಂದಲಿರುವ ಹೊಸ ಬೈಕ್ ಮಾದರಿಗಳು ಸ್ಲಿಪ್-ಅಸಿಸ್ಟ್ ಕ್ಲಚ್‌ನೊಂದಿಗೆ ಸಂಯೋಜನೆಗೊಂಡಿವೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಗ್ರ್ಯಾನ್‌ಟೂರಿಸ್ಮೊ ವಿ4 ಎಂಜಿನ್ ಅನಾವರಣಗೊಳಿಸಿದ ಡುಕಾಟಿ

ಹಾಗೆಯೇ ಹೊಸ ಎಂಜಿನ್ ಮಾದರಿಯು ಟ್ವಿನ್ ಸಿಲಿಂಡರ್ ಪ್ರೇರಣೆ ಹೊಂದಿದ್ದು, 70-ಡಿಗ್ರಿ ಕ್ರ್ಯಾಂಕ್-ಪಿನ್ ಆಫ್‌ಸೆಟ್ ಮತ್ತು 90-ಡಿಗ್ರಿ ವಿ ವಿನ್ಯಾಸವನ್ನು ಪಡೆದುಕೊಂಡಿದೆ. ಜೊತೆಗೆ ಬೈಕ್ ಐಡ್ಲಿಂಗ್‌ನಲ್ಲಿರುವಾಗ ಎರಡು ಸಿಲಿಂಡರ್‌ಗಳನ್ನು ನಿಷ್ಕ್ರಿಯವಾಗಿಸುವ ಹೊಸ ತಂತ್ರಜ್ಞಾನವು ಬೈಕಿನ ಎಂಜಿನ್ ಉಷ್ಣತೆಯನ್ನು ಅತಿ ವೇಗವಾಗಿ ತಣ್ಣಗೊಳಿಸಲಿದ್ದು, ನವೆಂಬರ್ 4ಕ್ಕೆ ಹೊಸ ಮಲ್ಟಿಸ್ಟ್ರಾಡಾ ಅಡ್ವೆಂಚರ್ ಟೂರರ್ ಅನಾವರಣದ ಸಂದರ್ಭದಲ್ಲಿ ಹೊಸ ಎಂಜಿನ್ ಕುರಿತಾದ ಮತ್ತಷ್ಟು ಮಾಹಿತಿಗಳು ಅನಾವರಣಗೊಳ್ಳಲಿವೆ.

Most Read Articles

Kannada
Read more on ಡುಕಾಟಿ ducati
English summary
Ducati Granturismo V4 Engine Unveiled. Read in Kannada.
Story first published: Thursday, October 15, 2020, 20:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X