ಚಂದಾದಾರಿಕೆ ಆಧಾರಿತ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆಗೊಳಿಸಿದ ಇ-ಬೈಕ್ ಗೋ

ದ್ವಿಚಕ್ರ ವಾಹನ ಬಾಡಿಗೆ ಕಂಪನಿಯಾದ ಇ-ಬೈಕ್ ಗೋ, ಚಂದಾದಾರಿಕೆ ಆಧಾರಿತ ಎಲೆಕ್ಟ್ರಿಕ್ ಬೈಸಿಕಲ್‌ಗಳನ್ನು (ಇ-ಸೈಕಲ್) ಬಿಡುಗಡೆಗೊಳಿಸಿದೆ. ಈ ಎಲೆಕ್ಟ್ರಿಕ್ ಸೈಕಲ್ ಅನ್ನು ದಿನದ ಅಥವಾ ತಿಂಗಳ ಚಂದಾದಾರಿಕೆ ಆಧಾರದ ಮೇಲೆ ಬುಕ್ಕಿಂಗ್ ಮಾಡಬಹುದು.

ಚಂದಾದಾರಿಕೆ ಆಧಾರಿತ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆಗೊಳಿಸಿದ ಇ-ಬೈಕ್ ಗೋ

ಈ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ವಿಶೇಷವಾಗಿ ಡೆಲಿವರಿ ಸೇವೆಗಳನ್ನು ನೀಡುವವರಿಗಾಗಿಯೇ ಬಿಡುಗಡೆಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ಸೈಕಲ್ ಅನ್ನು ದಿನಕ್ಕೆ ರೂ.80 ಚಂದಾ ಪಾವತಿಸಿ ಬುಕ್ಕಿಂಗ್ ಮಾಡಬಹುದು. ಈ ಎಲೆಕ್ಟ್ರಿಕ್ ಸೈಕಲ್ ಅನ್ನು 3 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಪೂರ್ತಿಯಾಗಿ ಚಾರ್ಜ್‌ ಆದ ನಂತರ ಈ ಎಲೆಕ್ಟ್ರಿಕ್ ಸೈಕಲ್ 60-70 ಕಿ.ಮೀಗಳವರೆಗೆ ಚಲಿಸುತ್ತದೆ.

ಚಂದಾದಾರಿಕೆ ಆಧಾರಿತ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆಗೊಳಿಸಿದ ಇ-ಬೈಕ್ ಗೋ

ಡೆಲಿವರಿ ಸೇವೆಗಳನ್ನು ನೀಡುವವರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಸೈಕಲ್ ಅನ್ನು ಬಿಡುಗಡೆಗೊಳಿಸಿದೆ. ನಗರದ ವ್ಯಾಪ್ತಿಯೊಳಗಿನ ಡೆಲಿವರಿ ಸಿಬ್ಬಂದಿ ಈ ಸೈಕಲ್‌ಗಳನ್ನು ಬಳಸಬಹುದು. ಇ-ಸೈಕಲ್‌ನಲ್ಲಿ ಒಂದು ಬಾರಿಗೆ 200 ಕೆಜಿ ತೂಕವನ್ನು ಸಾಗಿಸಬಹುದು. ಇದರಿಂದ ಡೆಲಿವರಿ ಸಿಬ್ಬಂದಿಗೆ ಅನುಕೂಲವಾಗಲಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಚಂದಾದಾರಿಕೆ ಆಧಾರಿತ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆಗೊಳಿಸಿದ ಇ-ಬೈಕ್ ಗೋ

ಕೈಗೆಟುಕುವ ಚಂದಾದಾರಿಕೆ ಬೆಲೆಯನ್ನು ಹೊಂದಿರುವ ಕಾರಣಕ್ಕೆ ಹಾಗೂ ಮೆಂಟೆನೆನ್ಸ್ ಇಲ್ಲದ ಕಾರಣ ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಸುಲಭವಾಗಿ ಬಳಸಬಹುದು. ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಬ್ಯಾಟರಿಗಳಿಂದ ನಿಯಂತ್ರಿಸುವುದರಿಂದ ಇಂಧನ ವೆಚ್ಚದ ಬಗ್ಗೆ ತಲೆಕೆಡಿಸಿಕೊಳ್ಳುವಂತಿಲ್ಲ.

ಚಂದಾದಾರಿಕೆ ಆಧಾರಿತ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆಗೊಳಿಸಿದ ಇ-ಬೈಕ್ ಗೋ

ಸದ್ಯಕ್ಕೆ ಇ-ಬೈಕ್ ಗೋ ಕಂಪನಿಯು ಸ್ವಿಗ್ಗಿ, ಜೊಮಾಟೊ, ಬಿಗ್‌ಬಾಸ್ಕೆಟ್, ದೆಹಲಿ, ರೆಬೆಲ್ ಫುಡ್ಸ್ ಕಂಪನಿಗಳ ಡೆಲಿವರಿ ಸಿಬ್ಬಂದಿಗೆ ಎಲೆಕ್ಟ್ರಿಕ್ ಬೈಕ್‌, ಬೈಸಿಕಲ್ ಹಾಗೂ ಸ್ಕೂಟರ್‌ಗಳನ್ನು ಒದಗಿಸುತ್ತಿದೆ. ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್ ಮುಂತಾದ ಮಹಾನಗರಗಳಲ್ಲಿ ಇ-ಬೈಕ್ ಗೋ ವಾಹನಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತಿವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಚಂದಾದಾರಿಕೆ ಆಧಾರಿತ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆಗೊಳಿಸಿದ ಇ-ಬೈಕ್ ಗೋ

ಕಂಪನಿಯ ಚಂದಾದಾರಿಕೆ ಯೋಜನೆಯಡಿಯಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗಾಗಿ ಇ-ಬೈಕ್ ಗೋ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್‌ಗಳನ್ನು ಬುಕ್ಕಿಂಗ್ ಮಾಡಬಹುದು. ಮಾಸಿಕ ರೂ.3600 ಪಾವತಿಸಿ ಉದ್ಯೋಗಿಗಳಿಗಾಗಿ ಇ-ಸ್ಕೂಟರ್‌ಗಳನ್ನು ಕಾಯ್ದಿರಿಸಬಹುದು.

ಚಂದಾದಾರಿಕೆ ಆಧಾರಿತ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆಗೊಳಿಸಿದ ಇ-ಬೈಕ್ ಗೋ

ನವದೆಹಲಿ ಮೂಲದ ಇ-ಬೈಕ್ ಗೋ ರೆಂಟ್ ಸೇವೆಯನ್ನು 2019ರ ಜನವರಿಯಲ್ಲಿ ದೆಹಲಿಯಲ್ಲಿ ಆರಂಭಿಸಲಾಯಿತು. ಕಳೆದ ವರ್ಷ ಜುಲೈನಲ್ಲಿ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಲು ತೈವಾನ್ ಮೂಲದ ಯುರೆಡಾ ಕಂಪನಿ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ.

Most Read Articles

Kannada
English summary
Ebikego offers subscription based electric cycles to delivery executives. Read in Kannada.
Story first published: Thursday, June 4, 2020, 19:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X