Just In
- 28 min ago
ಭಾರತದ ನಂತರ ಜಪಾನ್ ಮಾರುಕಟ್ಟೆಯಲ್ಲೂ ಬಿಡುಗಡೆಯಾಗುತ್ತಿದೆ ಹೋಂಡಾ ಹೈನೆಸ್ ಸಿಬಿ 350
- 10 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 12 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 12 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
Don't Miss!
- News
ಬೈಡನ್ ಪದಗ್ರಹಣಕ್ಕೆ ಸಕಲ ಸಿದ್ಧತೆ, ಮದುಮಗಳಂತೆ ಸಿಂಗಾರಗೊಳ್ಳುತ್ತಿದೆ ಸಂಸತ್
- Movies
ಸುದೀಪ್ ಜೊತೆ ಸಿನಿಮಾ: ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, Live ಸ್ಕೋರ್: ಭಾರತದ ಆರಂಭಿಕ ವಿಕೆಟ್ ಪತನ
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಲಿಸುವಾಗಲೇ ಮುರಿದುಬಿತ್ತು ಕೆಟಿಎಂ ಡ್ಯೂಕ್ 390 ಬೈಕಿನ ಎಂಜಿನ್ ಕೇಸ್
ಕೆಟಿಎಂ ಡ್ಯೂಕ್ 390 ಬೈಕಿನ ಎಂಜಿನ್ ಪೂರ್ತಿಯಾಗಿ ಮುರಿದು ಬಿದ್ದಿರುವುದನ್ನು ತೋರಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ರಸ್ತೆಯ ಬದಿಯಲ್ಲಿ ಕೆಟಿಎಂ ಡ್ಯೂಕ್ 390 ಬೈಕ್ ಅನ್ನು ಪಾರ್ಕ್ ಮಾಡಲಾಗಿದೆ.

ಈ ಕೆಟಿಎಂ ಡ್ಯೂಕ್ 390 ಬೈಕಿನ ಕ್ರ್ಯಾಂಕ್ಶಾಫ್ಟ್ ಕೌಂಟರ್ ಬ್ಯಾಲೆನ್ಸರ್ ಎಂಜಿನ್ ಕೆಳಗೆ ತೂಗುತ್ತಿದ್ದು, ಬೈಕಿನ ಕೂಲೆಂಟ್ ಪೂರ್ತಿಯಾಗಿ ಸೋರಿಕೆಯಾಗುತ್ತಿದೆ. ಆದರೆ ಈ ವೀಡಿಯೊದಲ್ಲಿ ಬೈಕ್ ಎಂಜಿನ್‌ಗೆ ಹೇಗೆ ಹಾನಿಯಾಯಿತು ಎಂಬುದನ್ನು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ ಈ ಬೈಕ್ ಚಾಲನೆಯಲ್ಲಿರುವಾಗಲೇ ಎಂಜಿನ್ ಗೆ ಹಾನಿಯಾಗಿದೆ.

ಈ ಬೈಕ್ ಅನ್ನು 2016ರ ಇಐಸಿಎಂಎನಲ್ಲಿ ಜಾಗತಿಕವಾಗಿ ಬಿಡುಗಡೆಗೊಳಿಸಲಾಗಿತ್ತು. 2017ರಲ್ಲಿ ಕೆಟಿಎಂ ಡ್ಯೂಕ್ 390 ಬೈಕ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಪುಣೆಯ ಚಕನ್‌ನಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ಈ ಬೈಕ್‌ನ್ನು ದೇಶಿಯ ಮಾರುಕಟ್ಟೆಗಾಗಿ ಉತ್ಪಾದಿಸಲಾಗುತ್ತದೆ. ಈ ಬೈಕಿನ ಎಂಜಿನ್ ಕೇಸ್ ಅನ್ನು ಕಾಸ್ಟ್ ಅಲ್ಯೂಮಿನಿಯಂ ಅಲಾಯ್ ನಿಂದ ತಯಾರಿಸಲಾಗಿದೆ. ಸಾಕಷ್ಟು ಬಲಿಷ್ಟವಾಗಿರುವ ಎಂಜಿನ್ ಅಷ್ಟು ಸುಲಭವಾಗಿ ಮುರಿಯುವುದಿಲ್ಲ.

ಕೆಟಿಎಂ ಕಂಪನಿಯು ತನ್ನ ಬೈಕುಗಳನ್ನು ಅತ್ಯುತ್ತಮ ಗುಣಮಟ್ಟದ ವಸ್ತುಗಳಿಂದ ತಯಾರಿಸಲಾಗುತ್ತದೆ ಎಂದು ಹೇಳಿದೆ. ಆದರೆ ಈ ಡ್ಯೂಕ್ 390 ಬೈಕಿನ ಎಂಜಿನ್ ತಾಂತ್ರಿಕ ಕಾರಣಗಳಿಂದ ಮುರಿದು ಬಿದ್ದಿರುವ ಸಾಧ್ಯತೆಗಳಿವೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಹೆಚ್ಚಿನ ಪ್ರಮಾಣದಲ್ಲಿ ಬಿಸಿಯಾಗಿರುವ ಕಾರಣಕ್ಕೆ ಎಂಜಿನ್ ಕೇಸ್ ವಿಸ್ತರಣೆಗೊಂಡು ಮುರಿದುಹೋಗಿರುವ ಸಾಧ್ಯತೆಗಳಿವೆ. ಇದನ್ನು ತಡೆಗಟ್ಟಲು ಆಂಟಿಫ್ರೀಜ್ ಬ್ಲಾಕ್ ಮೂಲಕ ಎಂಜಿನ್ ಅನ್ನು ಸುರಕ್ಷಿತ ತಾಪಮಾನಕ್ಕೆ ತರಲು ಹೋಗಿರಬಹುದು.

ಆದರೆ ಸೋರಿಕೆಯಿಂದಾಗಿ ಆಂಟಿಫ್ರೀಜ್ ಎಂಜಿನ್ ಅನ್ನು ಕೂಲ್ ಮಾಡಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಎಂಜಿನ್ ಹೆಚ್ಚಿನ ಪ್ರಮಾಣದಲ್ಲಿ ಬಿಸಿಯಾಗಿದೆ. ಮತ್ತೊಂದು ಕಾರಣವೆಂದರೆ ಎಂಜಿನ್ ನಲ್ಲಿ ಉತ್ಪಾದನಾ ದೋಷವೂ ಆಗಿರಬಹುದು.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮೊಲ್ಡಿಂಗ್ ಮಾಡುವ ಸಮಯದಲ್ಲಿ ಸರಿಯಾಗಿ ಕಾಳಜಿ ವಹಿಸದಿದ್ದರೆ, ಕೆಲವು ಸ್ಥಳಗಳಲ್ಲಿ ಮೆಟಲ್ ತೆಳ್ಳಗಾಗುತ್ತದೆ. ನಂತರ ಈ ರೀತಿಯ ಅಪಘಾತಗಳಿಗೆ ಕಾರಣವಾಗುತ್ತದೆ.