ಆಟೋ ಎಕ್ಸ್‌ಪೋ 2020: ಹಾಕ್ ಎಲೆಕ್ಟ್ರಿಕ್ ಬೈಕ್ ಅನಾವರಣಗೊಳಿಸಿದ ಇವೊಲೆಟ್

ಇವೊಲೆಟ್ ಇಂಡಿಯಾ ಗುರುಗ್ರಾಮದಲ್ಲಿರುವ ಭಾರತೀಯ ಮೂಲದ ಕಂಪನಿಯಾಗಿದೆ. ಈ ಕಂಪನಿಯು ಪ್ರಮುಖವಾಗಿ ವಿದ್ಯುತ್ ಅನ್ನು ಉತ್ಪಾದಿಸುತ್ತದೆ. ದೆಹಲಿಯಲ್ಲಿ ಈಗ ನಡೆಯುತ್ತಿರುವ 2020ರ ಆಟೋ ಎಕ್ಸ್ ಪೋದಲ್ಲಿ ಇವೊಲೆಟ್ ಕಂಪನಿಯು ಹಾಕ್ ಎಲೆಕ್ಟ್ರಿಕ್ ಬೈಕ್ ಅನ್ನು ಅನಾವರಣಗೊಳಿಸಿದೆ.

ಆಟೋ ಎಕ್ಸ್‌ಪೋ 2020: ಹಾಕ್ ಎಲೆಕ್ಟ್ರಿಕ್ ಬೈಕ್ ಅನಾವರಣಗೊಳಿಸಿದ ಇವೊಲೆಟ್

ಈ ಎಲೆಕ್ಟ್ರಿಕ್ ಬೈಕ್ ಆಕರ್ಷಕವಾದ ಸ್ಪೋರ್ಟಿ ಲುಕ್ ಹೊಂದಿರುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಈ ಬೈಕಿನ ನೋಟ, ಮುಂಭಾಗದಲ್ಲಿರುವ ಹೆಡ್‍‍ಲೈಟ್ ಹಾಗೂ ಬೈಕಿನ ಸುತ್ತಲಿರುವ ಪ್ಯಾನೆಲ್‍‍ಗಳು ಜನರನ್ನು ಈ ಬೈಕಿನತ್ತ ಆಕರ್ಷಿಸುತ್ತವೆ.

ಆಟೋ ಎಕ್ಸ್‌ಪೋ 2020: ಹಾಕ್ ಎಲೆಕ್ಟ್ರಿಕ್ ಬೈಕ್ ಅನಾವರಣಗೊಳಿಸಿದ ಇವೊಲೆಟ್

ಈ ಬೈಕಿನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 100 ಕಿ.ಮೀವರೆಗೂ ಚಲಿಸುತ್ತದೆ. ಈ ಬ್ಯಾಟರಿಯನ್ನು 3 - 4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು.

ಆಟೋ ಎಕ್ಸ್‌ಪೋ 2020: ಹಾಕ್ ಎಲೆಕ್ಟ್ರಿಕ್ ಬೈಕ್ ಅನಾವರಣಗೊಳಿಸಿದ ಇವೊಲೆಟ್

ಗಮನಿಸಬೇಕಾದ ಸಂಗತಿಯೆಂದರೆ ಇವೊಲೆಟ್ ಕಂಪನಿಯು ಈ ಆಟೋ ಎಕ್ಸ್ ಪೋದಲ್ಲಿ ಹಲವಾರು ವಾಹನಗಳನ್ನು ಅನಾವರಣಗೊಳಿಸಿದೆ.

ಆಟೋ ಎಕ್ಸ್‌ಪೋ 2020: ಹಾಕ್ ಎಲೆಕ್ಟ್ರಿಕ್ ಬೈಕ್ ಅನಾವರಣಗೊಳಿಸಿದ ಇವೊಲೆಟ್

ಈ ಬಗ್ಗೆ ಮಾತನಾಡಿರುವ ಇವೊಲೆಟ್ ಕಂಪನಿಯ ಸಿ‍ಇ‍ಒ ಚತುರ್ವೆದಿರವರು, ಇವೊಲೆಟ್ ಹರಿಯಾಣ, ಹೈದರಾಬಾದ್ ಹಾಗೂ ಚೆನ್ನೈಗಳಲ್ಲಿ ಕಾರ್ಯಾಚರಿಸುತ್ತದೆ. ಇವೊಲೆಟ್ ಸರಣಿಯಲ್ಲಿ 13 ವಾಹನಗಳಿವೆ. ನಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಇಲ್ಲಿ ಪ್ರದರ್ಶಿಸಲು ಹೆಮ್ಮೆಯಾಗುತ್ತಿದೆ ಎಂದು ಹೇಳಿದರು.

ಆಟೋ ಎಕ್ಸ್‌ಪೋ 2020: ಹಾಕ್ ಎಲೆಕ್ಟ್ರಿಕ್ ಬೈಕ್ ಅನಾವರಣಗೊಳಿಸಿದ ಇವೊಲೆಟ್

ಇಲ್ಲಿ ಪ್ರದರ್ಶಿಸಲಾಗಿರುವ ಇವೊಲೆಟ್ ಕಂಪನಿಯ ವಾಹನಗಳನ್ನು ಜೂನ್ ವೇಳೆಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಇವೊಲೆಟ್ ಕಂಪನಿಯು ಭಾರತದಲ್ಲಿರುವ 12 ರಾಜ್ಯಗಳಲ್ಲಿ 17ಕ್ಕೂ ಹೆಚ್ಚು ಡೀಲರ್‍‍ಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಹಾಕ್ ಎಲೆಕ್ಟ್ರಿಕ್ ಬೈಕ್ ಅನಾವರಣಗೊಳಿಸಿದ ಇವೊಲೆಟ್

ಇವೊಲೆಟ್ ಕಂಪನಿಯು ಈ ಡೀಲರ್‍‍ಗಳ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಇದರ ಜೊತೆಗೆ ಪ್ರತಿ ಡೀಲರ್ ಪ್ರತಿ ವರ್ಷ 2 ಸಾವಿರ ಯುನಿಟ್‍‍ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

Most Read Articles

Kannada
English summary
Evolet unveils Hawk Electric Bike at 2020 Auto Expo. Read in Kannada.
Story first published: Friday, February 7, 2020, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X