ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕ್

ಬಿಎಂಡಬ್ಲ್ಯು ಮೋಟರ್‌ರಾಡ್ ಇಂಡಿಯಾ ಕಂಪನಿಯು ತನ್ನ ಎಂ ವಿಭಾಗದ ಮೊದಲ ಮಾದರಿ ಎಂ1000 ಆರ್‌ಆರ್ ಬೈಕನ್ನು ಅನಾವರಣಗೊಳಿಸಿದೆ. ಇದು ಬ್ರ್ಯಾಂಡ್‌ನ ಎಸ್1000 ಆರ್‌ಆರ್ ಬೈಕನ್ನು ಆಧರಿಸಿ ತಯಾರಿಸಲಾಗಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕ್

ಬಿಎಂಡಬ್ಲ್ಯು ಎಂ1000 ಆರ್‌ಆರ್ ಸ್ಟ್ಯಾಂಡರ್ಡ್ ಮಾದರಿಯು ಎಸ್1000 ಆರ್‌ಆರ್ ಬೈಕ್ ಗಿಂತ ಭಿನ್ನವಾಗಿದೆ. ಹೊಸ ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕ್ ನವೀಕರಿಸಿದ ಎಲೆಕ್ಟ್ರಾನಿಕ್ ಮತ್ತು ಏರೋ ಪ್ಯಾಕೇಜ್ ಅನ್ನು ಒಳಗೊಂಡಿದೆ. ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕ್ ಎಸ್1000 ಆರ್‌ಆರ್ ಮಾದರಿಗಿಂತ ಹಗುರವಾಗಿರುತ್ತದೆ, ಎಸ್1000 ಆರ್‌ಆರ್ ಬಿಎಂಡಬ್ಲ್ಯು ಬೈಕುಗಳ ಸರಣಿಯಲ್ಲಿ ಹಗುರವಾದ ಬೈಕ್ ಆಗಿತ್ತು.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕ್

ಕಂಪನಿಯ ಪ್ರಕಾರ ಬಿಎಂಡಬ್ಲ್ಯು ಎಂ1000 ಆರ್‌ಆರ್ ರೇಸಿಂಗ್ ಗಾಗಿ ಬಳಬಹುದು. ಅಲ್ಲದೇ ಸಾರ್ವಜನಿಕ ರಸ್ತೆಗಳಲ್ಲಿ ಓಡಿಸಬಹುದಾಗಿದೆ. ಮೋಟಾರ್ ಕಾಯ್ದೆಯ ಪ್ರಕಾರವೇ ಇದನ್ನು ಅಭಿವೃದ್ದಿ ಪಡೆಸಲಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕ್

ವಿಶ್ವ ಸೂಪರ್‌ಬೈಕ್ ಚಾಂಪಿಯನ್‌ಶಿಪ್‌ ಖ್ಯಾತಿಯ ಬಿ1000ಡಬ್ಲ್ಯು ಮಾದರಿಯನ್ನು ಅನುಕರಿಸಿ ಎಂ1000 ಆರ್‌ಆರ್ ಬೈಕನ್ನು ಅಭಿವೃದ್ದಿ ಪಡಿಸಲಾಗಿದೆ. ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕಿನಲ್ಲಿ 999 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕ್

ಈ ಎಂಜಿನ್ 14,500 ಆರ್‌ಪಿಎಂನಲ್ಲಿ 210 ಬಿಹೆಚ್‌ಪಿ ಪವರ್ ಮತ್ತು 11,000 ಆರ್‌ಪಿಎಂನಲ್ಲಿ 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂ ಮಾದರಿಯ ಎಂಜಿನ್ 6,000 ಆರ್‌ಪಿಎಂ ಮತ್ತು 15,100 ಆರ್‌ಪಿಎಂ ನಡುವಿನ ಮಧ್ಯ ಶ್ರೇಣಿಯಲ್ಲಿ ಹೆಚ್ಚಿನ ಪವರ್ ಅನ್ನು ಉತ್ಪಾದಿಸುತ್ತದೆ.ಇದು ಟ್ರ್ಯಾಕ್‌ಗಳಲ್ಲಿ ರೇಸಿಂಗ್ ಮಾಡುವಾಗ ಹೆಚ್ಚು ಸಹಕಾರಿಯಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕ್

ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಯುನಿಟ್ ಅನ್ನು ಜೋಡಿಸಲಾಗಿದ್ದು, ಇದು ಸ್ಲಿಪ್-ಅಸಿಸ್ಟ್ ಕ್ಲಚ್ ಮತ್ತು ಕ್ಲಚ್ ಅನ್ನು ಬಳಸದೆ ತಡೆರಹಿತ ಮತ್ತು ತ್ವರಿತವಾಗಿ ಅಪ್ ಮತ್ತು ಡೌನ್‌ಶಿಫ್ಟ್‌ಗಳಿಗಾಗಿ ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್ ಅನ್ನು ಒಳಗೊಂಡಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕ್

ಎಂ1000 ಆರ್‌ಆರ್ ಬೈಕಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ ಗಳನ್ನು ಹೊಂದಿರಲಿದೆ, ಈ ಬೈಕಿನಲ್ಲಿ ಅಕ್ರಪೋವಿಕ್, ಕಾರ್ಬನ್-ಫೈಬರ್ ವ್ಹೀಲ್ ಗಳು ಮತ್ತು ಎಂ-ಸ್ಪೆಕ್ ಬ್ರೇಕ್‌ಗಳಿಂದ ಮ್ಯಾನಿಫೋಲ್ಡ್ ಹೊಂದಿರುವ ಸಂಪೂರ್ಣ ಟೈಟಾನಿಯಂ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕ್

ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕಿನಲ್ಲಿ ನವೀಕರಿಸಿದ ಏರೋ ಪ್ಯಾಕೇಜ್ ಹೊಂದಿದೆ. ಇದು ಹೊಸ ವಿಂಗ್ಲೆಟ್ ಗಳನ್ನು ಹೊಂದಿದೆ, ಇದು ವೇಗವನ್ನು ಹೆಚ್ಚಿಸಿದಾಗ ಹಾರ್ಡ್ ಬ್ರೇಕಿಂಗ್ ಮಾಡುವಾಗ ವ್ಜೀಲ್ ಅನ್ನು ನೆಲಕ್ಕೆ ಇರಿಸಲು ಸಹಾಯ ಮಾಡುತ್ತದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕ್

ಸುಧಾರಿತ ರೈಡಿಂಗ್ ಡೈನಾಮಿಕ್ಸ್ ನೀಡಲು ಬೈಕಿನ ಚಾಸಿಸ್ ಅನ್ನು ತಿರುಚಲಾಗಿದೆ. ಎಸ್1000 ಆರ್‌ಆರ್ ಮಾದರಿಯು 1441 ಎಂಎಂ ವ್ಹೀಲ್ ಬೇಸ್ ಹೊಂದಿದ್ದರೆ ಈ ಬೈಕ್ 1457 ಎಂಎಂ ಹೊಂದಿದೆ. ಏಕೆಂದರೆ ಉದ್ದವಾದ ಸ್ವಿಂಗಾರ್ಮ್. ಸ್ವಿಂಗಾರ್ಮ್‌ನ ಪಿವೋಟ್ ಪಾಯಿಂಟ್ ಅನ್ನು ಜಗತ್ತಿನ ವಿವಿಧ ರೇಸ್ ಟ್ರ್ಯಾಕ್‌ಗಳಿಗೆ ಸರಿಹೊಂದಿಸಬಹುದು.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕ್

ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 45 ಎಂಎಂ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಹೊಂದಿದೆ. ಈ ಎರಡು ಸಸ್ಪೆಂಕ್ಷನ್ ಯುನಿಟ್ ಗಳು ಪ್ರೀ ಲೋಡ್ ಮತ್ತು ಸಂಪೂರ್ಣವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತವೆ. ಇದು ಬ್ರ್ಯಾಂಡ್‌ನ ಫುಲ್ ಫ್ಲೋಟರ್ ಪ್ರೊ ಕೈನೆಮ್ಯಾಟಿಕ್ಸ್ ತಂತ್ರಜ್ಞಾನವನ್ನು ಒಳಗೊಂಡಿರುತ್ತವೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕ್

ಇನ್ನು ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕಿನ ಎರಡು ಕಡೆಗಳಲ್ಲಿ ನಿಸ್ಸಿನ್‌ನಿಂದ ಎಂ-ಸ್ಪೆಕ್ ಯುನಿಟ್ ಗಳ ಬ್ರೇಕಿಂಗ್ ಸಿಸ್ಟಂ ಹೊಂದಿದೆ. ಮುಂಭಾಗದಲ್ಲಿ ಸೆಟಪ್ ರೇಡಿಯಲ್ ಮೌಂಟೆಡ್ ಫೋರ್-ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಟ್ವಿನ್ 320 ಎಂಎಂ ಡಿಸ್ಕ್ ಅನ್ನು ಒಳಗೊಂಡಿದೆ, ಇನ್ನು ಹಿಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್‌ನೊಂದಿಗೆ ಒಂದೇ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕ್

ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾಗಿ 6.5-ಇಂಚಿನ ಟಿಎಫ್ಟಿ ಡಿಸ್ ಪ್ಲೇಯನ್ನು ಹೊಂದಿದೆ. ಇದು ಹೆಚ್ಚುವರಿ ರೇಸ್ ಡೇಟಾಕ್ಕಾಗಿ ಎಂ ಜಿಪಿಎಸ್ ಡೇಟಾ ಲಾಗರ್ ಮತ್ತು ಎಂ ಜಿಪಿಎಸ್ ಲ್ಯಾಪ್ ಗಳಿಗೆ ಸಪೋರ್ಟ್ ಮಾಡುತ್ತದೆ. ಇದರೊಂದಿಗೆ ಹಲವಾರು ಪ್ರೀಮಿಯಂ ಪ್ಯಾಕೇಜ್ ಅನ್ನು ಹೊಂದಿದೆ.

Most Read Articles

Kannada
English summary
BMW M1000 RR Unveiled: First Motorcycle From The Brand’s M Divison. Read In Kannada.
Story first published: Thursday, September 24, 2020, 18:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X