ಕೆಟಿ‍ಎಂ 790 ಡ್ಯೂಕ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಆಸ್ಟ್ರಿಯಾದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆ‍ಟಿಎಂ ತನ್ನ ಡ್ಯೂಕ್ 790 ಬೈಕಿನ ಮೇಲೆ ಬರೊಬ್ಬರಿ ರೂ.2.5 ಲಕ್ಷಗಳವರೆಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಆದರೆ ಈ ರಿಯಾಯಿತಿಯು ಬಿಎಸ್-4 ಎಂಜಿನ್‍‍ನ ಬಿಎಸ್-4 ಕೆಟಿಎಂ 790 ಡ್ಯೂಕ್ ಬೈಕಿಗೆ ಮಾತ್ರ ನೀಡಲಾಗಿದೆ.

ಕೆಟಿ‍ಎಂ 790 ಡ್ಯೂಕ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಬಿಎಸ್-4 ಕೆಟಿಎಂ 790 ಡ್ಯೂಕ್ ಬೈಕಿನ ರಿಯಾಯಿತಿಗಳು ಡೀಲರ್‍‍ಗಳ ಮೇಲೆ ಅವಲಂಭಿಸಿದೆ. ಡೀಲರ್‍‍ಗಳಿಂದ ಡೀಲರ್‍‍ಗಳ ನಡುವೆ ಭಿನ್ನವಾದ ರಿಯಾಯಿತಿಗಳು ಹೊಂದಿರುತ್ತದೆ. ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ 790 ಡ್ಯೂಕ್ ಬೈಕ್ ಬಿಡುಗಡೆಗೊಳಿಸುವಾಗ ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.64 ಲಕ್ಷ ಗಳಾಗಿತ್ತು. ನೇಕೆಟ್ ಸೆಗೆಮೆಂಟ್‍‍ನ ಈ ಬೈಕ್ ಅನ್ನು ಸಿಕೆಡಿ(ಕಂಪ್ಲೀಟ್ ನಾಕ್ ಡೌನ್) ಮೂಲಕ ಭಾರತಕ್ಕೆ ತರಲಾಗಿದೆ ಮತ್ತು ಬಜಾಜ್ ಘಟಕದಲ್ಲಿ ಈ ಬೈಕ್ ಅನ್ನು ಜೋಡಿಸಲಾಗಿದೆ.

ಕೆಟಿ‍ಎಂ 790 ಡ್ಯೂಕ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಮುಂಬೈ, ದೆಹಲಿ, ಬೆಂಗಳೂರು, ಪುಣೆ, ಕೋಲ್ಕತಾ, ಹೈದರಾಬಾದ್, ಸೂರತ್, ಗುವಾಹಟಿ ಮತ್ತು ಚೆನ್ನೈ ಸೇರಿದಂತೆ ದೇಶದ ಒಂಬತ್ತು ನಗರಗಳಲ್ಲಿ ಮಾತ್ರ 790 ಡ್ಯೂಕ್ ಬೈಕ್ ಲಭ್ಯವಿದೆ.

ಕೆಟಿ‍ಎಂ 790 ಡ್ಯೂಕ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

790 ಡ್ಯೂಕ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಸುಜುಕಿ ಜಿಎಸ್ಎಕ್ಸ್-ಎಸ್ 750, ಡುಕಾಟಿ ಮಾನ್ಸ್ಟರ್ 797, ಟ್ರಯಂಫ್ ಸ್ಟ್ರೀಟ್ ಟ್ರಿಪಲ್, ಯಮಹಾ ಎಂಟಿ -09 ಮತ್ತು ಕವಾಸಕಿ 9 ಝಡ್900 ಬೈಕ್‍‍ಗಳಿಗೆ ಪೈಪೋಟಿ ನೀಡುತ್ತಿವೆ. ಕೆ‍ಟಿಎಂ 790 ಬೆಲೆಯು ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ದುಬಾರಿಯಾಗಿದೆ.

ಕೆಟಿ‍ಎಂ 790 ಡ್ಯೂಕ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಕೆ‍‍ಟಿಎಂ 790 ಡ್ಯೂಕ್ ಬೈಕ್ 799 ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 104 ಬಿಎಚ್‍ಪಿ ಪವರ್ ಮತ್ತು 87 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಸ್ಟ್ಯಾಂಡರ್ಡ್ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಿದ್ದಾರೆ. 169 ಕೆಜಿ ಡ್ರೈ ತೂಕದೊಂದಿಗೆ, ಡ್ಯೂಕ್ 790 ತನ್ನ ವಿಭಾಗದಲ್ಲಿ ಹಗುರವಾದ ಬೈಕ್‍‍ಗಳಲ್ಲಿ ಒಂದಾಗಿದೆ.

ಕೆಟಿ‍ಎಂ 790 ಡ್ಯೂಕ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಈ ಬೈಕಿನ ಮುಂಭಾಗದಲ್ಲಿ 43 ಎಂಎಂ ಅಪ್ ಸೈಡ್ ಡೌನ್ ನಾನ್ ಅಡ್ಜಸ್ಟಬಲ್ ಫೋರ್ಕ್‍‍ಗಳನ್ನು ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍ ಸಸ್ಪೆಂಷನ್‍‍ಗಳನ್ನು ಅಳವಡಿಸಲಾಗಿದೆ. ಬ್ರೇಕಿಂಗ್ ಸಿಸ್ಟಂನಲ್ಲಿ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 240 ಎಂಎಂ ಡಿಸ್ಕ್ ಅನ್ನು ಅಳವಡಿಸಿದ್ದಾರೆ.

ಕೆಟಿ‍ಎಂ 790 ಡ್ಯೂಕ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

790 ಡ್ಯೂಕ್ ಬೈಕಿ‍ನಲ್ಲಿ ಎಲೆಕ್ಟ್ರಾನಿಕ್ಸ್ ರೈಡರ್ ನಾಲ್ಕು ರೈಡಿಂಗ್‍ ಮೋಡ್‍‍ಗಳನ್ನು ಹೊಂದಿದೆ. ಅವುಗಳಲ್ಲಿ ರೈನ್, ಸ್ಟ್ರೀಟ್ಸ್, ಸ್ಪೋರ್ಟ್ಸ್, ಮತ್ತು ಟ್ರ್ಯಾಕ್ ಮೋಡ್‍‍ಗಳಾಗಿವೆ. ಈ ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಎಬಿಎಸ್(ಆಂಟಿ ಲಾಕ್ ಬ್ರೇಕ್ ಸಿಸ್ಟಂ) ಮತ್ತು ಲೀನ್ ಆ್ಯಂಗಲ್ ಸೆನೆಸ್ಟಿವ್ ಅನ್ನು ಹೊಂದಿದೆ.

ಕೆಟಿ‍ಎಂ 790 ಡ್ಯೂಕ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಇದರೊಂದಿಗೆ ಮೋಟಾರ್ ಸ್ಲಿಪ್ ರೆಗ್ಯೋಲೇಶನ್, ಸ್ಟೇಬಿಲಿಟಿ ಕಂಟ್ರೋಲ್, ಸ್ಲಿಪ್ಲರ್ ಕ್ಲಚ್ ಮತ್ತು ಕ್ಲಚ್‍‍ಲೆಸ್ ಆಪ್‍‍ಶಿಫ್ಟ್ ಮತ್ತು ಡೌನ್‍ಶಿಫ್ಟ್ ಮತ್ತು ಕ್ವಿಕ್ ಶಿಪ್ಟರ್ ಅನ್ನು ಸಹ ಒಳಗೊಂಡಿದೆ. ಕೆ‍ಟಿಎಂ ಡ್ಯೂಕ್ 790 ಸಂಪೂರ್ಣ ಡಿಜೆಟಲ್ ಟಿಎಫ್ಟಿ ಇನ್ಸ್ ಟ್ರೂಮೆಂಟ್ ಡಿ‍‍ಸ್‍‍ಪ್ಲೇಯನ್ನು ಹೊಂದಿದ್ದು, ಸವಾರನಿಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ ಮತ್ತು ಸುತ್ತಲೂ ಎಲ್‍ಇಡಿ ಲೈ‍ಟಿಂಗ್ ಹೊಂದಿದೆ.

ಕೆಟಿ‍ಎಂ 790 ಡ್ಯೂಕ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಮುಂದಿನ ತಿಂಗಳು ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗಲಿದೆ. ಇದರಿಂದಾಗಿ ಇದೇ ತಿಂಗಳು ಬಿಎಸ್-4 ಕೆಟಿಎಂ 790 ಡ್ಯೂಕ್ ಬೈಕಿನ ಸ್ಟಾಕ್ ಗಳನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಇದೇ ಕಾರಣದಿಂದ ಬಿಎಸ್-4 ಕೆಟಿಎಂ 790 ಡ್ಯೂಕ್ ಭರ್ಜರಿ ರಿಯಾಯಿತಿಗಳನ್ನು ಘೋಷಿಸಿದೆ. ಕೆಲವು ವರದಿಗಳ ಪ್ರಕಾರ ಬಿಎಸ್-4 ಕೆಟಿಎಂ 790 ಡ್ಯೂಕ್ ಬೈಕಿಗೆ ರೂ.2.5 ಲಕ್ಷದಿಂದ ರೂ.3 ಲಕ್ಷದವರೆಗೆ ಭರ್ಜರಿ ರಿಯಾಯಿತಿ ಘೋಷಿಸಿದೆ.

Most Read Articles

Kannada
Read more on ಕೆಟಿಎಂ ktm
English summary
BS4 KTM 790 Duke Gets Massive Discounts. Read in Kannada.
Story first published: Tuesday, March 10, 2020, 15:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X