ಕಡಿಮೆಯಾಗಲಿದೆ ಹಾರ್ಲೆ ಡೇವಿಡ್‍‍ಸನ್ ಬೈಕ್ ಮೇಲಿನ ತೆರಿಗೆ

ವಿದೇಶದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಬೈಕ್‍‍ಗಳ ಮೇಲೆ ಭಾರತ ಸರ್ಕಾರವು 100%ನಷ್ಟು ತೆರಿಗೆ ವಿಧಿಸುತ್ತದೆ. ಇದರಲ್ಲಿ ಅಮೇರಿಕಾ ಮೂಲದ ಹಾರ್ಲೆ ಡೇವಿ‍ಡ್‍‍ಸನ್ ಕಂಪನಿಯ ಬೈಕ್‍ಗಳೂ ಸಹ ಸೇರಿವೆ.

ಕಡಿಮೆಯಾಗಲಿದೆ ಹಾರ್ಲೆ ಡೇವಿಡ್‍‍ಸನ್ ಬೈಕ್ ಮೇಲಿನ ತೆರಿಗೆ

ಇವುಗಳ ಮೇಲೆಯೂ 100%ನಷ್ಟು ತೆರಿಗೆ ವಿಧಿಸಲಾಗುತ್ತಿದೆ. ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍‍ರವರು ಭಾರತದ ಈ ನಡೆಯನ್ನು ಹಲವಾರು ಬಾರಿ ಖಂಡಿಸಿದ್ದಾರೆ. ಭಾರತದ ವಾಹನಗಳ ಮೇಲೆ ಅಮೇರಿಕಾದಲ್ಲಿ ಕಡಿಮೆ ತೆರಿಗೆಯನ್ನು ವಿಧಿಸಲಾಗುತ್ತಿದೆ.

ಕಡಿಮೆಯಾಗಲಿದೆ ಹಾರ್ಲೆ ಡೇವಿಡ್‍‍ಸನ್ ಬೈಕ್ ಮೇಲಿನ ತೆರಿಗೆ

ಈ ಕಾರಣಕ್ಕೆ ಭಾರತವು ಸಹ ಅಮೇರಿಕಾದಲ್ಲಿ ತಯಾರಾಗುವ ಬೈಕ್‍‍ಗಳ ಮೇಲೆ ಕಡಿಮೆ ತೆರಿಗೆಯನ್ನು ವಿಧಿಸಬೇಕೆಂದು ಹೇಳಿದ್ದಾರೆ. ಈ ವಿಷಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿರವರು ಮಧ್ಯ ಪ್ರವೇಶಿಸಿ ತೆರಿಗೆಯನ್ನು ಕಡಿಮೆಗೊಳಿಸಬೇಕೆಂದು ಹೇಳಿದ್ದಾರೆ.

ಕಡಿಮೆಯಾಗಲಿದೆ ಹಾರ್ಲೆ ಡೇವಿಡ್‍‍ಸನ್ ಬೈಕ್ ಮೇಲಿನ ತೆರಿಗೆ

ಭಾರತವು ಅಮೇರಿಕಾದ ಬೈಕ್‍‍ಗಳ ಮೇಲಿನ ತೆರಿಗೆಯನ್ನು ಕಡಿಮೆಗೊಳಿಸದಿದ್ದರೆ, ಅಮೇರಿಕಾದಲ್ಲಿ ಭಾರತದ ವಾಹನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗುತ್ತದೆ ಎಂದು ಟ್ರಂಪ್‍‍ರವರು ಹೇಳಿದ್ದಾರೆ.

ಕಡಿಮೆಯಾಗಲಿದೆ ಹಾರ್ಲೆ ಡೇವಿಡ್‍‍ಸನ್ ಬೈಕ್ ಮೇಲಿನ ತೆರಿಗೆ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರವು ಹಾರ್ಲೆ ಡೇವಿ‍‍ಡ್‍‍ಸನ್ ಬೈಕ್‍‍ಗಳ ಮೇಲಿನ ತೆರಿಗೆಯನ್ನು 100%ನಿಂದ 50%ಗಳಿಗೆ ಇಳಿಸುವುದಾಗಿ ತಿಳಿಸಿದೆ. ಆದರೆ ಡೊನಾಲ್ಡ್ ಟ್ರಂಪ್‍‍ರವರು ಈ ಪ್ರಮಾಣವು ಸಹ ಹೆಚ್ಚಾಯಿತು ಎಂದು ಹೇಳಿದ್ದಾರೆ.

ಕಡಿಮೆಯಾಗಲಿದೆ ಹಾರ್ಲೆ ಡೇವಿಡ್‍‍ಸನ್ ಬೈಕ್ ಮೇಲಿನ ತೆರಿಗೆ

ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವೆ ತೆರಿಗೆಗೆ ಸಂಬಂಧಪಟ್ಟಂತೆ ಅಧಿಕೃತ ಸಭೆಯನ್ನು ನಡೆಸಲಾಗುತ್ತಿದೆ. ಭಾರತ - ಅಮೇರಿಕಾಗಳೆರಡೂ ತೆರಿಗೆಗೆ ಸಂಬಂಧಪಟ್ಟಂತೆ ಹೊಸ ನೀತಿಯನ್ನು ಜಾರಿಗೆ ತರಲು ಆಲೋಚನೆ ನಡೆಸುತ್ತಿವೆ.

ಕಡಿಮೆಯಾಗಲಿದೆ ಹಾರ್ಲೆ ಡೇವಿಡ್‍‍ಸನ್ ಬೈಕ್ ಮೇಲಿನ ತೆರಿಗೆ

ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರ ಪ್ರಕಾರ, 1,600 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿರುವ ಬೈಕ್‍‍ಗಳ ಬೆಲೆಯನ್ನು ಸಿಂಗಲ್ ಡಿಜಿಟಿಗೆ ಇಳಿಸಲಾಗುವುದು. ಇದರಿಂದಾಗಿ ಹಾರ್ಲೆ ಡೇವಿಡ್‍‍ಸನ್ ಬೈಕ್‍‍ಗಳ ಮೇಲಿನ ತೆರಿಗೆಯು ಕಡಿಮೆಯಾಗಲಿದೆ.

ಕಡಿಮೆಯಾಗಲಿದೆ ಹಾರ್ಲೆ ಡೇವಿಡ್‍‍ಸನ್ ಬೈಕ್ ಮೇಲಿನ ತೆರಿಗೆ

ಈವರೆಗೆ ಬೈಕ್‍‍ಗಳನ್ನು 75 ಸಿಸಿ, 250 ಸಿಸಿ, 500 ಸಿಸಿ, 800 ಸಿಸಿ ಹಾಗೂ ಅದಕ್ಕಿಂತ ಹೆಚ್ಚಿನ ಸಿಸಿಗಳೆಂದು ವರ್ಗಿಕರಿಸಲಾಗಿದೆ. 1,600 ಸಿಸಿ ಬೈಕ್‍‍ಗಳನ್ನು ಪ್ರತ್ಯೇಕವಾಗಿ ವರ್ಗಿಕರಿಸುವ ಅಗತ್ಯವಿಲ್ಲವೆಂದು ಕೇಂದ್ರ ಸರ್ಕಾರವು ಹೇಳಿದೆ.

ಕಡಿಮೆಯಾಗಲಿದೆ ಹಾರ್ಲೆ ಡೇವಿಡ್‍‍ಸನ್ ಬೈಕ್ ಮೇಲಿನ ತೆರಿಗೆ

ಭಾರತ - ಅಮೇರಿಕಾ ಮಧ್ಯೆ ನಡೆಯುತ್ತಿರುವ ಸಭೆಯಲ್ಲಿ ಭಾರತೀಯರ ಹೆಚ್ 1 ಬಿ ವೀಸಾ ಮೇಲೆ ವಿಧಿಸಲಾಗಿರುವ ಹೆಚ್ಚಿನ ಪ್ರಮಾಣದ ಶುಲ್ಕವನ್ನು ಕಡಿಮೆಗೊಳಿಸುವಂತೆ ಮನವಿ ಮಾಡಲಾಗಿದೆ.

Most Read Articles

Kannada
English summary
Indian Govt plans to give duty relief for Harley Davidson bikes. Read in Kannada.
Story first published: Monday, February 17, 2020, 16:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X