ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಲು ಸಜ್ಜಾದ ಹಾರ್ಲೆ ಡೇವಿಡ್ಸನ್

ಅಮೆರಿಕಾ ಮೂಲದ ಪ್ರೀಮಿಯಂ ಬೈಕ್ ತಯಾರಕ ಕಂಪನಿಯಾದ ಹಾರ್ಲೆ-ಡೇವಿಡ್ಸನ್ ಕಂಪನಿಯ ಬೈಕುಗಳು ಭಾರತವೂ ಸೇರಿದಂತೆ ವಿಶ್ವಾದ್ಯಂತ ಜನಪ್ರಿಯತೆಯನ್ನು ಹೊಂದಿವೆ. ಈಗ ಹಾರ್ಲೆ ಡೇವಿಡ್ಸನ್ ಕಂಪನಿಯು ಎಲೆಕ್ಟ್ರಿಕ್ ಸೈಕಲ್ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿದೆ.

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಲು ಸಜ್ಜಾದ ಹಾರ್ಲೆ ಡೇವಿಡ್ಸನ್

ಈ ಹಿನ್ನೆಲೆಯಲ್ಲಿ ಹಾರ್ಲೆ-ಡೇವಿಡ್ಸನ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸೈಕಲ್ ಅನ್ನು ಅನಾವರಣಗೊಳಿಸಿದೆ. ಈ ಸೈಕಲ್ 1903ರಲ್ಲಿ ತಯಾರಾಗಿದ್ದ ಕಂಪನಿಯ ಮೊಟ್ಟಮೊದಲ ಬೈಕಿನಿಂದ ಪ್ರೇರಣೆ ಪಡೆದಿದೆ. ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸೈಕಲ್ ಗೆ ಸೀರಿಯಲ್ 1 ಎಂಬ ಹೆಸರನ್ನಿಟ್ಟಿದೆ.

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಲು ಸಜ್ಜಾದ ಹಾರ್ಲೆ ಡೇವಿಡ್ಸನ್

ಸೀರಿಯಲ್ 1 ಸೈಕಲ್ ಕಂಪನಿ ಎಂಬ ಹೊಸ ವ್ಯವಹಾರವು ಹಾರ್ಲೆ ಡೇವಿಡ್ಸನ್ ಕಂಪನಿಯ ಉತ್ಪನ್ನ ಅಭಿವೃದ್ಧಿ ಕೇಂದ್ರದೊಳಗಿನ ಯೋಜನೆಯಾಗಿ ಆರಂಭವಾಗಿದೆ. ಸೀರಿಯಲ್ 1 ಈ ಸೈಕಲ್ ಸೆಗ್ ಮೆಂಟಿನಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಲಿದೆ ಎಂದು ಹೇಳಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಲು ಸಜ್ಜಾದ ಹಾರ್ಲೆ ಡೇವಿಡ್ಸನ್

ಸೀರಿಯಲ್ 1 ಇ-ಸೈಕಲ್ ಅನ್ನು ಸೈಕಲ್ ಗ್ರಾಹಕರಿಗಾಗಿಯೇ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಸೈಕಲ್ ಸಾರಿ ಸಾಟಿಯಿಲ್ಲದ ಅಡ್ವೆಂಚರ್ ಅನುಭವವನ್ನು ನೀಡುತ್ತದೆ ಎಂದು ಸೀರಿಯಲ್ 1 ಸೈಕಲ್ ಕಂಪನಿಯ ನಿರ್ದೇಶಕರಾದ ಆರನ್ ಫ್ರಾಂಕ್ ಹೇಳಿದ್ದಾರೆ

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಲು ಸಜ್ಜಾದ ಹಾರ್ಲೆ ಡೇವಿಡ್ಸನ್

ಇನ್ನು ಈ ಎಲೆಕ್ಟ್ರಿಕ್ ಸೈಕಲಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಸೈಕಲ್ ಬಿಳಿ ಬಣ್ಣದ ಟಯರ್, ಲೆದರ್ ಸ್ಯಾಡಲ್, ಹ್ಯಾಂಡ್ ಗ್ರಿಪ್ ಹಾಗೂ ನಯವಾಗಿರುವ ಕಪ್ಪು ಬಣ್ಣದ ಫ್ರೇಮ್ ಗಳನ್ನು ಹೊಂದಿರಲಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಲು ಸಜ್ಜಾದ ಹಾರ್ಲೆ ಡೇವಿಡ್ಸನ್

ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸೈಕಲ್ ಅನ್ನು 2021ರ ಬೇಸಿಗೆ ವೇಳೆಗೆ ಬಿಡುಗಡೆಗೊಳಿಸಲು ಚಿಂತನೆ ನಡೆಸಿದೆ. ಕಂಪನಿಯು ಈ ಎಲೆಕ್ಟ್ರಿಕ್ ಸೈಕಲ್ ಬೆಲೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಲು ಸಜ್ಜಾದ ಹಾರ್ಲೆ ಡೇವಿಡ್ಸನ್

ಹಾರ್ಲೆ ಡೇವಿಡ್ಸನ್ ಕಂಪನಿಯ ಪ್ರಕಾರ ಜಾಗತಿಕ ಎಲೆಕ್ಟ್ರಿಕ್ ಸೈಕಲ್ ಮಾರುಕಟ್ಟೆಯು 2019ರಲ್ಲಿ 15 ಶತಕೋಟಿ ಡಾಲರ್ ಗಿಂತ ಹೆಚ್ಚು ವಹಿವಾಟು ನಡೆಸಿದೆ ಎಂದು ಅಂದಾಜಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಲು ಸಜ್ಜಾದ ಹಾರ್ಲೆ ಡೇವಿಡ್ಸನ್

ಈ ಪ್ರಮಾಣವು 2020 - 2025ರವರೆಗೆ ವಾರ್ಷಿಕ 6%ಗಿಂತ ಹೆಚ್ಚು ದರದಲ್ಲಿ ಬೆಳೆಯುವ ನಿರೀಕ್ಷೆಗಳಿವೆ. ಹಾರ್ಲೆ ಡೇವಿಡ್ಸನ್ ಕಂಪನಿ ಮಾತ್ರವಲ್ಲದೇ ದೊಡ್ಡ ದೊಡ್ಡ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಸೆಗ್ ಮೆಂಟಿಗೆ ಕಾಲಿಡುತ್ತಿವೆ.

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಲು ಸಜ್ಜಾದ ಹಾರ್ಲೆ ಡೇವಿಡ್ಸನ್

ಬಿಎಂಡಬ್ಲ್ಯು ಕಂಪನಿಯು ಎಲೆಕ್ಟ್ರಿಕ್ ಬೈಕುಗಳನ್ನು ತಯಾರಿಸುತ್ತಿದ್ದರೆ, ಆಡಿ ಕಂಪನಿಯು ಎಲೆಕ್ಟ್ರಿಕ್ ಮೌಂಟೇನ್ ಬೈಕ್‌ಗಳನ್ನು ತಯಾರಿಸುತ್ತಿದೆ. ಮರ್ಸಿಡಿಸ್ ಬೆಂಝ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಲು ಸಜ್ಜಾದ ಹಾರ್ಲೆ ಡೇವಿಡ್ಸನ್

ಇನ್ನು ಫೋರ್ಡ್ ಕಂಪನಿಯು ಇ-ಸ್ಕೂಟರ್ ಸ್ಟಾರ್ಟ್ಅಪ್ ಕಂಪನಿಯಾದ ಸ್ಪಿನ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಇತ್ತೀಚಿಗಷ್ಟೇ ಜೀಪ್ ಕಂಪನಿಯು ಟಾಪ್ ಎಂಡ್ ಎಲೆಕ್ಟ್ರಿಕ್ ಮೌಂಟೇನ್ ಬೈಕ್ ಅನ್ನು ಅನಾವರಣಗೊಳಿಸಿದೆ.

Most Read Articles

Kannada
English summary
harley-davidson-company-unveils-its-first-electric-bicycle. Read in Kannada.
Story first published: Wednesday, October 28, 2020, 18:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X