ಭಾರತದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ವಿಶ್ವದ ದುಬಾರಿ ಬೈಕ್ ಕಂಪನಿ

ಅಮೆರಿಕ ಮೂಲದ ಜನಪ್ರಿಯ ಮತ್ತು ದುಬಾರಿ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ಇತ್ತೀಚೆಗೆ ಪ್ರತಿ ಎರಡು ವಾರಗಳಿಗೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಮತೊಮ್ಮೆ ಸುದ್ದಿಯಾಗಿದ್ದಾರೆ.

ಭಾರತದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ವಿಶ್ವದ ದುಬಾರಿ ಬೈಕ್ ಕಂಪನಿ

ಜನಪ್ರಿಯ ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲಿ ತನ್ನ ಮಾರಾಟ ಮತ್ತು ಉತ್ಪಾದನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದರೆ ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲಿ ಕಾರ್ಯಚರಣೆಯ ತಂತ್ರ ಮತ್ತು ಮಾರುಕಟ್ಟೆ ರಚನೆಯ ಕೂಲಂಕುಷ ಪರಿಶೀಲನೆ ನಡೆಸುವ 'ದಿ ರಿವೈರ್' ತಂತ್ರದ ಭಾಗವಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಭಾರತದಲ್ಲಿ ತನ್ನ ವ್ಯವಹಾರ ಮಾದರಿಯನ್ನು ಬದಲಾಯಿಸುತ್ತಿದೆ ಮತ್ತು ತನ್ನ ಗ್ರಾಹಕರಿಗೆ ಸೇವೆ ಸಲ್ಲಿಸಲು ಆಯ್ಕೆಗಳ ಬಗ್ಗೆ ಮರು ಪರಿಶೀಲನೆಯನ್ನು ನಡೆಸುತ್ತಿದೆ.

ಭಾರತದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ವಿಶ್ವದ ದುಬಾರಿ ಬೈಕ್ ಕಂಪನಿ

ಹಾರ್ಲೆ ಡೇವಿಡ್ಸನ್ ಕಂಪನಿಯು ಹರಿಯಾಣದ ಬವಾಲ್‌ನಲ್ಲಿ ತನ್ನ ಉತ್ಪಾದನಾ ಘಟಕಕ್ಕೆ ಬೀಗ ಜಡಿಯಲು ಯೋಜಿಸಿದೆ. ಗುರಗಾಂವ್‌ನಲ್ಲಿರುವ ತನ್ನ ಮಾರಾಟ ಕಚೇರಿಯ ಗಾತ್ರವನ್ನು ಕಡಿಮೆ ಮಾಡಲು ಹಾರ್ಲೆ ಡೇವಿಡ್ಸನ್ ಯೋಜಿಸಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಭಾರತದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ವಿಶ್ವದ ದುಬಾರಿ ಬೈಕ್ ಕಂಪನಿ

ಕಂಪನಿಯು ತನ್ನ ಡೀಲರ್ ನೆಟ್ವರ್ಕ್ ಗುತ್ತಿಗೆ ಅವಧಿಯ ಮೂಲಕ ಗ್ರಾಹಕರಿಗೆ ಸೇವೆ ನೀಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದೆ. ಹಿಂದಿನ ವರದಿಯ ಪ್ರಕಾರ, ಹಾರ್ಲೆ-ಡೇವಿಡ್ಸನ್ ತನ್ನ ಉತ್ಪನ್ನ ಬಂಡವಾಳವನ್ನು 30% ರಷ್ಟು ಕಡಿಮೆ ಮಾಡಲು ಯೋಜಿಸಿದೆ.

ಭಾರತದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ವಿಶ್ವದ ದುಬಾರಿ ಬೈಕ್ ಕಂಪನಿ

ಆಗಸ್ಟ್ ತಿಂಗಳಲ್ಲಿ ಹಾರ್ಲೆ-ಡೇವಿಡ್ಸನ್ ದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ಕಡಿಮೆ ಮಾಡುವ ಭಾಗವಾಗಿ ಭಾರತದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದ ವರದಿಗಳು ಪ್ರಕಟವಾಗಿತ್ತು. ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಅದೇ ರಿವೈರ್ ತಂತ್ರದ ಭಾಗವಾಗಿತ್ತು.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಭಾರತದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ವಿಶ್ವದ ದುಬಾರಿ ಬೈಕ್ ಕಂಪನಿ

ಈ ರಿವೈರ್ ಕಾರ್ಯತಂತ್ರವನ್ನು 2020ರ ಅಂತ್ಯದವರೆಗೂ ಮುಂದುವರಿಸಲು ಯೋಜಿಸಲಾಗಿದೆ. ಇದು 2021 - 2025ರ ಹೊಸ ಕಾರ್ಯತಂತ್ರದ ಯೋಜನೆಗೆ ಕಾರಣವಾಗಲಿದೆ, ಇದನ್ನು ‘ದಿ ಹಾರ್ಡ್‌ವೈರ್' ಎಂದು ಕರೆಯಲಾಗುತ್ತದೆ, ಇದರಲ್ಲಿ ಕಂಪನಿಯ ಬೆಳವಣಿಗೆ ಮತ್ತು ಹೊಸ ಮಾದರಿಗಳನ್ನು ತಯಾರಿಸುವ ಗುರಿಯನ್ನು ಹೊಂದಿದೆ.

ಭಾರತದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ವಿಶ್ವದ ದುಬಾರಿ ಬೈಕ್ ಕಂಪನಿ

ಈ ಪುನರ್ ರಚನೆಯ ಭಾಗವಾಗಿ ಹೊಸ 338ಸಿಸಿ ಎಂಟ್ರಿ ಲೆವೆಲ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದು ಅನುಮಾನವಾಗಿದೆ. ಭಾರತದಲ್ಲಿ ಎಲ್ಲಾ ಉತ್ಪಾದನಾ ಮತ್ತು ಮಾರಾಟ ಕಾರ್ಯಾಚರಣೆಗಳು ಸ್ಥಗಿತಗೊಂಡಿರುವುದರಿಂದ ಸದ್ಯದಲ್ಲಿ ಬಿಡುಗಡೆಗೊಳಿಸಲಾಗುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಭಾರತದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ವಿಶ್ವದ ದುಬಾರಿ ಬೈಕ್ ಕಂಪನಿ

ಈ 338ಸಿಸಿ ಎಂಟ್ರಿ ಲೆವೆಲ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಹಾರ್ಲೆ-ಡೇವಿಡ್ಸನ್ ಮಾರಾಟದಲ್ಲಿ ದೊಡ್ಡ ಕುಸಿತವನ್ನು ಕಂಡಿದೆ.

ಭಾರತದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ವಿಶ್ವದ ದುಬಾರಿ ಬೈಕ್ ಕಂಪನಿ

ಭಾರತದಲ್ಲಿ ಕಂಪನಿಯು 2020ರ ಏಪ್ರಿಲ್‌ನಿಂದ ಜೂನ್ ವರೆಗೆ ಕೇವಲ 106 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಮಾರಾಟದಲ್ಲಿ ಶೇ.87% ನಷ್ಟು ಕುಸಿತವನ್ನು ಕಂಡಿದೆ. ಕಡಿಮೆ ಮಾರಾಟ ಮತ್ತು ಕೊರೊನಾ ಸೋಂಕಿನ ಕಾರಣದಿಂದಾಗಿ ಹಾರ್ಲೆ ಡೇವಿಡ್ಸನ್ ಕೂಡ ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸಿದೆ.

ಭಾರತದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ವಿಶ್ವದ ದುಬಾರಿ ಬೈಕ್ ಕಂಪನಿ

ಕಂಪನಿಯು ಈಗಾಗಲೇ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಬಲಪಡಿಸುತ್ತಿದೆ ಎಂದು ಕಂಪನಿ ಹೇಳಿದೆ. ಸ್ಥಾವರ ಇತ್ಯಾದಿಗಳನ್ನು ಮುಚ್ಚಲಾಗಿದ್ದರೂ, ಅವರ ಸೇವೆ ಇನ್ನೂ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ. ಕಂಪನಿಯು ಈಗ ಅಮೆರಿಕಾ ಮತ್ತು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಗಮನ ಹರಿಸಲಿದೆ.

ಭಾರತದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ವಿಶ್ವದ ದುಬಾರಿ ಬೈಕ್ ಕಂಪನಿ

ಕಳೆದ 4 ರಿಂದ 5 ವರ್ಷಗಳಲ್ಲಿ ಭಾರತದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ವಾಹನ ತಯಾರಕರ ಪಟ್ಟಿಗೆ ಹಾರ್ಲೆ-ಡೇವಿಡ್ಸನ್ ಈಗ ಸೇರಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಜನರಲ್ ಮೋಟಾರ್ಸ್, ಯುಎಂ ಮೋಟರ್ ಸೈಕಲ್ಸ್ ಮತ್ತು ಫಿಯೆಟ್ ಸೇರಿವೆ;

Most Read Articles

Kannada
English summary
Harley-Davidson Exit India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X