ಜನವರಿಯಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ದೇಶದ ಅತಿ ದೊಡ್ಡ ದ್ವಿಚಕ್ರ ಉತ್ಪಾದನಾ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ 2021ರ ಜನವರಿಯಿಂದ ತಮ್ಮ ದ್ವಿಚಕ್ರ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಬ್ರ್ಯಾಂಡ್‌ನ ಸರಣಿಯಲ್ಲಿರುವ ಎಲ್ಲಾ ಮಾದರಿಗಳ ಬೆಲೆಯನ್ನು ಹೆಚ್ಚಿಸಲಾಗುತ್ತದೆ.

ಜನವರಿಯಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ವೆಚ್ಚ ನಿರ್ವಹಣೆಗಾಗಿ ಹಲವು ವಾಹನ ತಯಾರಕ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಿವಿಧ ಮಾದರಿಗಳ ಬೆಲೆಯನ್ನು ಹೆಚ್ಚಿಸಲು ಮುಂದಾಗಿದೆ. ಇದರ ನಡುವೆ ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದನ್ನು ಸರಿದೂಗಿಸಲು ಜನವರಿ 1 ರಿಂದ ತನ್ನ ಸರಣಿಯಲ್ಲಿರುವ ಎಲ್ಲಾ ಮಾದರಿಗಳ ಬೆಲೆ ಹೆಚ್ಚಿಸಲು ಹೀರೋ ಕಂಪನಿ ಮುಂದಾಗಿದೆ. ಹೀರೋ ಸರಣಿಯ ಎಲ್ಲಾ ಮಾದರಿಗಳ ಬೆಲೆಯನ್ನು ರೂ.1,500 ಗಳವರೆಗೆ ಹೆಚ್ಚಳವಾಗಲಿದೆ.

ಜನವರಿಯಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಹೀರೋ ಕಂಪನಿಯು ರೂ.1,500 ಗರಿಷ್ಠ ಬೆಲೆ ಏರಿಕೆಯನ್ನು ಉಲ್ಲೇಖಿಸಲಾಗಿದ್ದರೂ, ಮಾದರಿಗಳು ಮತ್ತು ಅವುಗಳ ರೂಪಾಂತರಗಳ ನಡುವಿನ ಬೆಲೆಗಳಲ್ಲಿ ಬದಲಾಣೆಗಳಿರುತ್ತದೆ. ಬೈಕುಗಳು ಮತ್ತು ಸ್ಕೂಟರ್ ಗಳ ನಿಖರವಾದ ಮಾದರಿವಾರು ಬೆಲೆ ಹೆಚ್ಚಳವನ್ನು ಸರಿಯಾದ ಸಮಯದಲ್ಲಿ ಘೋಷಿಸಲಾಗುವುದು ಎಂದು ಹೀರೋ ಎಂದು ಕಂಪನಿ ತಿಳಿಸಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಜನವರಿಯಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್ ಮತ್ತು ಲೋಹಗಳು ಸೇರಿದಂತ ಕಚ್ಚಾ ವಸ್ತುಗಳ ವೆಚ್ಚದಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿದೆ. ಹಲವು ಕಾರ್ಯಕ್ರಮಗಳ ಮೂಲಕ ಗ್ರಾಹಕರ ಮೇಲಿನ ಬೆಲೆಯ ಹೊರೆ ಕಡಿಮೆ ಮಾಡುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ ಎಂದು ಹೀರೋ ಕಂಪನಿ ಹೇಳಿದೆ.

ಜನವರಿಯಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ತಮ್ಮ ಸರಣಿಯಲ್ಲಿರುವ ದ್ವಿಚಕ್ರ ಮಾದರಿಗಳ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಹೀರೋ ದ್ವಿಚಕ್ರ ವಾಹನಗಳ ಬೆಲೆಯು ಹೆಚ್ಚಳವಾಗಲಿದೆ ಎಂದು ಕಂಪನಿ ಹೇಳಿದೆ.

MOST READ: ಅಕ್ಟೋಬರ್ ತಿಂಗಳಿನಲ್ಲಿ 8 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಜನವರಿಯಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಹೀರೋ ಮೋಟೊಕಾರ್ಪ್ 2020ರ ನವೆಂಬರ್‌ ತಿಂಗಳಲ್ಲಿ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. 2020ರ ನವೆಂಬರ್‌ ತಿಂಗಳಿನ ದ್ವಿಚಕ್ರ ಮಾರಟದಲ್ಲಿ ಹೀರೋ ಮೋಟೊಕಾರ್ಪ್ ಶೇ.14 ರಷ್ಟು ಏರಿಕೆ ದಾಖಲಿಸಿದೆ. ಹೀರೋ ಮೋಟೊಕಾರ್ಪ್ ಕಂಪನಿಯು ಕಳೆದ ತಿಂಗಳು 575,957 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು.

ಜನವರಿಯಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಕಳೆದ ವರ್ಷದ ನವೆಂಬರ್‌ ತಿಂಗಳಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು 505,994 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಹೀರೋ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪಾರುಪತ್ಯವನ್ನು ಮುಂದುವರಿಸಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಜನವರಿಯಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಕಳೆದ ವರ್ಷದ ನೆವೆಂಬರ್ ತಿಂಗಳ ಹೀರೋ ಬೈಕುಗಳ ಮಾರಾಟವನ್ನು ಹೋಲಿಸಿದರೇ ಈ ವರ್ಷದ ಅದೇ ಅವಧಿಯಲ್ಲಿ 10,781 ಯುನಿಟ್‌ಗಳು ಹೆಚ್ಚು ಮಾರಾಟವಾಗಿವೆ. ಇನ್ನು ಅದೇ ಅವಧಿಗೆ 15,134 ಯುನಿಟ್‌ ಗಳಷ್ಟು ಹೆಚ್ಚು ರಫ್ತು ಮಾಡಲಾಗಿದೆ.

ಜನವರಿಯಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಇನ್ನು 2020ರ ಅಕ್ಟೋಬರ್ ತಿಂಗಳಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ಒಟ್ಟು 8,06,848 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹೀರೋ 5,14,509 ಯುನಿಟ್‌ಗಳನ್ನು ಚಿಲ್ಲರೆ ಮಾರಾಟ ಮಾಡಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳ ಅವಧಿಯ ಮಾರಾಟವನ್ನು ಈ ವರ್ಷದ ಅದೇ ಅವಧಿಗೆ ಹೋಲಿಸಿದರೆ ಶೇ.35 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಜನವರಿಯಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಹೀರೋ ಮೋಟೊಕಾರ್ಪ್ ಈ ವರ್ಷದಲ್ಲಿ ಅಕ್ಟೋಬರ್ ತಿಂಗಳು ಗರಿಷ್ಠ ಮಾಸಿಕ ಮಾರಾಟವನ್ನು ದಾಖಲಿಸಿತು. ಇನ್ನು 2020ರ ಸೆಪ್ಟೆಂಬರ್ ತಿಂಗಳಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ಒಟ್ಟು 7,15,718 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು.

ಜನವರಿಯಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಆದರೆ ಹೀರೋ ಕಂಪನಿಯ ಸ್ಕೂಟರ್ ಗಳು ಮಾರಾಟದಲ್ಲಿ ಪ್ರತಿಸ್ಪರ್ಧಿಗಳದೆರು ಹಿನ್ನಡೆ ಅನುಭವಿಸುತ್ತಿತ್ತು. ಆದರೆ ಇತ್ತೀಚೀಗೆ ಹೀರೋ ಸ್ಕೂಟರ್‌ಗಳು ಜನಪ್ರಿಯತೆಯನ್ನು ಗಳಿಸುತ್ತಿವೆ. ಹೀರೋ ಕಂಪನಿಯು ಈ ವರ್ಷದಲ್ಲಿ ಅಕ್ಟೋಬರ್ ತಿಂಗಳು ಗರಿಷ್ಠ ಮಾಸಿಕ ಮಾರಾಟವನ್ನು ದಾಖಲಿಸಿತು.

ಜನವರಿಯಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ದೇಶದ ಅತಿ ದೊಡ್ಡ ದ್ವಿಚಕ್ರ ಉತ್ಪಾದನಾ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಸರಣಿಯಲ್ಲಿರುವ ಎಲ್ಲಾ ಮದರಿಗಳ ಬೆಲೆಯನ್ನು ಮುಂದಿನ ವರ್ಷದ ಆರಂಭದಿಂದಲೇ ಹೆಚ್ಚಿಸಲಿದೆ. . ಹೀರೋ ಮೋಟೊಕಾರ್ಪ್ ಮುಂದಿನ ತಿಂಗಳು ನಿಗದಿಯಾದ ಬೆಲೆ ಏರಿಕೆಗೆ ಮುಂಚಿತವಾಗಿ 2020ರ ಡಿಸೆಂಬರ್‌ನಲ್ಲಿ ಹೆಚ್ಚಿನ ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

Most Read Articles

Kannada
English summary
Hero MotoCorp Announce Increase In Prices From January 2021. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X