ಸೈಕಲ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೀರೋ ಸೈಕಲ್ಸ್

ಕಂಪನಿಯು ಇದುವರೆಗೂ 15 ಕೋಟಿ ಸೈಕಲ್‌ಗಳನ್ನು ಉತ್ಪಾದಿಸಿದೆ ಎಂದು ಹೀರೋ ಸೈಕಲ್ಸ್ ಪ್ರಕಟಿಸಿದೆ. ಈ ಮೂಲಕ ಸೈಕಲ್ ಉತ್ಪಾದನೆಯಲ್ಲಿ ಈ ಸಾಧನೆ ಮಾಡಿದ ವಿಶ್ವದ ಏಕೈಕ ಸೈಕಲ್ ಕಂಪನಿ ಎಂಬ ಹೆಗ್ಗಳಿಕೆಯನ್ನು ಹೀರೋ ಸೈಕಲ್ಸ್ ಪಡೆದಿದೆ.

ಸೈಕಲ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೀರೋ ಸೈಕಲ್ಸ್

ಹೀರೋ ಸೈಕಲ್ಸ್ 1956ರಿಂದ ಭಾರತದಲ್ಲಿ ಸೈಕಲ್ ಗಳನ್ನು ಉತ್ಪಾದಿಸುತ್ತಿದೆ. ಹೀರೋ ಸೈಕಲ್ಸ್ ಪಂಜಾಬ್‌ನ ಲುಧಿಯಾನ ನಗರದಲ್ಲಿರುವ ಉತ್ಪಾದನಾ ಘಟಕದಲ್ಲಿ ಸೈಕಲ್‌ಗಳನ್ನು ಉತ್ಪಾದಿಸುತ್ತದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೀರೋ ಸೈಕಲ್ಸ್ ಎಂಡಿ ಹಾಗೂ ಸಿಇಒ ಪಂಕಜ್ ಮುಂಜಾಲ್ ರವರು ಹೀರೋ ಕಂಪನಿಯು ಶೀಘ್ರದಲ್ಲೇ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಿದ್ದು, 2021ರಿಂದ ವರ್ಷಕ್ಕೆ 1 ಕೋಟಿ ಸೈಕಲ್‌ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಸೈಕಲ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೀರೋ ಸೈಕಲ್ಸ್

ತನ್ನ ಗುರಿಯನ್ನು ಈಡೇರಿಸಿಕೊಳ್ಳುವುದಕ್ಕಾಗಿ ಕಂಪನಿಯು ಲುಧಿಯಾನ ಘಟಕದ ಉತ್ಪಾದಕ ಸಾಮರ್ಥ್ಯವನ್ನು ವಿಸ್ತರಿಸುತ್ತಿದೆ. ಜೊತೆಗೆ ಉತ್ಪಾದನಾ ಘಟಕದಲ್ಲಿ ಹೊಸ ತಂತ್ರಜ್ಞಾನದ ಯಂತ್ರಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸೈಕಲ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೀರೋ ಸೈಕಲ್ಸ್

ಜನರ ಅಗತ್ಯಕ್ಕೆ ಅನುಗುಣವಾಗಿ ನಾವು ಸೈಕಲ್‌ಗಳನ್ನು ಉತ್ಪಾದಿಸುತ್ತಿದ್ದೇವೆ ಎಂದು ಪಂಕಜ್ ಮುಂಜಾಲ್ ಹೇಳಿದ್ದಾರೆ. ಕಂಪನಿಯು ಕಾಲ ಕಾಲಕ್ಕೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ನಾವು ಭಾರತೀಯ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ವಿಶ್ವಾಸಾರ್ಹವಾದ ಸೈಕಲ್‌ಗಳನ್ನು ತಲುಪಿಸುವ ಭರವಸೆಯನ್ನು ಉಳಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಸೈಕಲ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೀರೋ ಸೈಕಲ್ಸ್

ಭಾರತದ ಹೊರಗೂ ಸಹ ಕಂಪನಿಯು ತನ್ನ ಅಸ್ತಿತ್ವವನ್ನು ಸಾಧಿಸುತ್ತಿದೆ ಎಂದು ಅವರು ಹೇಳಿದರು. ಹೀರೋ ಸೈಕಲ್ಸ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಜಾಗತಿಕ ಬ್ರಾಂಡ್ ಆಗಿ ಹೊರಹೊಮ್ಮುತ್ತಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ರವರು ಹೀರೋ ಸೈಕಲ್‌ನಲ್ಲಿ ಸವಾರಿ ಮಾಡಿದ್ದರು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸೈಕಲ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೀರೋ ಸೈಕಲ್ಸ್

ಪಂಕಜ್ ಮುಂಜಾಲ್ ರವರು ಚೀನಾದಿಂದ ಆಮದಾಗುವ ವಸ್ತುಗಳನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದ್ದರು. ಚೀನಾದೊಂದಿಗೆ ಮಾಡಿಕೊಂಡಿದ್ದ ರೂ.900 ಕೋಟಿಗಳ ಒಪ್ಪಂದವನ್ನು ಅವರು ರದ್ದುಪಡಿಸಿದ್ದಾರೆ. ಇದರ ಬದಲಿಗೆ ಕಂಪನಿಯು ಭಾರತದಲ್ಲಿಯೇ ಅಗತ್ಯ ವಸ್ತುಗಳ ಉತ್ಪಾದನೆಯನ್ನು ಆರಂಭಿಸುತ್ತಿದೆ.

ಸೈಕಲ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೀರೋ ಸೈಕಲ್ಸ್

ಸೈಕಲ್ ತಯಾರಿಕೆಗೆ ಬೇಕಾಗಿರುವ ಉಪಕರಣಗಳಿಗಾಗಿ ಹೀರೋ ಸೈಕಲ್ಸ್ ಸಣ್ಣ ಕಂಪನಿಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಈ ಕಾರಣಕ್ಕೆ ಕಂಪನಿಯು ಅನೇಕ ಕಂಪನಿಗಳ ಜೊತೆಗೆ ಒಪ್ಪಂದಗಳನ್ನು ಮಾಡಿಕೊಂಡಿದೆ.

Most Read Articles

Kannada
English summary
Hero cycles achieves new milestone in bicycle production. Read in Kannada.
Story first published: Thursday, August 6, 2020, 12:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X