Just In
Don't Miss!
- News
Video: ದೆಹಲಿಯಲ್ಲಿ ರೈತನ ಸಾವಿನ ಭಯಾನಕ ದೃಶ್ಯ!
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Movies
ರಾಜಮೌಳಿಯ RRR ಚಿತ್ರಕ್ಕೆ ಎದುರಾಗಿ ಅಜಯ್ ದೇವಗನ್ ಸಿನಿಮಾ?
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಹೀರೋ ಡೆಸ್ಟಿನಿ ಸ್ಕೂಟರ್
ದೇಶದ ಅತಿ ದೊಡ್ಡ ದ್ವಿಚಕ್ರ ಉತ್ಪಾದನಾ ಕಂಪನಿಯಾದ ಹೀರೋ ಮೋಟೊಕಾರ್ಪ್ 2020ರ ಅಕ್ಟೋಬರ್ ತಿಂಗಳಲ್ಲಿ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆಯನ್ನು ಸಾಧಿಸಿದೆ. ಹೀರೋ ಕಂಪನಿಯು ಭಾರತೀಯ ಮಾರುಕಟ್ಟೆಯ ದ್ವಿಚಕ್ರ ವಿಭಾಗದಲ್ಲಿ ತನ್ನ ಪಾರುಪತ್ಯವನ್ನು ಮುಂದುವರೆಸಿದೆ.

ಆದರೆ ಹೀರೋ ಕಂಪನಿಯ ಸ್ಕೂಟರ್ ಗಳು ಮಾರಾಟದಲ್ಲಿ ಪ್ರತಿಸ್ಪರ್ಧಿಗಳದೆರು ಹಿನ್ನಡೆ ಅನುಭವಿಸುತ್ತಿತ್ತು. ಆದರೆ ಇತ್ತೀಚೀಗೆ ಹೀರೋ ಸ್ಕೂಟರ್ಗಳು ಜನಪ್ರಿಯತೆಯನ್ನು ಗಳಿಸುತ್ತಿವೆ. 2020ರ ಅಕ್ಟೋಬರ್ ತಿಂಗಳಲ್ಲಿ ಹೀರೋ ಡೆಸ್ಟಿನಿ 125 ಸ್ಕೂಟರ್ ಒಟ್ಟು 26,714 ಯುನಿಟ್ಗಳು ಮಾರಾಟವಾಗಿವೆ. ಇದು ವರ್ಷದಿಂದ ವರ್ಷಕ್ಕೆ ಶೇ.157.58 ರಷ್ಟು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಹೀರೋ ಡೆಸ್ಟಿನಿ 10,371 ಯುನಿಟ್ಗಳು ಮಾರಾಟವಾಗಿತ್ತು. ಇನ್ನು ಈ ಡೆಸ್ಟಿನಿ 125 ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ.

ಹೀರೋ ಮೋಟೊಕಾರ್ಪ್ ಕಂಪನಿಯು ಡೆಸ್ಟಿನಿ 125 ಸ್ಕೂಟರ್ ಅನ್ನು 2018ರ ಕೊನೆಯಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು. ಸ್ವದೇಶೀ ವಾಹನ ತಯಾರಕರಾದ ಹೀರೋ ತನ್ನ ಡೆಸ್ಟಿನಿ 125 ಸ್ಕೂಟರ್ ಅನ್ನು ಐ3 ಎಸ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವನ್ನು ಒಳಗೊಂಡಿರುವ ಮೊದಲ ಸ್ಕೂಟರ್ ಆಗಿ ಪರಿಚಯಿಸಿತು.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್ಟಾರ್ಕ್ 125 ಸ್ಕೂಟರ್

ಬಿಎಸ್-6 ಡೆಸ್ಟಿನಿ ಸ್ಕೂಟರ್ ಎಲ್ಎಕ್ಸ್ ಮತ್ತು ವಿಎಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ಎಂಟ್ರಿ ಲೆವೆಲ್ ಎಲ್ಎಕ್ಸ್ ರೂಪಾಂತರದ ಬೆಲೆಯು ರೂ.66,310ಗಳಾದರೆ, ಟಾಪ್-ಸ್ಪೆಕ್ ವಿಎಕ್ಸ್ ರೂಪಾಂತರದ ಬೆಲೆಯು ರೂ.69,700 ಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್ 124 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಯಲ್-ಇಂಜೆಕ್ಟ್ ಎಂಜಿನ್ ಹೊಂದಿದೆ. ಈ ಎಂಜಿನ್ 7,000 ಆರ್ಪಿಎಂನಲ್ಲಿ 9 ಬಿಹೆಚ್ಪಿ ಪವರ್ ಮತ್ತು 5,500 ಆರ್ಪಿಎಂನಲ್ಲಿ 10.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್

ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ ಶೇ.11 ಮೈಲೇಜ್ ಅಂಕಿ ಅಂಶಗಳು ಹೆಚ್ಚಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಬಿಎಸ್-6 ಡೆಸ್ಟಿನಿ ಸ್ಕೂಟರ್ ನಲ್ಲಿ ಸ್ಟಾರ್ಟ್/ಸ್ಟಾಪ್ ಟೆಕ್ನಾಲಜಿ, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್-ಟೆಕ್ಸ್ಚರ್ ಸೀಟುಗಳು, ಅಲಾಯ್ ವ್ಹೀಲ್ಸ್, ಸುತ್ತಲೂ ಕ್ರೋಮ್ ಎಕ್ಸಟ್ ಗಳು, ಮೊಬೈಲ್ ಚಾರ್ಜಿಂಗ್ ಮತ್ತು ಬೂಟ್ ಲ್ಯಾಂಪ್ ಅನ್ನು ಒಳಗೊಂಡಿದೆ.
MOST READ: ಅಕ್ಟೋಬರ್ ತಿಂಗಳಿನಲ್ಲಿ 8 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಈ ಸ್ಕೂಟರಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಷನ್ ಮತ್ತು ಹಿಂಭಾಗದಲ್ಲಿ ಹೈಡ್ರಾಲಿಕ್ ಸಸ್ಪೆಂಷನ್ ಸೆಟಪ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ ನಲ್ಲಿ ಸುರಕ್ಷತೆಗಾಗಿ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂನಿಂದ ಬೆಂಬಲಿತವಾಗಿ ಎರಡು ತುದಿಗಳಲ್ಲಿ ಡ್ರಮ್ ಬ್ರೇಕ್ಗಳನ್ನು ಹೊಂದಿದೆ.

ಬಿಎಸ್-6 ಹೀರೋ ಡೆಸ್ಟಿನಿ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 125 ಸ್ಕೂಟರ್ ಗೆ ಪೈಪೋಟಿ ನೀಡುತ್ತದೆ. 2020ರ ಅಕ್ಟೋಬರ್ ತಿಂಗಳಲ್ಲಿ ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆಯನ್ನು ಕಂಡಿದೆ.