ದುಬಾರಿಯಾಯ್ತು ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್

ದೇಶದ ಅತಿದೊಡ್ಡ ಬೈಕ್ ಉತ್ಪಾದನಾ ಸಂಸ್ಥೆಯಾಗಿರುವ ಹೀರೋ ಮೋಟೊಕಾರ್ಪ್ ತನ್ನ ಬಿಎಸ್-6 ಡೆಸ್ಟಿನಿ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದೆ. ಡೆಸ್ಟಿನಿ ಸ್ಕೂಟರ್‌ನ ಎರಡು ರೂಪಾಂತರಗಳಿಗೂ ರೂ.1,300 ಗಳವರೆಗೆ ಬೆಲೆಯನ್ನು ಹೆಚ್ಚಿಸಲಾಗಿದೆ.

ದುಬಾರಿಯಾಯ್ತು ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್

ಬಿಎಸ್-6 ಡೆಸ್ಟಿನಿ ಸ್ಕೂಟರ್ ಎಲ್ಎಕ್ಸ್ ಮತ್ತು ವಿಎಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಎಂಟ್ರಿ ಲೆವೆಲ್ ಎಲ್‌ಎಕ್ಸ್ ರೂಪಾಂತರದ ಬೆಲೆಯನ್ನು ರೂ.1,000 ಗಳವರೆಗೆ ಹೆಚ್ಚಿಸಿದ. ಪ್ರಸ್ತುತ ಈ ಎಲ್‌ಎಕ್ಸ್ ರೂಪಾಂತರ ಸ್ಕೂಟರ್ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.65,310 ಗಳಾಗಿದೆ. ಇನ್ನು ಟಾಪ್-ಸ್ಪೆಕ್ ವಿಎಕ್ಸ್ ರೂಪಾಂತರದ ಬೆಲೆಯನ್ನು ರೂ.1,300 ಗಳವರೆಗೆ ಹೆಚ್ಚಿಸಿದೆ.

ದುಬಾರಿಯಾಯ್ತು ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್

ಪ್ರಸ್ತುತ ಈ ಟಾಪ್-ಸ್ಪೆಕ್ ಸ್ಕೂಟರ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.68,100 ಗಳಾಗಿದೆ. ಇತ್ತೀಚಿನ ಬೆಲೆ ಏರಿಕೆಯ ಹೊರತಾಗಿ, ಕಂಪನಿಯು ಬಿಎಸ್-6 ಡೆಸ್ಟಿನಿ 125 ಸ್ಕೂಟರ್‌ನ ಅನ್ನು ತನ್ನ ಹಿಂದಿನ ಮಾದರಿಗಿಂತ ರೂ.7,000 ಅಧಿಕ ಬೆಲೆಯಲ್ಲಿ ಬಿಡುಗಡೆಗೊಳಿಸಿದ್ದರು.

MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ದುಬಾರಿಯಾಯ್ತು ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್

ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್ 124 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಯಲ್-ಇಂಜೆಕ್ಟ್ ಎಂಜಿನ್ ಹೊಂದಿದೆ. ಈ ಎಂಜಿನ್ 7,000 ಆರ್‌ಪಿಎಂನಲ್ಲಿ 9 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 10.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ದುಬಾರಿಯಾಯ್ತು ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್

ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ ಶೇ.11 ಮೈಲೇಜ್ ಅಂಕಿ ಅಂಶಗಳು ಹೆಚ್ಚಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್ ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ದುಬಾರಿಯಾಯ್ತು ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್

ಬಿಎಸ್-6 ಡೆಸ್ಟಿನಿ ಸ್ಕೂಟರ್ ನಲ್ಲಿ ಸ್ಟಾರ್ಟ್/ಸ್ಟಾಪ್ ಟೆಕ್ನಾಲಜಿ, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್-ಟೆಕ್ಸ್ಚರ್ ಸೀಟುಗಳು, ಅಲಾಯ್ ವ್ಹೀಲ್ಸ್, ಸುತ್ತಲೂ ಕ್ರೋಮ್ ಎಕ್ಸಟ್ ಗಳು, ಮೊಬೈಲ್ ಚಾರ್ಜಿಂಗ್ ಮತ್ತು ಬೂಟ್ ಲ್ಯಾಂಪ್ ಅನ್ನು ಒಳಗೊಂಡಿದೆ;

ದುಬಾರಿಯಾಯ್ತು ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್

ಇನ್ನು ಈ ಸ್ಕೂಟರ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಷನ್ ಮತ್ತು ಹಿಂಭಾಗದಲ್ಲಿ ಹೈಡ್ರಾಲಿಕ್ ಸಸ್ಪೆಂಷನ್ ಹೊಂದಿದೆ. ಇನ್ನು ಈ ಸ್ಕೂಟರ್ ನಲ್ಲಿ ಸುರಕ್ಷತೆಗಾಗಿ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂನಿಂದ ಬೆಂಬಲಿತವಾಗಿ ಎರಡು ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ದುಬಾರಿಯಾಯ್ತು ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್

ಇದರೊಂದಿಗೆ ಹೀರೋ ಮೋಟೊಕಾರ್ಪ್ ಕಂಪನಿಯು ಕಳೆದ ತಿಂಗಳು ಬಿಎಸ್-6 ಸ್ಪ್ಲೆಂಡರ್ ಐಸ್ಮಾರ್ಟ್ ಬೈಕಿನ ಬೆಲೆಯನ್ನು ರೂ.2,200 ರಷ್ಟು ಹೆಚ್ಚಿಸಿದ್ದರು. ಇದೀಗ ಮತ್ತೆ ಈ ಬೈಕಿಗೆ ರೂ,800 ರಷ್ಟು ಬೆಲೆಯನ್ನು ಹೆಚ್ಚಿಸಿದೆ. ಬೆಲೆಯನ್ನು ಹೆಚ್ಚಿಸಿದ ಬಳಿಕ ಪ್ರಸ್ತುತ ಬಿಎಸ್-6 ಸ್ಪ್ಲೆಂಡರ್ ಐಸ್ಮಾರ್ಟ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.67,900ಗಳಾಗಿದೆ.

ದುಬಾರಿಯಾಯ್ತು ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್

ಹೀರೋ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಸ್-6 ಡೆಸ್ಟಿನಿ ಸ್ಕೂಟರ್ ಬಿಡುಗಡೆಗೊಳಿಸಿದ ಬಳಿಕ ಮೊದಲ ಬಾರಿಗೆ ಬೆಲೆಯನ್ನು ಹೆಚ್ಚಿಸಿದೆ. ಬಿಎಸ್-6 ಹೀರೋ ಡೆಸ್ಟಿನಿ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 125 ಸ್ಕೂಟರ್ ಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Hero Destini 125 Price Hike Announced On Both Variants: Here Are All The Details. Read in Kannada.
Story first published: Tuesday, May 12, 2020, 19:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X