ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಮೇಲೆ ಅತ್ಯುತ್ತಮ ಆಫರ್

ಹೀರೋ ಎಲೆಕ್ಟ್ರಿಕ್ ಕಂಪನಿಯು ದೀಪಾವಳಿ ವಿಶೇಷತೆಗಾಗಿ ಗ್ರಾಹಕರಿಗೆ ಹೊಸ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಆಯ್ದ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಮೇಲೆ ಅತ್ಯುತ್ತಮ ಆಫರ್ ನೀಡುತ್ತಿದೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಮೇಲೆ ಅತ್ಯುತ್ತಮ ಆಫರ್

ದೀಪಾವಳಿ ಆಫರ್‌ನಲ್ಲಿ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸುವ ಗ್ರಾಹಕರಿಗೆ ರೂ. 5 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ. 1 ಸಾವಿರ ಅಮೆಜಾನ್ ಗಿಫ್ಟ್ ವೋಚರ್ ಪಡೆದುಕೊಳ್ಳಬಹುದಾಗಿದ್ದು, ಸಾಮಾನ್ಯ ಸ್ಕೂಟರ್ ಅಥವಾ ಬೈಕ್ ಮಾದರಿಗಳನ್ನು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಎಕ್ಸ್‌ಚೆಂಜ್ ಮಾಡಿಕೊಳ್ಳಬಹುದಾಗಿದೆ. ಹೀರೋ ನಿರ್ಮಾಣದ ಆಪ್ಟಿಮಾ ಎಚ್‌ಎಕ್ಸ್, ಎನ್‌ವೈಎಕ್ಸ್ ಎಚ್‌ಎಕ್ಸ್ ಇವಿ ಸ್ಕೂಟರ್ ಹೊರತುಪಡಿಸಿ ಇನ್ನುಳಿದ ಎಲ್ಲಾ ಇವಿ ಸ್ಕೂಟರ್ ಮಾದರಿಗಳಿಗೂ ಹೊಸ ಆಫರ್ ಅನ್ವಯಿಸುತ್ತದೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಮೇಲೆ ಅತ್ಯುತ್ತಮ ಆಫರ್

ಹೀರೋ ಎಲೆಕ್ಟ್ರಿಕ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಕಂಫರ್ಟ್ ಸ್ಪೀಡ್, ಸಿಟಿ ಸ್ಪೀಡ್ ಮತ್ತು ಎಕ್ಸೆಂಡ್ ಎಂಬ ಮೂರು ಮಾದರಿಗಳಲ್ಲಿ 11 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಅತಿ ಕಡಿಮೆ ಬೆಲೆಯೊಂದಿಗೆ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿವೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಮೇಲೆ ಅತ್ಯುತ್ತಮ ಆಫರ್

ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಆವೃತ್ತಿಗಳಿಗೆ ಪೈಪೋಟಿಯಾಗಿ ಸಿಟಿ ಸೆಗ್ಮೆಂಟ್ ಅಭಿವೃದ್ದಿಪಡಿಸಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಕಂಫರ್ಟ್ ಸ್ಪೀಡ್, ಎಕ್ಸೆಂಡ್ ರೇಂಜ್ ಮಾದರಿಗಳೊಂದಿಗೆ ಇದೀಗ ಸಿಟಿ ಸ್ಪೀಡ್ ಮಾದರಿಗಳನ್ನು ಹೊಸದಾಗಿ ಅಭಿವೃದ್ದಿಗೊಳಿಸಿದೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಮೇಲೆ ಅತ್ಯುತ್ತಮ ಆಫರ್

ಸಿಟಿ ಸೆಗ್ಮೆಂಟ್‌ನಲ್ಲಿ ಆಪ್ಟಿಮಾ-ಹೆಚ್ಎಕ್ಸ್, ನೆಕ್ಸ್-ಹೆಚ್ಎಕ್ಸ್ ಮತ್ತು ಫೋಟಾನ್-ಹೆಚ್ಎಕ್ಸ್ ಮಾದರಿಗಳು ಖರೀದಿಗೆ ಲಭ್ಯವಿದ್ದು, ಹೊಸ ಸೆಗ್ಮೆಂಟ್ ಸ್ಕೂಟರ್‌ಗಳು ರೂ. 57,570ರಿಂದ ಆರಂಭಗೊಳ್ಳಲಿವೆ. ಮಾರುಕಟ್ಟೆಯಲ್ಲಿ ಸದ್ಯ ದುಬಾರಿ ಬೆಲೆಗೆ ಮಾತ್ರವೇ ಉತ್ತಮ ಫೀಚರ್ಸ್‌ನೊಂದಿಗೆ ಹೆಚ್ಚು ಮೈಲೇಜ್ ರೇಂಜ್ ಇವಿ ವಾಹನಗಳು ಮಾರಾಟವಾಗುತ್ತಿದ್ದರೆ ಮತ್ತು ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಇವಿ ವಾಹನಗಳು ಕಡಿಮೆ ವೇಗದೊಂದಿಗೆ ಸಾಧಾರಣ ಮೈಲೇಜ್ ರೇಂಜ್ ಹೊಂದಿವೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಮೇಲೆ ಅತ್ಯುತ್ತಮ ಆಫರ್

ಈ ಕುರಿತು ಹಲವಾರು ಮಾರುಕಟ್ಟೆ ಅಧ್ಯಯನ ಮಾಡಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಬಜೆಟ್ ಬೆಲೆಯಲ್ಲಿಯೇ ಉತ್ತಮ ಮೈಲೇಜ್ ರೇಂಜ್ ಒದಗಿಸುವ ಪ್ರಯತ್ನದೊಂದಿಗೆ ಹೊಸದಾಗಿ ಸಿಟಿ ಸೆಗ್ಮೆಂಟ್ ಪರಿಚಯಿಸಿದ್ದು, ಸಿಟಿ ಸೆಗ್ಮೆಂಟ್‌ನಲ್ಲಿರುವ ಇವಿ ಸ್ಕೂಟರ್‌ಗಳು 70 ಕಿ.ಮೀ ನಿಂದ 210 ಕಿ.ಮೀ ಮೈಲೇಜ್ ಹೊಂದಿರಲಿವೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಮೇಲೆ ಅತ್ಯುತ್ತಮ ಆಫರ್

ಹಾಗೆಯೇ ಹೊಸ ಸೆಗ್ಮೆಂಟ್ ಸ್ಕೂಟರ್‌ಗಳನ್ನು ನಗರ ಪ್ರದೇಶಗಳಲ್ಲಿನ ಏರಿತಗಳಲ್ಲಿ ಸುಲಭವಾಗಿ ರೈಡ್‌ ಒದಗಿಸಲು ಎಂಜಿನ್ ದಕ್ಷತೆಯನ್ನು ಹೆಚ್ಚಿಸಲಾಗಿದ್ದು, ಇವು ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರ ಪ್ರಮುಖ ಆಕರ್ಷಣೆಯಾಗಲಿದೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಮೇಲೆ ಅತ್ಯುತ್ತಮ ಆಫರ್

ಹೀರೋ ಎಲೆಕ್ಟ್ರಿಕ್ ಕಂಪನಿಯು ಅಭಿವೃದ್ದಿಪಡಿಸಿರುವ ಹೊಸ ಸಿಟಿ ಸೆಗ್ಮೆಂಟ್ ಮಾದರಿಗಳು ಇದೀಗ ದೇಶದ ಪ್ರಮುಖ ನಗರಗಳಲ್ಲಿ 200ಕ್ಕೂ ಡೀಲರ್ಸ್ ಬಳಿ ಖರೀದಿಗೆ ಲಭ್ಯವಿದ್ದು, ಬಜೆಟ್ ಬೆಲೆಯಲ್ಲಿ ಉತ್ತಮ ಫೀಚರ್ಸ್‌ಗಳೊಂದಿಗೆ ಹೆಚ್ಚು ಮೈಲೇಜ್ ರೇಂಜ್ ಮಾದರಿಗಳನ್ನು ಬಯಸುವ ಗ್ರಾಹಕರಿಗೆ ಇವು ಅತ್ಯುತ್ತಮ ಆಯ್ಕೆ ಎನ್ನಬಹುದು.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಮೇಲೆ ಅತ್ಯುತ್ತಮ ಆಫರ್

ಇನ್ನು ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಮಟ್ಟದ ಸಬ್ಸಡಿ, ಶೂನ್ಯ ತೆರಿಗೆ ಮತ್ತು ಉಚಿತ ನೋಂದಣಿಯಿಂದಾಗಿ ಇವಿ ವಾಹನಗಳ ಬೆಲೆಯು ಇತರೆ ರಾಜ್ಯಗಳಿಂತಲೂ ಇನ್ನು ಅಗ್ಗವಾಗಿದ್ದು, ಇತರೆ ರಾಜ್ಯಗಳಲ್ಲಿ ಇವಿ ವಾಹನ ಖರೀದಿಸುವ ಗ್ರಾಹಕರಿಗೂ ಕೇಂದ್ರ ಸರ್ಕಾರದ ಫೇಮ್ 2 ಯೋಜನೆ ಅಡಿ ಮಾತ್ರವೇ ಸಬ್ಸಡಿ ಮತ್ತು ಜಿಎಸ್‌ಟಿ ವಿನಾಯ್ತಿ ಲಭ್ಯವಿದೆ.

Most Read Articles

Kannada
English summary
Hero Electric Announces Diwali Offers For Selected Models. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X