ಆಪ್ಟಿಮಾ ಸ್ಕೂಟರಿನ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಿದ ಹೀರೊ ಎಲೆಕ್ಟ್ರಿಕ್

ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾದ ಹೀರೊ ಎಲೆಕ್ಟ್ರಿಕ್ ತನ್ನ ಆಪ್ಟಿಮಾ ಹೆಚ್‌ಎಕ್ಸ್ ಸಿಟಿ ಸ್ಪೀಡ್ ಇ-ಸ್ಕೂಟರಿನ ಬೆಲೆಯನ್ನು ರೂ.14,390ಗಳಷ್ಟು ಇಳಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.71,950ಗಳಾಗಿತ್ತು.

ಆಪ್ಟಿಮಾ ಸ್ಕೂಟರಿನ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಿದ ಹೀರೊ ಎಲೆಕ್ಟ್ರಿಕ್

ಬೆಲೆ ಇಳಿಕೆಯ ನಂತರ ಈ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.57,560ಗಳಾಗಿದೆ. ಇದರಿಂದಾಗಿ ಹೀರೋ ಆಪ್ಟಿಮಾ ಹೆಚ್‌ಎಕ್ಸ್ ಸಿಟಿ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಭಾರತದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಈ ಬೆಲೆ ಇಳಿಕೆಯು ಸೀಮಿತ ಅವಧಿಯವರೆಗೆ ಮಾತ್ರ ಇರಲಿದೆ.

ಆಪ್ಟಿಮಾ ಸ್ಕೂಟರಿನ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಿದ ಹೀರೊ ಎಲೆಕ್ಟ್ರಿಕ್

ಹೀರೋ ಆಪ್ಟಿಮಾ ಹೆಚ್‌ಎಕ್ಸ್ ಸಿಟಿ ಸ್ಪೀಡ್ ಇ-ಸ್ಕೂಟರ್ 550 ವ್ಯಾಟ್ ಎಲೆಕ್ಟ್ರಿಕ್ ಮೋಟರ್ ಹಾಗೂ 51.2 ವೋಲ್ಟ್ ನ / 30 ಆಂಪಿಯರ್ ಲಿಥಿಯಂ-ಐರನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಆಪ್ಟಿಮಾ ಸ್ಕೂಟರಿನ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಿದ ಹೀರೊ ಎಲೆಕ್ಟ್ರಿಕ್

ಈ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ 42 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಈ ಸ್ಕೂಟರಿನಲ್ಲಿರುವ ಬ್ಯಾಟರಿಯು 5 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಸ್ಕೂಟರ್ ಸುಮಾರು 82 ಕಿ.ಮೀಗಳವರೆಗೆ ಚಲಿಸುತ್ತದೆ.

ಆಪ್ಟಿಮಾ ಸ್ಕೂಟರಿನ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಿದ ಹೀರೊ ಎಲೆಕ್ಟ್ರಿಕ್

73 ಕೆ.ಜಿ ತೂಕವನ್ನು ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವೈಟ್, ಗ್ರೇ ಹಾಗೂ ಸಯಾನ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹೀರೋ ಎಲೆಕ್ಟ್ರಿಕ್ ಕಂಪನಿಯು ಆಪ್ಟಿಮಾ ಹೆಚ್‌ಎಕ್ಸ್ ಸಿಟಿ ಸ್ಪೀಡ್ ಇ-ಸ್ಕೂಟರಿನ ಮೇಲೆ ಮೂರು ವರ್ಷಗಳ ವಾರಂಟಿಯನ್ನು ನೀಡುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಆಪ್ಟಿಮಾ ಸ್ಕೂಟರಿನ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಿದ ಹೀರೊ ಎಲೆಕ್ಟ್ರಿಕ್

ಈ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಿಂಗಳಿಗೆ ರೂ.2,999ಗಳ ಚಂದಾದಾರಿಕೆ ಯೋಜನೆಯ ಮೂಲಕ ಖರೀದಿಸಬಹುದು. ಈ ಯೋಜನೆಗಾಗಿ ಕಂಪನಿಯು ಆಟೋವರ್ಡ್ ಟೆಕ್ನಾಲಜೀಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಆಪ್ಟಿಮಾ ಸ್ಕೂಟರಿನ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಿದ ಹೀರೊ ಎಲೆಕ್ಟ್ರಿಕ್

ಇದರ ಜೊತೆಗೆ ಹೀರೋ ಎಲೆಕ್ಟ್ರಿಕ್ ಕಂಪನಿಯು ಮುಂಬೈ ಮೂಲದ ಹಣಕಾಸು ಸಂಸ್ಥೆಯಾದ ಒಡಿಒ ಕ್ಯಾಪಿಟಲ್ ಜೊತೆಗೆ ಪಾಲುದಾರಿಕೆಯನ್ನು ಹೊಂದಿದ್ದು, ತನ್ನ ಉತ್ಪನ್ನಗಳನ್ನು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಆಪ್ಟಿಮಾ ಸ್ಕೂಟರಿನ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಿದ ಹೀರೊ ಎಲೆಕ್ಟ್ರಿಕ್

ಹೀರೋ ಎಲೆಕ್ಟ್ರಿಕ್ ಕಂಪನಿಯ ಪ್ರಕಾರ, ಈ ಪಾಲುದಾರಿಕೆಯು ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಣಕಾಸಿನ ಆಯ್ಕೆಗಳಿಗಿಂತ 30%ನಷ್ಟು ಹೆಚ್ಚಿನ ಹಣವನ್ನು ಆಪ್ಟಿಮಾ ಹೆಚ್‌ಎಕ್ಸ್ ಸಿಟಿ ಸ್ಪೀಡ್ ಇ-ಸ್ಕೂಟರ್‌ನಲ್ಲಿ ಉಳಿಸುತ್ತದೆ.

Most Read Articles
 
Kannada
English summary
Hero electric decreases the price of Optima scooter. Read in Kannada.
Story first published: Wednesday, October 14, 2020, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X