ಹೊಸ ಆನ್‌ಲೈನ್ ಬುಕ್ಕಿಂಗ್ ಯೋಜನೆ ಆರಂಭಿಸಿದ ಹೀರೋ ಎಲೆಕ್ಟ್ರಿಕ್

ಸದ್ಯಕ್ಕೆ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡುತ್ತಿವೆ. ಇದರಿಂದ ಆಟೋ ಮೊಬೈಲ್ ಕಂಪನಿಗಳು ಮಾತ್ರವಲ್ಲದೇ ಗ್ರಾಹಕರು ಸಹ ಅನೇಕ ಪ್ರಯೋಜನಗಳನ್ನು ಪಡೆಯಲಿದ್ದಾರೆ.

ಹೊಸ ಆನ್‌ಲೈನ್ ಬುಕ್ಕಿಂಗ್ ಯೋಜನೆ ಆರಂಭಿಸಿದ ಹೀರೊ ಎಲೆಕ್ಟ್ರಿಕ್

ಗ್ರಾಹಕರು ಶೋರೂಂಗಳಿಗೆ ಭೇಟಿ ನೀಡದೇ ಮನೆಯಲ್ಲಿಯೇ ಕುಳಿತು ವಾಹನಗಳನ್ನು ಖರೀದಿಸಬಹುದು. ಕರೋನಾ ವೈರಸ್ ಕಾರಣದಿಂದಾಗಿ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಾಹನಗಳನ್ನು ಮಾರಾಟ ಮಾಡುತ್ತಿವೆ. ಈಗ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೊ ಎಲೆಕ್ಟ್ರಿಕ್ ಸಹ ಆನ್‌ಲೈನ್‌ನಲ್ಲಿ ವಾಹನಗಳನ್ನು ಮಾರಾಟ ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ, ಕಂಪನಿಯು ಹೊಸ ಯೋಜನೆಗಳನ್ನು ಬಿಡುಗಡೆಗೊಳಿಸಿದೆ.

ಹೊಸ ಆನ್‌ಲೈನ್ ಬುಕ್ಕಿಂಗ್ ಯೋಜನೆ ಆರಂಭಿಸಿದ ಹೀರೊ ಎಲೆಕ್ಟ್ರಿಕ್

ಹೀರೊ ಎಲೆಕ್ಟ್ರಿಕ್ ಪ್ರಾರಂಭಿಸಿರುವ ಈ ಅಭಿಯಾನಕ್ಕೆ ನಿಮ್ಮ ಗಾಳಿಯನ್ನು ಸ್ವಚ್ವವಾಗಿರಿಸಿ ಎಂಬ ಟ್ಯಾಗ್ ಲೈನ್ ನೀಡಲಾಗಿದೆ. ವಿಶ್ವ ಪರಿಸರ ದಿನಾಚರಣೆಗೂ ಮುಂಚೆ ಕಂಪನಿಯು ಈ ಅಭಿಯಾನವನ್ನು ಆರಂಭಿಸಿದೆ. ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕಾಗಿ ಕಂಪನಿಯು ಈ ಅಭಿಯಾನವನ್ನು ಆರಂಭಿಸಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಹೊಸ ಆನ್‌ಲೈನ್ ಬುಕ್ಕಿಂಗ್ ಯೋಜನೆ ಆರಂಭಿಸಿದ ಹೀರೊ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಜನರನ್ನು ಆಕರ್ಷಿಸುವ ಸಲುವಾಗಿ, ಆನ್‌ಲೈನ್‌ನಲ್ಲಿ ವಾಹನವನ್ನು ಬುಕ್ಕಿಂಗ್ ಮಾಡುವ ಪ್ರತಿ 50ನೇ ಗ್ರಾಹಕರಿಗೆ ಆ ವಾಹನವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುವುದು ಎಂದು ಕಂಪನಿ ಹೇಳಿದೆ. ಆದರೆ ಇದಕ್ಕೆ ಕೆಲವು ನಿಯಮಗಳು ಅನ್ವಯವಾಗಲಿವೆ.

ಹೊಸ ಆನ್‌ಲೈನ್ ಬುಕ್ಕಿಂಗ್ ಯೋಜನೆ ಆರಂಭಿಸಿದ ಹೀರೊ ಎಲೆಕ್ಟ್ರಿಕ್

ಎಲ್ಲಾ ಆನ್‌ಲೈನ್ ಗ್ರಾಹಕರಿಗೆ ಪ್ರತಿ ವಾಹನ ಖರೀದಿಯ ಮೇಲೆ ರೂ.3,000ಗಳ ನಗದು ರಿಯಾಯಿತಿ ನೀಡಲಾಗುವುದೆಂದು ಕಂಪನಿ ಹೇಳಿದೆ. ಕಂಪನಿಯ ಈ ಅಭಿಯಾನವು ಸೀಮಿತ ಅವಧಿಯವರೆಗೆ ಮಾತ್ರವಿರಲಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಹೊಸ ಆನ್‌ಲೈನ್ ಬುಕ್ಕಿಂಗ್ ಯೋಜನೆ ಆರಂಭಿಸಿದ ಹೀರೊ ಎಲೆಕ್ಟ್ರಿಕ್

ಈ ಯೋಜನೆಯ ಲಾಭವನ್ನು ಜೂನ್ 1ರಿಂದ ಜೂನ್ 20ರವರೆಗೆ ಮಾತ್ರ ಪಡೆಯಬಹುದು. ಈ ಬಗ್ಗೆ ಮಾತನಾಡಿರುವ ಹೀರೊ ಎಲೆಕ್ಟ್ರಿಕ್ ಸಿಇಒ ಸೊಹಿಂದರ್ ಗಿಲ್‌ರವರು ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಲಾಕ್‌ಡೌನ್ ಅವಧಿಯಲ್ಲಿ ಇಂಧನ ವಾಹನಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದ ಬಗ್ಗೆ ಕಂಡು ಬಂದಿದೆ ಎಂದು ಹೇಳಿದ್ದಾರೆ.

ಹೊಸ ಆನ್‌ಲೈನ್ ಬುಕ್ಕಿಂಗ್ ಯೋಜನೆ ಆರಂಭಿಸಿದ ಹೀರೊ ಎಲೆಕ್ಟ್ರಿಕ್

ಇಂಧನ ವಾಹನಗಳನ್ನು ಲಾಕ್‌ಡೌನ್‌ನಲ್ಲಿ ಬಳಸದಿದ್ದಾಗ ಪರಿಸರವು ಹೆಚ್ಚು ಸ್ವಚ್ವವಾಗಿತ್ತು. ಇದರಿಂದ ನಾವು ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿದಿದೆ. ಜನರನ್ನು ಎಲೆಕ್ಟ್ರಿಕ್ ವಾಹನಗಳತ್ತ ಆಕರ್ಷಿಸಲು ನಾವು ಈ ಅಭಿಯಾನವನ್ನು ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ.

Most Read Articles

Kannada
English summary
Hero electric introduces new online scheme to boost EV adoption in India. Read in Kannada.
Story first published: Wednesday, June 3, 2020, 17:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X