ಚಂದಾದಾರಿಕೆ ಯೋಜನೆಯನ್ನಾರಂಭಿಸಿದ ಹೀರೊ ಎಲೆಕ್ಟ್ರಿಕ್

ಹೀರೊ ಎಲೆಕ್ಟ್ರಿಕ್ ತನ್ನ ಸ್ಕೂಟರ್‌ಗಳನ್ನು ಗ್ರಾಹಕರಿಗೆ ಚಂದಾದಾರಿಕೆ ಯೋಜನೆಯಡಿಯಲ್ಲಿ ಮಾರಾಟ ಮಾಡಲು ಆಟೊವರ್ಟ್ ಟೆಕ್ನಾಲಜಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಮೂಲಕ ಹೀರೊ ಎಲೆಕ್ಟ್ರಿಕ್, ಸ್ಕೂಟರ್ ಖರೀದಿಗಾಗಿ ವಿವಿಧ ರೀತಿಯ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸಿದೆ.

ಚಂದಾದಾರಿಕೆ ಯೋಜನೆಯನ್ನಾರಂಭಿಸಿದ ಹೀರೊ ಎಲೆಕ್ಟ್ರಿಕ್

ಕಂಪನಿಯ ಈ ಚಂದಾದಾರಿಕೆ ಯೋಜನೆ ತಿಂಗಳಿಗೆ ರೂ.2,999 ದರದಲ್ಲಿ ಆರಂಭವಾಗಲಿದೆ. ಈ ಯೋಜನೆಯಡಿಯಲ್ಲಿ ಗ್ರಾಹಕರಿಗೆ ಸ್ಕೂಟರ್ ಮಾರಾಟದ ಜೊತೆಗೆ ಇನ್ಸ್ಯೂರೆನ್ಸ್, ಸರ್ವೀಸ್, ಮೆಂಟೆನೆನ್ಸ್, ಲಾಯಲ್ಟಿ ಬೋನಸ್ ಹಾಗೂ ಇನ್ನಿತರ ಫೀಚರ್ ಗಳನ್ನು ನೀಡಲಾಗುವುದು. ಹೀರೊ ಎಲೆಕ್ಟ್ರಿಕ್ ತನ್ನ ಗ್ರಾಹಕರಿಗಾಗಿ ಆಕರ್ಷಕ ರೆಫರಲ್ ಸ್ಕೀಮ್ ಅನ್ನು ಸಹ ಪರಿಚಯಿಸಿದೆ.

ಚಂದಾದಾರಿಕೆ ಯೋಜನೆಯನ್ನಾರಂಭಿಸಿದ ಹೀರೊ ಎಲೆಕ್ಟ್ರಿಕ್

ಈ ಯೋಜನೆಯಡಿಯಲ್ಲಿ ಹೀರೊ ಎಲೆಕ್ಟ್ರಿಕ್ ನ ಹೊಸ ಹಾಗೂ ಹಳೆಯ ಗ್ರಾಹಕರಿಗೆ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್ ಗಳನ್ನು ಖರೀದಿಸಲು ರಿಯಾಯಿತಿ ಕೊಡುಗೆಗಳನ್ನು ನೀಡಲಾಗುವುದು.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಚಂದಾದಾರಿಕೆ ಯೋಜನೆಯನ್ನಾರಂಭಿಸಿದ ಹೀರೊ ಎಲೆಕ್ಟ್ರಿಕ್

ಈ ಯೋಜನೆಯಡಿ ಹಾಲಿ ಗ್ರಾಹಕರಿಗೆ ಹೀರೊ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದರೆ ರೂ.2,000 ನಗದು ರಿಯಾಯಿತಿ ನೀಡಲಾಗುವುದು. ಹೊಸ ಗ್ರಾಹಕರು ಹಳೆಯ ಗ್ರಾಹಕರ ಮೂಲಕ ಹೀರೊ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದರೆ, ಹೊಸ ಸ್ಕೂಟರ್‌ ಮೇಲೆ ರೂ.2,000 ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತದೆ.

ಚಂದಾದಾರಿಕೆ ಯೋಜನೆಯನ್ನಾರಂಭಿಸಿದ ಹೀರೊ ಎಲೆಕ್ಟ್ರಿಕ್

ಹೀಗೆ ರೆಫರಲ್‌ ಮೂಲಕ ರೂ.4,000ಗಳವರೆಗೆ ಉಳಿತಾಯ ಮಾಡಬಹುದು. ಇದರ ಜೊತೆಗೆ ಹೀರೊ ಎಲೆಕ್ಟ್ರಿಕ್ ಕಂಪನಿಯ ಗ್ಲೈಡ್ ಇ-ಸ್ಕೂಟರ್ ಖರೀದಿಸುವ ಪ್ರತಿ 50ನೇ ಗ್ರಾಹಕರಿಗೆ ಉಚಿತ ಉಡುಗೊರೆ ನೀಡಲಾಗುವುದು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಚಂದಾದಾರಿಕೆ ಯೋಜನೆಯನ್ನಾರಂಭಿಸಿದ ಹೀರೊ ಎಲೆಕ್ಟ್ರಿಕ್

ವಾರ್ಷಿಕ ಬೆಳವಣಿಗೆಯ ದರದ ಪ್ರಕಾರ, ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯು ಪ್ರತಿ ವರ್ಷ 22%ನಷ್ಟು ಬೆಳೆಯುತ್ತಿದೆ. 2020ರ ಅಂತ್ಯದ ವೇಳೆಗೆ 3,42,000 ಎಲೆಕ್ಟ್ರಿಕ್ ವಾಹನಗಳು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗಲಿವೆ. ಲಾಕ್‌ಡೌನ್ ನಮ್ಮ ಸಾರಿಗೆ ವಿಧಾನವನ್ನು ಬದಲಿಸಲಿದೆ ಎಂದು ಕಂಪನಿ ಹೇಳಿದೆ.

ಚಂದಾದಾರಿಕೆ ಯೋಜನೆಯನ್ನಾರಂಭಿಸಿದ ಹೀರೊ ಎಲೆಕ್ಟ್ರಿಕ್

ಹೀರೊ ಎಲೆಕ್ಟ್ರಿಕ್ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಕಂಪನಿಯು ಪಂಜಾಬ್‌ನ ಲುಧಿಯಾನದಲ್ಲಿ ತನ್ನ ಉತ್ಪಾದನಾ ಘಟಕವನ್ನು ಹೊಂದಿದೆ. ಈ ಘಟಕದಲ್ಲಿ ಪ್ರತಿ ವರ್ಷ 1,00,000 ದ್ವಿಚಕ್ರ ವಾಹನಗಳನ್ನು ಉತ್ಪಾದಿಸಲಾಗುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಚಂದಾದಾರಿಕೆ ಯೋಜನೆಯನ್ನಾರಂಭಿಸಿದ ಹೀರೊ ಎಲೆಕ್ಟ್ರಿಕ್

ಹೀರೊ ಎಲೆಕ್ಟ್ರಿಕ್ ದೇಶಾದ್ಯಂತ 600ಕ್ಕೂ ಹೆಚ್ಚು ಶೋರೂಂ ಹಾಗೂ ಸರ್ವೀಸ್ ಸೆಂಟರ್ ಗಳನ್ನು ಹೊಂದಿದೆ. ಕಂಪನಿಯು ಕಳೆದ 12 ವರ್ಷಗಳಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸುತ್ತಿದ್ದು, ಇದುವರೆಗೂ 3 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ.

Most Read Articles

Kannada
English summary
Hero electric launches subscription scheme with auto work technology. Read in Kannada.
Story first published: Thursday, July 30, 2020, 18:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X