ಅತಿ ಕಡಿಮೆ ಬೆಲೆಯಲ್ಲಿ ಪ್ರತಿ ಚಾರ್ಜ್‌ಗೆ 210 ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಸ್ಕೂಟರ್

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹಲವು ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಮತ್ತೊಂದು ಹೊಸ ಮಾದರಿಯ ಹೈ ರೇಂಜ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ.

ಅತಿ ಕಡಿಮೆ ಬೆಲೆಯಲ್ಲಿ ಪ್ರತಿ ಚಾರ್ಜ್‌ಗೆ 210 ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಸ್ಕೂಟರ್

ಪ್ರಸ್ತುತ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಎಲೆಕ್ಟ್ರಿಕ್ ವಾಹನ ಮಾದರಿಗಳು ವ್ಯಯಕ್ತಿಕ ಬಳಕೆಗೆ ಮಾತ್ರ ಲಭ್ಯವಿದ್ದು, ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನ ಮಾದರಿಗಳು ಇನ್ನು ಅಷ್ಟಾಗಿ ಅಭಿವೃದ್ದಿಗೊಂಡಿಲ್ಲ. ಹೊಸ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ರೇಂಜ್ ಪ್ರಮಾಣವು ಬೆಲೆಗೆ ಅನುಗುಣವಾಗಿ ಮೈಲೇಜ್ ಸಾಮಾರ್ಥ್ಯವನ್ನು ಹೊಂದಿದ್ದು, ಕೈಗೆಟುಕುವ ಬೆಲೆಗೆ ಲಭ್ಯವಿರುವ ಎಲೆಕ್ಟ್ರಿಕ್ ವಾಹನಗಳು ಸಾಧಾರಣ ಮೈಲೇಜ್ ಹೊಂದಿದ್ದರೆ ಐಷಾರಾಮಿ ಫೀಚರ್ಸ್ ಹೊಂದಿರುವ ಎಲೆಕ್ಟ್ರಿಕ್ ವಾಹನಗಳು ದುಬಾರಿ ಬೆಲೆಯೊಂದಿಗೆ ಅಧಿಕ ಮಟ್ಟದ ಮೈಲೇಜ್ ಹಿಂದಿರುಗಿಸುವ ವೈಶಿಷ್ಟ್ಯತೆ ಹೊಂದಿವೆ.

ಅತಿ ಕಡಿಮೆ ಬೆಲೆಯಲ್ಲಿ ಪ್ರತಿ ಚಾರ್ಜ್‌ಗೆ 210 ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಸ್ಕೂಟರ್

ಇದೇ ಕಾರಣಕ್ಕೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಮಂದಗತಿ ಸಾಗಿದ್ದು, ಉತ್ತಮ ಮೈಲೇಜ್ ಹೊಂದಿರುವ ಇವಿ ವಾಹನಗಳು ಅತಿಯಾದ ಬೆಲೆ ಹೊಂದಿದ್ದರೆ ಕೈಗೆಟುಕುವ ಬೆಲೆಗೆ ಲಭ್ಯವಿರುವ ಇವಿ ವಾಹನಗಳಲ್ಲಿ ಸಾಧಾರಣ ಮಟ್ಟದ ಮೈಲೇಜ್ ಕಾರಣಕ್ಕೆ ಹೆಚ್ಚು ಜನಪ್ರಿಯವಾಗುತ್ತಿಲ್ಲ.

ಅತಿ ಕಡಿಮೆ ಬೆಲೆಯಲ್ಲಿ ಪ್ರತಿ ಚಾರ್ಜ್‌ಗೆ 210 ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಸ್ಕೂಟರ್

ಇದೇ ಕಾರಣಕ್ಕಾಗಿ ಹಲವಾರು ಮಾರುಕಟ್ಟೆ ಅಧ್ಯಯನಗಳನ್ನು ಕೈಗೊಂಡಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಬಜೆಟ್ ಬೆಲೆಯಲ್ಲೂ ಅತ್ಯುತ್ತಮ ಮೈಲೇಜ್ ಹೊಂದಿರುವ ಇವಿ ವಾಹನಗಳನ್ನು ಅಭಿವೃದ್ದಿಗೊಳಿಸುತ್ತಿದ್ದು, ಗ್ರಾಹಕರ ಆದ್ಯತೆ ಮೇರೆಗೆ ಹೊಸ ಇವಿ ವಾಹನಗಳನ್ನು ಅಭಿವೃದ್ದಿಗೊಳಿಸುತ್ತಿದೆ.

ಅತಿ ಕಡಿಮೆ ಬೆಲೆಯಲ್ಲಿ ಪ್ರತಿ ಚಾರ್ಜ್‌ಗೆ 210 ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಸ್ಕೂಟರ್

ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವಾರು ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟ ಹೊಂದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಇದೀಗ ಹೊಸ ವಿನ್ಯಾಸದ ಮತ್ತು ಹೆಚ್ಚು ಮೈಲೇಜ್ ಹೊಂದಿರುವ ಎನ್‌ವೈಎಕ್ಸ್-ಹೆಚ್ಎಕ್ಸ್ ಇವಿ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 64,640 ಬೆಲೆ ಪಡೆದುಕೊಂಡಿದೆ.

ಅತಿ ಕಡಿಮೆ ಬೆಲೆಯಲ್ಲಿ ಪ್ರತಿ ಚಾರ್ಜ್‌ಗೆ 210 ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಸ್ಕೂಟರ್

ಹೀರೋ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಕರ್ಮಿಷಿಯಲ್ ಬಳಕೆಯ ಉದ್ದೇಶಗಳಿಗೆ ಬಿಡುಗಡೆ ಮಾಡಿದ್ದು, ಬಿಜಿನೆಸ್ ಟು ಬಿಜಿನೆಸ್(ಬಿಟುಬಿ) ಉದ್ದೇಶಗಳಿಗೆ ಬಿಡುಗಡೆಯಾಗಿರುವ ಎನ್‌ವೈಎಕ್ಸ್-ಹೆಚ್ಎಕ್ಸ್ ಇವಿ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 210 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಅತಿ ಕಡಿಮೆ ಬೆಲೆಯಲ್ಲಿ ಪ್ರತಿ ಚಾರ್ಜ್‌ಗೆ 210 ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಸ್ಕೂಟರ್

ಎನ್‌ವೈಎಕ್ಸ್-ಹೆಚ್ಎಕ್ಸ್ ಇವಿ ಸ್ಕೂಟರ್ ಬ್ಯಾಟರಿ ರೇಂಜ್ ವಿಸ್ತರಿಸಲು ಮಾಡ್ಯುಲರ್ ಬ್ಯಾಟರಿ ವ್ಯವಸ್ಥೆಯೊಂದಿಗೆ ಸ್ವ್ಯಾಪಿಂಗ್ ಆಯ್ಕೆಯನ್ನು ನೀಡಲಾಗಿದ್ದು, ವ್ಯಯಕ್ತಿಕ ಬಳಕೆಗೆ ಮಾತ್ರವಲ್ಲ ವಾಣಿಜ್ಯ ಬಳಕೆಯ ವಾಹನಗಳ ವಿಭಾಗದಲ್ಲೂ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ಇವು ಸಹಕಾರಿಯಾಗಿವೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಅತಿ ಕಡಿಮೆ ಬೆಲೆಯಲ್ಲಿ ಪ್ರತಿ ಚಾರ್ಜ್‌ಗೆ 210 ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಸ್ಕೂಟರ್

ಇ-ಕಾರ್ಮರ್ಸ್ ಮತ್ತು ಆಹಾರ ಉದ್ಯಮಗಳಲ್ಲಿನ ಕಾರ್ಯಚರಣೆಯಲ್ಲಿ ಡೆಲಿವರಿಗಾಗಿ ವಿವಿಧ ಮಾದರಿಯ ವಾಹನಗಳು ಬಳಕೆಯಾಗುತ್ತಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಹೀರೋ ಎನ್‌ವೈಎಕ್ಸ್-ಹೆಚ್ಎಕ್ಸ್ ಇವಿ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಉದ್ಯಮ ವ್ಯವಹಾರಗಳಲ್ಲಿ ಬೇಡಿಕೆ ಪೂರೈಸಲು ಶಕ್ತವಾಗಿದೆ.

ಅತಿ ಕಡಿಮೆ ಬೆಲೆಯಲ್ಲಿ ಪ್ರತಿ ಚಾರ್ಜ್‌ಗೆ 210 ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಸ್ಕೂಟರ್

ಜೊತೆಗೆ ಲಾಸ್ಟ್ ಮೈಲ್ ಡೆಲಿವರಿಗಾಗಿ ಹೊಸ ಎಲೆಕ್ಟ್ಕಿಕ್ ಸ್ಕೂಟರ್ ಮಾದರಿಯನ್ನು ಹತ್ತು ವಿಭಿನ್ನ ರೀತಿಯಲ್ಲಿ ಮಾಡಿಫೈಗೊಳಿಸಬಹುದಾದ ಆಯ್ಕೆಯನ್ನು ಸಹ ನೀಡಲಾಗಿದ್ದು, ಸುಲಭವಾಗಿ ಸರಕು ಸಾಗಿಸಲು ಅನುವು ಮಾಡಿಕೊಡುತ್ತದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಅತಿ ಕಡಿಮೆ ಬೆಲೆಯಲ್ಲಿ ಪ್ರತಿ ಚಾರ್ಜ್‌ಗೆ 210 ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಸ್ಕೂಟರ್

ಇದಲ್ಲದೆ ಹೆಚ್ಚಿನ ಮಟ್ಟದ ಇವಿ ಸ್ಕೂಟರ್ ಖರೀದಿಸುವ ಉದ್ಯಮ ಸಂಸ್ಥೆಗಳಿಗೆ ಅತಿ ಸುಲಭವಾದ ಚಾರ್ಜಿಂಗ್ ಪಾಯಿಂಟ್‌ಗಳ ವ್ಯವಸ್ಥೆಯನ್ನು ಕಂಪನಿಯೇ ಅಳವಡಿಸಿಕೊಡಲಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲಿ ಸ್ಮಾರ್ಟ್‌ಫೋನ್ ಕನೆಕ್ವಿಟಿ, ರಿಮೋಟ್ ಕಂಟ್ರೋಲ್, ಕಾಂಬಿ ಬ್ರೇಕಿಂಗ್ ಸಿಸ್ಟಂನೊಂದಿಗೆ ಉದ್ಯಮ ವ್ಯವಹಾರಗಳ ಕಾರ್ಯಾಚರಣೆ ವೆಚ್ಚವನ್ನು ತಗ್ಗಿಸಲು ಸಾಕಷ್ಟು ಸಹಕಾರಿಯಾಗಿವೆ.

Most Read Articles

Kannada
English summary
Hero Electric NYX-HX Commercial e-Scooter Launched With 210Km Range.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X