YouTube

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೀರೊ ಮೊದಲ ಎಲೆಕ್ಟ್ರಿಕ್ ಬೈಕ್

ಭಾರತದ ದ್ವಿ ಚಕ್ರ ವಾಹನ ತಯಾರಕ ಕಂಪನಿಯಾದ ಹೀರೊ ಮೋಟೊಕಾರ್ಪ್ ದೇಶಿಯ ಮಾರುಕಟ್ಟೆಯ ಬೈಕ್‍‍ಗಳ ಮಾರಾಟದಲ್ಲಿ ಅಗ್ರಸ್ಥಾನವನ್ನು ಹೊಂದಿದೆ. ಹೀರೊ ಮೋಟೊಕಾರ್ಪ್ ಸದ್ಯಕ್ಕೆ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಮಾರಾಟ ಮಾಡುತ್ತಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೀರೊ ಮೊದಲ ಎಲೆಕ್ಟ್ರಿಕ್ ಬೈಕ್

ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಮನಗೊಂಡಿರುವ ಹೀರೊ ಮೋಟೊಕಾರ್ಪ್ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಹೀರೊ ಮೋಟೊಕಾರ್ಪ್ ಅಭಿವೃದ್ಧಿಪಡಿಸುತ್ತಿರುವ ಎಲೆಕ್ಟ್ರಿಕ್ ಬೈಕ್ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೀರೊ ಮೊದಲ ಎಲೆಕ್ಟ್ರಿಕ್ ಬೈಕ್

ಈ ಎಲೆಕ್ಟ್ರಿಕ್ ಬೈಕ್ ಅನ್ನು ಶೋರೂಂಗಳಿಗೆ ತಂದು ಅದನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸಲಾಗುವುದೆಂಬ ಊಹಾಪೋಹಾಗಳಿದ್ದವು. ಆದರೆ ಈ ಬೈಕ್ ಅನ್ನು ಸ್ಪಾಟ್ ಟೆಸ್ಟ್ ಮಾಡುವಾಗ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಚಿತ್ರಗಳನ್ನು ಕಾರ್ ಅಂಡ್ ಬೈಕ್ ಪ್ರಕಟಿಸಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೀರೊ ಮೊದಲ ಎಲೆಕ್ಟ್ರಿಕ್ ಬೈಕ್

ಕ್ಯಾಮರಾದಲ್ಲಿ ಸೆರೆಯಾಗಿರುವ ಹೀರೊ ಎಲೆಕ್ಟ್ರಿಕ್ ಬೈಕಿನ ಚಿತ್ರಗಳು ಇಂಟರ್‍‍ನೆಟ್‍‍ನಲ್ಲಿ ವೈರಲ್ ಆಗಿವೆ. ಹೀರೊ ಮೋಟೊಕಾರ್ಪ್ ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಅನ್ನು ಮುಂದಿನ ತಿಂಗಳು ನಡೆಯಲಿರುವ 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೀರೊ ಮೊದಲ ಎಲೆಕ್ಟ್ರಿಕ್ ಬೈಕ್

ಸ್ಪೈ ಚಿತ್ರಗಳಲ್ಲಿರುವ ಈ ಬೈಕ್, ನೇಕೆಡ್ ಸ್ಟ್ರೀಟ್ ಬೈಕ್‍‍ನಂತೆ ಕಾಣುತ್ತದೆ. ಈ ಬೈಕ್ 150 ಸಿಸಿ ಅಥವಾ 160 ಸಿಸಿಯ ಎಂಜಿನ್ ಹೊಂದಿರಬಹುದು. ಈ ಕಾರಣಕ್ಕೆ ಈ ಬೈಕ್ ಎಲೆಕ್ಟ್ರಿಕ್ ಬೈಕ್ ಸೆಗ್‍‍ಮೆಂಟಿನಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡುವ ಸಾಧ್ಯತೆಗಳಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೀರೊ ಮೊದಲ ಎಲೆಕ್ಟ್ರಿಕ್ ಬೈಕ್

ಹೀರೊ ಮೋಟೊಕಾರ್ಪ್ ಬೈಕ್‍‍ಗಳು ಪೆಟ್ರೋಲ್ ದ್ವಿ ಚಕ್ರವಾಹನದ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವಂತೆ ಈ ಎಲೆಕ್ಟ್ರಿಕ್ ಬೈಕ್ ಸಹ, ಎಲೆಕ್ಟ್ರಿಕ್ ಬೈಕ್‍‍ಗಳ ಮಾರುಕಟ್ಟೆಯಲ್ಲಿ ಜನಪ್ರಿಯವಾಗುವ ಸಾಧ್ಯತೆಗಳಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೀರೊ ಮೊದಲ ಎಲೆಕ್ಟ್ರಿಕ್ ಬೈಕ್

ಈ ಬೈಕಿನಲ್ಲಿರುವ ಫೀಚರ್ ಹಾಗೂ ಬ್ಯಾಟರಿ ಸಾಮರ್ಥ್ಯದ ಬಗೆಗಿನ ಮಾಹಿತಿಯನ್ನು ರಹಸ್ಯವಾಗಿಡಲಾಗಿದೆ. ಈ ಮಾಹಿತಿಯನ್ನು ಆಟೋ ಎಕ್ಸ್ ಪೋದಲ್ಲಿ ಬಹಿರಂಗಪಡಿಸುವ ನಿರೀಕ್ಷೆಗಳಿವೆ. ಈ ಬೈಕಿನ ಕೆಲವು ಮಾಹಿತಿಯನ್ನು ಮಾತ್ರ ಬಹಿರಂಗಪಡಿಸಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೀರೊ ಮೊದಲ ಎಲೆಕ್ಟ್ರಿಕ್ ಬೈಕ್

ಈ ಮಾಹಿತಿಯ ಪ್ರಕಾರ ಈ ಬೈಕ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 120 ಕಿ.ಮೀವರೆಗೂ ಚಲಿಸುತ್ತದೆ. ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 80 ಕಿ.ಮೀಗಳಾಗಿದೆ. ಹೀರೊ ಎಲೆಕ್ಟ್ರಿಕ್ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.1.5 ಲಕ್ಷಗಳಾಗುವ ಸಾಧ್ಯತೆಗಳಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೀರೊ ಮೊದಲ ಎಲೆಕ್ಟ್ರಿಕ್ ಬೈಕ್

ಈ ಎಲೆಕ್ಟ್ರಿಕ್ ಬೈಕ್ ಈ ಬೆಲೆಯಲ್ಲಿ ಮಾರಾಟವಾಗುವ ರೆಗ್ಯುಲರ್ ನೇಕೆಡ್ ಬೈಕಿನ ಬೆಲೆಯನ್ನು ಹೊಂದಿದೆ. ನಾರ್ಮಲ್ ಬೈಕ್‍‍‍ಗಳ ರೀತಿಯಲ್ಲಿ ಕಾಣಲಿ ಎಂಬ ಉದ್ದೇಶದಿಂದ ಈ ಬೈಕಿನಲ್ಲಿ ಫ್ಯೂಯಲ್ ಟ್ಯಾಂಕ್ ಸಹ ನೀಡಲಾಗುತ್ತದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೀರೊ ಮೊದಲ ಎಲೆಕ್ಟ್ರಿಕ್ ಬೈಕ್

ಇದರ ಜೊತೆಗೆ ಸ್ಪ್ಲಿಟ್ ಸೀಟ್, ಅಲಾಯ್ ವ್ಹೀಲ್ ಹಾಗೂ ಸಸ್ಪೆಂಷನ್‍‍ಗಳಿಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳನ್ನು ನೀಡಲಾಗುತ್ತದೆ. ಈ ಎಲೆಕ್ಟ್ರಿಕ್ ಬೈಕ್ ಇನ್ಸ್ ಟ್ರೂಮೆಂಟ್ ಕಂಸೊಲ್, ರಿಮೋಟ್ ಡಯಾಗ್ನಾಸ್ಟಿಕ್, ನ್ಯಾವಿಗೇಶನ್ ಹಾಗೂ ಸ್ಮಾರ್ಟ್ ಫೋನ್ ಕನೆಕ್ಟಿವಿಟಿಗಳನ್ನು ಹೊಂದಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೀರೊ ಮೊದಲ ಎಲೆಕ್ಟ್ರಿಕ್ ಬೈಕ್

ಈ ಎಲೆಕ್ಟ್ರಿಕ್ ಬೈಕ್ ಅನ್ನು ಪಂಜಾಬ್‍‍ನ ಲೂಧಿಯಾನಾದಲ್ಲಿರುವ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತದೆ. ಈ ಘಟಕವು ವರ್ಷಕ್ಕೆ 1 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀರೊ ಕಂಪನಿಯ ಪ್ರತಿಯೊಂದು ಎಲೆಕ್ಟ್ರಿಕ್ ವಾಹನಗಳನ್ನು ಈ ಘಟಕದಲ್ಲಿಯೇ ಉತ್ಪಾದಿಸಲಾಗುತ್ತದೆ. ಇಲ್ಲಿ ತಯಾರಾದ ವಾಹನಗಳನ್ನು ಈಗ ಮಾರಾಟ ಮಾಡಲಾಗುತ್ತಿದೆ.

Most Read Articles

Kannada
English summary
Hero first electric bike spied for the first time. Read in Kannada.
Story first published: Wednesday, January 29, 2020, 15:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X